HOME » NEWS » National-international » COVID 19 WAVE LASHING INDIA THE SANJEEVANI CAMPAIGN IS EXACTLY WHAT THE NATION NEEDS RIGHT NOW ZP

‘Sanjeevani – A Shot Of Life’: ಕೊರೋನಾ ಎರಡನೇ ಅಲೆ: ಸಂಜೀವನಿ ಅಭಿಯಾನವು ಏಕೆ ಅಗತ್ಯ ಎಂಬುದನ್ನು ತಿಳಿದುಕೊಳ್ಳಿ..!

ಅಲ್ಲದೆ ಅಲ್ಲಿ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಅಭಿಯಾನದ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಅಮೃತಸರ, ನಾಸಿಕ್, ಇಂದೋರ್, ಗುಂಟೂರು ಮತ್ತು ದಕ್ಷಿಣ ಕನ್ನಡ ಸೇರಿರುವುದು ವಿಶೇಷ.

news18-kannada
Updated:April 6, 2021, 10:39 PM IST
‘Sanjeevani – A Shot Of Life’: ಕೊರೋನಾ ಎರಡನೇ ಅಲೆ: ಸಂಜೀವನಿ ಅಭಿಯಾನವು ಏಕೆ ಅಗತ್ಯ ಎಂಬುದನ್ನು ತಿಳಿದುಕೊಳ್ಳಿ..!
‘Sanjeevani – A Shot Of Life’
  • Share this:
ಸಾಂಕ್ರಾಮಿಕ ರೋಗ ಕೊರೋನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ. ಅದರಲ್ಲೂ ಕೋವಿಡ್-19 ಎರಡನೇ ಅಲೆಯು ರಾಜ್ಯ ಮತ್ತು ನಗರಗಳಲ್ಲಿ ಹೊಸ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಕೊರೋನಾ ಎರಡನೇ ಅಲೆಯಿಂದ ಪ್ರಕರಣಗಳು ಹೆಚ್ಚಾಗಿದ್ದು, ಇದು ಕಳೆದ ಬಾರಿಗಿಂತ ಹೆಚ್ಚಿನ ಸಾವು ನೋವನ್ನು ಉಂಟು ಮಾಡುವ ಸಾಧ್ಯತೆಯಿದೆ. ಇದಾಗ್ಯೂ ಕೊರೋನಾ ಎರಡನೇ ಅಲೆಯನ್ನು ತಡೆಗಟ್ಟಲು ಇರುವ ಏಕೈಕ ಪರಿಣಾಮಕಾರಿ ಮಾರ್ಗವೆಂದರೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ನೀಡುವುದು.

ಇದಕ್ಕಾಗಿಯೇ ಇದೀಗ ನೆಟ್‌ವರ್ಕ್ 18 ‘ಸಂಜೀವನಿ - ಎ ಶಾಟ್ ಆಫ್ ಲೈಫ್’ ಎಂಬ ಅಭಿಯಾನವನ್ನು ಆರಂಭಿಸಿದೆ. ದೇಶದ ಎಲ್ಲಾ ಜಿಲ್ಲೆಗಳಿಗೂ, ಎಲ್ಲಾ ಮೂಲೆಗಳು ಕೋವಿಡ್ ಲಸಿಕೆ ತಲುಪುವಂತೆ ಮಾಡುವುದು ಈ ಅಭಿಯಾನದ ಉದ್ದೇಶ. ಜನರು ಕೂಡ ವ್ಯಾಕ್ಸಿನೇಷನ್​ನ ಅಗತ್ಯತೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಭಾರತದಲ್ಲಿ ಕೋವಿಡ್ -19 ವೈರಸ್‌ನ ವೇಗವಾಗಿ ರೂಪಾಂತರಗೊಳ್ಳುವ ಡಬಲ್-ಸ್ಟ್ರೈನ್ ಅಲೆಯು ಅಸ್ತಿತ್ವದಲ್ಲಿದೆ ಎಂದು ತಜ್ಞರು ಖಚಿತಪಡಿಸಿದ್ದಾರೆ.ಹೆಚ್ಚಿನ ಪ್ರಮಾಣದ ಸೋಂಕು ಕಂಡು ಬಂದ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಈ ರೂಪಾಂತರಗಳನ್ನು ದೃಢಪಡಿಸಿರುವುದಾಗಿ ವರದಿಯಾಗಿದೆ.

‘Sanjeevani – A Shot Of Life’


ಇದಾಗ್ಯೂ ಭಾರತದಲ್ಲಿ ಲಸಿಕೆ ಅಭಿಯಾನದ ನಿಧಾನಗತಿ ಮತ್ತು ಎರಡನೇ ಅಲೆಯುವ ಫೆಬ್ರವರಿ ಮಧ್ಯದಲ್ಲಿ ಸಂಭವಿಸಿರುವುದರಿಂದ ಅಲ್ಪಾವಧಿಯಲ್ಲಿಯೇ ಲಕ್ಷಾಂತರ ಜನರು ಸೋಂಕಿಗೆ ಒಳಗಾಗುವಂತೆ ಮಾಡಿದೆ. ಕೊರೋನಾ ಮೊದಲ ಅಲೆಯನ್ನುಪರಿಣಾಮಕಾರಿಯಾಗಿ ನಿರ್ವಹಿಸಿದ್ದ ಭಾರತವನ್ನು ಪ್ರಶಂಸಿಸಲಾಯಿತು. ಅಲ್ಲದೆ ಆರ್ಥಿಕತೆಯನ್ನು ಮತ್ತೆ ಮರಳಿ ಪಡೆಯುವತ್ತ ಹೊರಟಿತ್ತು. ಆದರೀಗ ಎರಡನೇ ಅಲೆಯು ರಾಷ್ಟ್ರದಾದ್ಯಂತ ಲಾಕ್‌ಡೌನ್‌ಗಳ ಅಪಾಯವನ್ನು ಹೆಚ್ಚಿಸಿದೆ.

ಆದಾಗ್ಯೂ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಏಕೈಕ ಪ್ರತಿಕ್ರಿಯೆಯಾಗಿ ಕಳೆದ ವರ್ಷಕ್ಕಿಂತ ಈ ಬಾರಿ ದೊಡ್ಡ ಅಸ್ತ್ರವೊಂದನ್ನು ಹೊಂದಿದ್ದೇವೆ. ಹೌದು, ಅದುವೇ ಕೊರೋನಾ ಲಸಿಕೆ.
ಸಂಜೀವನಿ ಅಭಿಯಾನ ಕೂಡ ಕೋವಿಡ್ -19 ರ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಮಾಡುವುದಾಗಿದೆ.

ಇನ್ನು ನೆಟ್​ವರ್ಕ್​ 18 ಅಭಿಯಾನವನ್ನು ಸಂಜೀವನಿ - ಎ ಶಾಟ್ ಅಟ್ ಲೈಫ್ ಎಂದು ಕರೆಯಲಾಗಿದ್ದು, ಈ ಅಭಿಯಾನಕ್ಕೆ ಫೆಡರಲ್ ಬ್ಯಾಂಕ್ ಸಿಎಸ್ಆರ್ ಹಾಗೂ ಆರೋಗ್ಯ ತಜ್ಞರಾಗಿ ಅಪೊಲೊ 24/7 ಕೈ ಜೋಡಿಸಿದೆ.ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನದಂದು ಅಭಿಯಾನ ಪ್ರಾರಂಭವಾಗಲಿದ್ದು, ಬಾಲಿವುಡ್​ ನಟ ಸೋನು ಸೂದ್ ಅವರು ಈ ಮಹತ್ವಾಕಾಂಕ್ಷೆಯ ಅಭಿಮಾನದ ರಾಯಭಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘Sanjeevani – A Shot Of Life’


ಅಮೃತಸರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ‘ಸಂಜೀವನಿ ಗಾಡಿ’ ವಾಹನಕ್ಕೆ ಫ್ಲ್ಯಾಗ್ ಆಫ್ ಮಾಡಲಾಗುತ್ತದೆ. ಈ ವಾಹನವು ಫೆಡರಲ್ ಬ್ಯಾಂಕ್ ಅಳವಡಿಸಿಕೊಂಡ ಐದು ಜಿಲ್ಲೆಗಳಲ್ಲಿ ಸುಮಾರು 1500 ಹಳ್ಳಿಗಳಿಗೆ ಭೇಟಿ ನೀಡಲಿದೆ. ಅಲ್ಲದೆ ಅಲ್ಲಿ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಈ ಅಭಿಯಾನದ ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಅಮೃತಸರ, ನಾಸಿಕ್, ಇಂದೋರ್, ಗುಂಟೂರು ಮತ್ತು ದಕ್ಷಿಣ ಕನ್ನಡ ಸೇರಿರುವುದು ವಿಶೇಷ.

ಆರಂಭದಲ್ಲಿ ಕೊರೋನಾ ಎರಡನೇ ಅಲೆ ಹೆಚ್ಚಾಗಿರುವ ಜಿಲ್ಲೆಗಳನ್ನು ಕೇಂದ್ರೀಕರಿಸಲಾಗಿದ್ದು, ಈ ಪ್ರದೇಶಗಳಲ್ಲಿ ನೆಟ್​ವರ್ಕ್​ 18 ರ ‘ಸಂಜೀವನಿ - ಎ ಶಾಟ್ ಆಫ್ ಲೈಫ್’ ಅಭಿಯಾನ ಶುರುವಾಗಲಿದೆ. ಈ ಮೂಲಕ ಸರ್ಕಾರವು ಕಾರ್ಪೊರೇಟ್, ಎನ್‌ಜಿಒ ಮತ್ತು ಆಸ್ಪತ್ರೆಗಳನ್ನು ಅವಲಂಬಿಸಿ ಭಾರತದ ವ್ಯಾಕ್ಸಿನೇಷನ್ ವ್ಯವಸ್ಥೆಯನ್ನು ಉತ್ತೇಜಿಸಲು ಮುಂದಾಗಿದೆ. ಈ ಅಭಿಯಾನದ ಮೂಲಕ ಮೂರನೇ ಅಲೆ ಶುರುವಾಗುವ ಮುನ್ನವೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ. ಈ ಮೂಲಕ ಮುಂದೆ ಯಾವುದೇ ಭಯವಿಲ್ಲದೆ ಎಲ್ಲವನ್ನು ಎದುರಿಸುವ ದೃಢ ಸಂಕಲ್ಪ ಮಾಡಲಾಗಿದೆ.

ಪ್ರತಿದಿನ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ವರದಿಯಾಗುತ್ತಿದ್ದು, ಎರಡನೇ ತರಂಗದ ಸೋಂಕನ್ನು ತಡೆಯುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸುವುದಾಗಿದೆ. ಇದೀಗ ಸಂಜೀವನಿ ಅಭಿಯಾನದ ಮೂಲಕ ಅದು ಕಾರ್ಯರೂಪಕ್ಕೆ ಬರಲಿದ್ದು, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿ. #Sanjeevani #LagayaKya
Published by: zahir
First published: April 6, 2021, 10:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories