ದೇಶದ ಕೋವಿಡ್-19 (Covid - 19) ಪರಿಸ್ಥಿತಿಯನ್ನು ನಿರ್ಣಯಿಸಲು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಕೇರಳ, ದೆಹಲಿ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಕೋವಿಡ್ -19 ತ್ವರಿತ ಏರಿಕೆಯನ್ನು ತಡೆಕಟ್ಟುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಗಳ (Report) ಮೂಲಕ ತಿಳಿದುಬಂದಿದೆ. ಈ ಪಟ್ಟಿಯಲ್ಲಿ ರಾಜಸ್ಥಾನವು (Rajasthan) ಸೇರಿದೆ. ಎಂಟು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳ. ಧನಾತ್ಮಕ ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳ ಮತ್ತು ದೇಶದಲ್ಲಿ ನಡೆಯುತ್ತಿರುವ ಪರೀಕ್ಷೆಯ ಸ್ಥಿತಿಯು ಕೋವಿಡ್‌ನ ಪರಿಸ್ಥಿತಿಯನ್ನು ಸಹ ಎತ್ತಿ ತೋರಿಸುತ್ತಿದೆ.
ಈ ಎಂಟು ರಾಜ್ಯಗಳಲ್ಲಿನ ಸಕ್ರಿಯ ಪ್ರಕರಣಗಳನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಸರಿಸುಮಾರು 92% ಪ್ರಕರಣಗಳು ಹೋಮ್ ಐಸೋಲೇಶನ್‌ನಲ್ಲಿವೆ ಎಂದು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ. ಭಾರತದಲ್ಲಿ, ಕಳೆದ 24 ಗಂಟೆಗಳಲ್ಲಿ ಒಟ್ಟು 1,784 ಚೇತರಿಕೆಗಳು ವರದಿಯಾಗಿದ್ದು, ಒಟ್ಟು ಚೇತರಿಕೆಯ ಸಂಖ್ಯೆಯು 4,4173,335 ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಹಂಚಿಕೊಂಡ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಬುಧವಾರ 1,757 ಹೊಸ ಕೋವಿಡ್-19 ಪ್ರಕರಣಗಳು 28.63% ಪಾಸಿಟಿವಿಟಿ ದರದೊಂದಿಗೆ ಆರು ಸಾವುಗಳು ದಾಖಲಾಗಿದೆ.
ರಾಷ್ಟ್ರೀಯ ರಾಜಧಾನಿ, ಮಂಗಳವಾರ 1,537 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ, ಧನಾತ್ಮಕ ದರವು 26.54 ಶೇಕಡಾ ಇದ್ದು ದೆಹಲಿಯಲ್ಲಿ ಸೋಮವಾರ 1,017 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಅಷ್ಟಕ್ಕೂ ಕಳೆದ 15 ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಇದು ಎಂದು ವರದಿಗಳು ಪ್ರಕಟಿಸಿವೆ.
ಮಹಾರಾಷ್ಟ್ರ ರಾಜ್ಯದಲ್ಲಿ ಬುಧವಾರ 1,100 ಹೊಸ ಕರೋನವೈರಸ್ ಸೋಂಕುಗಳು ಮತ್ತು ನಾಲ್ಕು ಸಾವುಗಳು ದಾಖಲಾಗಿವೆ ಹಾಗೂ ರಾಜ್ಯದಲ್ಲಿ ಈಗ 6,102 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಇಂದೇ ಸರ್ಕಾರಿ ಬಂಗಲೆ ಖಾಲಿ ಮಾಡಲಿದ್ದಾರೆ ರಾಹುಲ್! ಮುಂದಿನ ಪಯಣ ಎಲ್ಲಿಗೆ ಗೊತ್ತಾ?
ಸಭೆಯು ದೇಶದ ಆರೋಗ್ಯ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್, ಔಷಧಿಗಳು, ಲಸಿಕೆ ಅಭಿಯಾನಗಳು ಮತ್ತು ಕೋವಿಡ್ ಪ್ರಕರಣಗಳ ಇತ್ತೀಚಿನ ಉಲ್ಬಣವನ್ನು ಎದುರಿಸಲು ಪ್ರಮುಖ ಅಗತ್ಯ ಕ್ರಮಗಳ ಸನ್ನದ್ಧತೆಯ ಮೇಲೆ ಕೇಂದ್ರೀಕರಿಸಿದೆ ಪಿಎಂಒ ಹೇಳಿಕೆಯನ್ನು ನೀಡಿದೆ.
"ಡಾ. ಪಿ.ಕೆ. ಮಿಶ್ರಾ ಅವರು ಸಮಯ-ಪರೀಕ್ಷಿತ 5-ಪಟ್ಟು ಕಾರ್ಯತಂತ್ರದ ಟೆಸ್ಟ್-ಟ್ರೇಸ್-ಟ್ರೀಟ್-ವ್ಯಾಕ್ಸಿನೇಟ್ ಮತ್ತು ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆಯನ್ನು ಮುಂದುವರೆಸುವ ಅಗತ್ಯವಿದೆ ಎಂದು ಒತ್ತಿಹೇಳಿದರು.
ಇದು ಕೋವಿಡ್-ಸೂಕ್ತ ನಡವಳಿಕೆಯ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮತ್ತು ಕೋವಿಡ್‌ನಿಂದ ಆಗುವ ಸಮಸ್ಯೆಗಳನ್ನು ನೆನಪಿಸಲು ಅಷ್ಟೇ ನಿರ್ಣಾಯಕವಾಗಿದೆ. ನಾಗರಿಕರು ಜಾಗೃತಿಯಿಂದ ಇರಬೇಕು” ಎಂದು ಪಿಎಮ್‌ಒ ಹೇಳಿಕೆ ನೀಡಿದೆ.
ಸಭೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ಭೂಷಣ್ ಅವರು ಜಾಗತಿಕ ಕೋವಿಡ್-19 ಪರಿಸ್ಥಿತಿಯ ಆಗುಹೋಗುಗಳನ್ನು ವಿವರಿಸಿದ್ದಾರೆ.
ಭೂಷಣ್ ಅವರು ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಒತ್ತಿ ಹೇಳಿದರು, ಹೆಚ್ಚಿನ ಪ್ರಕರಣಗಳು ಎಂಟು ರಾಜ್ಯಗಳಲ್ಲಿ ವರದಿಯಾಗಿವೆ; ಕೇರಳ, ದೆಹಲಿ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ರಾಜಸ್ಥಾನ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪ್ರಾಣಿಗಳಿಗೂ ತಟ್ಟಿದ ಆರ್ಥಿಕ ಬಿಕ್ಕಟ್ಟು, ಮೃಗಾಲಯಗಳನ್ನೇ ಮುಚ್ಚಲು ಸಜ್ಜಾದ ಸರ್ಕಾರ!
ಅಲ್ಲದೆ, ದೇಶದಲ್ಲಿ ನಡೆಯುತ್ತಿರುವ ಪರೀಕ್ಷೆಯ ಸ್ಥಿತಿಯೊಂದಿಗೆ ಧನಾತ್ಮಕ ದರಗಳಲ್ಲಿ ಹಠಾತ್ ಹೆಚ್ಚಳವನ್ನು ಎತ್ತಿ ತೋರಿಸಲಾಗಿದೆ. ಈ ಎಂಟು ರಾಜ್ಯಗಳಲ್ಲಿನ ಸಕ್ರಿಯ ಪ್ರಕರಣಗಳನ್ನು ವಿವರವಾಗಿ ವಿಶ್ಲೇಷಿಸಲಾಗಿದೆ. ಸರಿಸುಮಾರು 92% ಪ್ರಕರಣಗಳು ಹೋಮ್ ಐಸೋಲೇಶನ್‌ನಲ್ಲಿವೆ ಎಂದು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.
ಪ್ರಸ್ತುತಿಯು ಜನವರಿ 2023 ರಿಂದ ವಿಭಿನ್ನ ರೂಪಾಂತರಗಳ ಜೀನೋಮ್ ಅನುಕ್ರಮವನ್ನು ವಿವರಿಸಿದೆ, ಭಾರತದಲ್ಲಿ ಪ್ರಚಲಿತದಲ್ಲಿರುವ ರೂಪಾಂತರಗಳ ಪ್ರಮಾಣವನ್ನು ಗಮನಿಸಿದೆ.
ಅಲ್ಲದೆ ಸಭೆಯಲ್ಲಿ ವ್ಯಾಕ್ಸಿನೇಷನ್‌ಗಳ ಸ್ಥಿತಿಯನ್ನು ಚರ್ಚಿಸಲಾಯಿತು, ನಂತರ ದೇಶಾದ್ಯಂತ ಔಷಧ ಪೂರೈಕೆ ಮತ್ತು ಮೂಲಸೌಕರ್ಯ ಸಿದ್ಧತೆಗಳನ್ನು ಚರ್ಚಿಸಲಾಗಿದೆ ಎಂದು ಪಿಎಮ್‌ಒ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ