ಕೊರೊನಾ ಕಾಲದಲ್ಲಿ ಪ್ರಯಾಣಿಸಲು ಭಾರತೀಯರಿಗೆ ಗ್ರೀನ್ ಸಿಗ್ನಲ್ ನೀಡಿದೆ ಈ ದೇಶಗಳು

ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ಕೆಲವೊಂದು ನಿಬಂಧನೆಗಳೊಂದಿಗೆ ನೀವು ಹೊರದೇಶಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು. ಹಾಗಿದ್ದರೆ ಭಾರತಕ್ಕೆ ಆಹ್ವಾನವನ್ನು ನೀಡಿರುವ ದೇಶಗಳು ಯಾವುವು ಎಂಬುದನ್ನು ನೋಡೋಣ.

Falcon 10X‌

Falcon 10X‌

  • Share this:

ಭಾರತದಲ್ಲಿ ಕೋವಿಡ್ ಉಂಟುಮಾಡಿರುವ ನಷ್ಟ ಅಷ್ಟಿಷ್ಟಲ್ಲ. ಆರ್ಥಿಕ, ಸಾಮಾಜಿಕ, ತಾಂತ್ರಿಕ ಹೀಗೆ ಪ್ರತಿಯೊಂದು ವಿಭಾಗದಲ್ಲಿ ಕೂಡ ಕೋವಿಡ್ ನಷ್ಟ ಉಂಟುಮಾಡಿದೆ. ವಿದೇಶಗಳು ಕೂಡ ಭಾರತದ ನಾಗರೀಕರು ಭೇಟಿ ನೀಡುವುದನ್ನು ನಿರ್ಬಂಧಿಸಿತ್ತು. ಆದರೆ ಕೋವಿಡ್ 2ರ ಅಲೆ ತಗ್ಗುತ್ತಿರುವಂತೆ ಭಾರತವನ್ನು ಹೊರದೇಶಗಳು ಸ್ವಾಗತಿಸುತ್ತಿವೆ. ಕೊರೋನಾ ಕಾಟದಿಂದ ಭಾರತಕ್ಕೆ ಅಲ್ಪಕಾಲದ ನಿರ್ಬಂಧವನ್ನು ವಿದೇಶಗಳು ವಿಧಿಸಿದ್ದರೂ ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ಕೆಲವೊಂದು ನಿಬಂಧನೆಗಳೊಂದಿಗೆ ನೀವು ಹೊರದೇಶಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು. ಹಾಗಿದ್ದರೆ ಭಾರತಕ್ಕೆ ಆಹ್ವಾನವನ್ನು ನೀಡಿರುವ ದೇಶಗಳು ಯಾವುವು ಎಂಬುದನ್ನು ನೋಡೋಣ.


ರಷ್ಯಾ


ಈ ದೇಶವು ಸಂಪೂರ್ಣವಾಗಿ ಭಾರತೀಯರ ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ರಜಾದಿನ ಮತ್ತು ಹಲವಾರು ಪ್ರವಾಸಿ ಪ್ಯಾಕೇಜ್‌ಗಳನ್ನು ಹೊರತಂದಿವೆ. ಆದರೆ ಈ ದೇಶಕ್ಕೆ ಆಗಮಿಸುವವರು 72 ಗಂಟೆಗಳ ಮೊದಲು ಟೆಸ್ಟ್ ಮಾಡಿರುವ ಕೋವಿಡ್ – 19 ಪಿಸಿಆರ್ ಟೆಸ್ಟ್ ಫಲಿತಾಂಶವನ್ನು ತರಬೇಕು. ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಮಾಸ್ಕೋ ಲಾಕ್‌ಡೌನ್ ಆಗಿರುವುದರಿಂದ ಕ್ವಾರೆಂಟೈನ್ ಅವಶ್ಯಕತೆಗಳಿವೆ. ಮನೆ ಅಥವಾ ಹೋಟೆಲ್ ಕೋಣೆಯಲ್ಲಿ ಏಳು ದಿನಗಳ ಸ್ವಯಂ ನಿಬಂಧನೆ ಅಗತ್ಯವಾಗಿದೆ.


ಸರ್ಬಿಯಾ


ಸರ್ಬಿಯಾ ಭಾರತೀಯ ಪ್ರಯಾಣಿಕರಿಗೆ ಆಹ್ವಾನವನ್ನು ನೀಡಿದೆ. ಇಲ್ಲಿಗೆ ಬರುವವರು ಕೂಡ ನೆಗೆಟಿವ್ ಆರ್‌ಟಿ-ಪಿಸಿಆರ್ ಟೆಸ್ಟ್ ಅನ್ನು ತಂದಿರಬೇಕು. ಇದು ನಿರ್ಗಮಿಸುವ 48 ಗಂಟೆಗಳಿಗಿಂತ ಮುಂಚಿನದ್ದಾಗಿರಬೇಕು. 12 ವರ್ಷದ ಕೆಳಗಿನವರಿಗೆ ಈ ನಿಯಮ ಅನ್ವಯಿಸುವುದಿಲ್ಲ.


ಈಜಿಪ್ಟ್


ಇಲ್ಲಿಗೆ ಬರುವವರು 72 ಗಂಟೆಗಳಿಂತ ಮುಂಚಿತವಾದ ಆರ್‌ಟಿ-ಪಿಸಿಆರ್ ವರದಿಯನ್ನು ತರಬೇಕು ಇನ್ನು ಆರೋಗ್ಯ ಫೋಷಣೆ ಫಾರ್ಮ್ ಅನ್ನು ಕೂಡ ಭರ್ತಿಮಾಡಬೇಕು.


ಅಫ್ಘಾನಿಸ್ಥಾನ


ಮಾನ್ಯವಾದ ವೀಸಾವನ್ನು ಹೊಂದಿರುವವರು ಇಲ್ಲಿಗೆ ಬರುವವರು ತರಬೇಕು. ಇಲ್ಲಿಗೆ ಬರುವ ಪ್ರಯಾಣಿಕರು ಆರ್‌ಟಿ-ಪಿಸಿಆರ್ ಟೆಸ್ಟ್ ಸರ್ಟಿಫಿಕೇಟ್ ಅನ್ನು ತರುವ ಅಗತ್ಯವಿಲ್ಲ. ಆದರೆ ಪ್ರಯಾಣಿಕರು 14 ದಿನಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕು.


ಮಾರಿಷಸ್


ಜುಲೈ 15 2021 ರಿಂದ ಮಾರಿಷಸ್ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಮತಿ ನೀಡಿದೆ. ಮೊದಲನೇ ಹಂತದಲ್ಲಿ ವ್ಯಾಕ್ಸಿನ್ ತೆಗೆದುಕೊಂಡು ಪ್ರಯಾಣಿಕರು ರೆಸಾರ್ಟ್ ರಜಾದಿನಗಳಿಗೆ ಅನುಮತಿ ನೀಡಿದೆ. ಇನ್ನು ಜೂನ್ 20, 2021 ರಿಂದ ಮಾನ್ಯ ಅನುಮೋದಿತ ಕೋವಿಡ್ – 19 ಸುರಕ್ಷಿತ ರೆಸಾರ್ಟ್‌ಗಳ ಪಟ್ಟಿ ಲಭ್ಯವಿರುತ್ತದೆ. ಇನ್ನು ಎರಡನೇ ಹಂತದಲ್ಲಿ ವ್ಯಾಕ್ಸಿನ್ ಪಡೆದುಕೊಂಡ ಪ್ರಯಾಣಿಕರು ನಿರ್ಗಮಿಸುವ 72 ಗಂಟೆಗಳ ಮುನ್ನ ತೆಗೆದ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಸಲ್ಲಿಸಬೇಕು.


ವಿಎಫ್‌ಎಸ್ ಗ್ಲೋಬಲ್


ವಿಎಫ್‌ಎಸ್ ಗ್ಲೋಬಲ್ ಪ್ರಕಾರ ನಿರ್ಬಂಧಗಳನ್ನು ಸರಾಗಗೊಳಿಸುವ ಅಥವಾ ವೀಸಾ ಅರ್ಜಿಗಳನ್ನು ಅನುಮತಿಸುವ ಮತ್ತು ತೆರೆಯುವ ದೇಶಗಳ ನವೀಕರಿಸಿದ ಪಟ್ಟಿಯನ್ನು ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ವಿದ್ಯಾರ್ಥಿಗಳು, ವ್ಯವಹಾರ ಇತ್ಯಾದಿಗಳಂತಹ ನಿರ್ದಿಷ್ಟ ವರ್ಗದವರಿಗೆ ಅಥವಾ ಗೋಲ್ಡನ್ ವೀಸಾ, ನಿವಾಸ ಪರವಾನಗಿಗಳು, ದೀರ್ಘಾವಧಿಯ ವೀಸಾಗಳು ಮುಂತಾದ ಸವಲತ್ತು ವೀಸಾ ಹೊಂದಿರುವವರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಇನ್ನು ಲಾಕ್‌ಡೌನ್/ ಕರ್ಪ್ಯೂ ನಿರ್ಬಂಧಗಳಿರುವ ಭಾರತದ ಕೆಲವು ರಾಜ್ಯಗಳಲ್ಲಿರುವ ವಿಎಫ್‌ಎಸ್ ಗ್ಲೋಬಲ್ ವೀಸಾ ಅಪ್ಲಿಕೇಶನ್ ಸೆಂಟರ್‌ಗಳು ಕೆಲವೊಂದು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಿವೆ.


First published: