HOME » NEWS » National-international » COVID 19 PANDEMIC CAUSES GLOBAL RISE IN MENTAL HEALTH ISSUES AMONG KIDS STG LG

Coronavirus: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೊರೋನಾ ದುಷ್ಪರಿಣಾಮ; ಜಾಗತಿಕ ಆತಂಕ

ಮಕ್ಕಳ ಮನೋವೈದ್ಯರ ಪ್ರಕಾರ, ಮಕ್ಕಳಲ್ಲಿ ಕೊರೋನಾ ವೈರಸ್​ ಫೋಬಿಯಾ, ಅತಿಯಾಗಿ ತಿನ್ನುವುದು, ಇಲ್ಲವೇ ತಿನ್ನದೇ ಇರುವಂಥ ಕಾಯಿಲೆ, ಇನ್​ಫೆಕ್ಷನ್​ ಬಗ್ಗೆ ಗೀಳು ಕಾಯಿಲೆ, ಯಾವಾಗಲೂ ಕೈಗಳನ್ನು ಉಜ್ಜುವುದು, ಮೈಗೆ ಸೋಂಕುನಿವಾರಕ ಜೆಲ್(ಡಿಸ್​​ಇನ್​ಫೆಕ್ಟೆಡ್ ಜೆಲ್ ) ಹಚ್ಚಿಕೊಳ್ಳುವುದು, ಊಟದಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎನ್ನುವ ಭಯ ಮಕ್ಕಳಲ್ಲಿ ಮನೆ ಮಾಡಿದೆ.

news18-kannada
Updated:March 23, 2021, 9:14 AM IST
Coronavirus: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೊರೋನಾ ದುಷ್ಪರಿಣಾಮ; ಜಾಗತಿಕ ಆತಂಕ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ಸಾಂಕ್ರಾಮಿಕ ಸಮಸ್ಯೆ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಒಂದೆಡೆಯಾದರೆ ಮಕ್ಕಳ ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತಿರುವುದು ಇನ್ನೊಂದು ಬಗೆ.

1. 11 ವರ್ಷದ ಪ್ಯಾಬ್ಲೋವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆ ಪುಟ್ಟ ಹುಡುಗನ ಮಾನಸಿಕ ಆರೋಗ್ಯ ಹದಗೆಟ್ಟಿದ್ದಲ್ಲದೇ ಆತನ ಪ್ರಾಣಕ್ಕೆ ಕುತ್ತು ತರುವಷ್ಟು ಬದಲಾವಣೆಗಳಾಗಿತ್ತು. ಪ್ಯಾಬ್ಲೋ ಮೊದಲಿನಂತೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದ. ಕಡಿಮೆ ಪ್ರಮಾಣದ ಆಹಾರ ಸೇವನೆ ಮಾಡುತ್ತಿದ್ದ. ಅಲ್ಲದೇ ನೀರು ಕುಡಿಯುವುದನ್ನು ನಿಲ್ಲಿಸಿಯೇಬಿಟ್ಟಿದ್ದ. ಪ್ಯಾಬ್ಲೋವಿನಲ್ಲಿ ಬೆಳವಣಿಗೆಯಾಗಿದ್ದ ಅನಾಸಕ್ತಿ ಆತನನ್ನು ದುರ್ಬಲನನ್ನಾಗಿ ಮಾಡಿತ್ತು. ನಿಧಾನಗತಿಯ ಹೃದಯ ಬಡಿತ, ದಿನದಿಂದ ದಿನಕ್ಕೆ ಕಾರ್ಯಕ್ಷಮತೆ ಕಳೆದುಕೊಳ್ಳುತ್ತಿದ್ದ ಕಿಡ್ನಿ ಆತಂಕವನ್ನುಂಟು ಮಾಡಿತ್ತು.

ಮೊದಲ ಹಂತದಲ್ಲಿ ಆತನಿಗೆ ಇಂಜೆಕ್ಷನ್​ ಮತ್ತು ದ್ರವಾಹಾರ ನೀಡಲಾಗಿದ್ದಲ್ಲದೇ ಟ್ಯೂಬ್​ ಮೂಲಕ ಆಹಾರ ನೀಡಲಾಯಿತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೊರೋನಾ ವೈರಸ್​ ಬಿಕ್ಕಟ್ಟಿಗೆ ಇನ್ನೊಂದು ಮಗು ಕೂಡ ಸಂಕಷ್ಟಕ್ಕೀಡಾಗಿತ್ತು. ವೈದ್ಯರಿಗೆ ಈ ಘಟನೆಗಳು ಸಾಂಕ್ರಾಮಿಕ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರಿರುವ ಕೆಟ್ಟ ಪರಿಣಾಮಗಳ ಎಚ್ಚರಿಕೆ ಗಂಟೆ ಎನ್ನುವುದು ಅರ್ಥವಾಗಿತ್ತು. ಅಷ್ಟೇ ಅಲ್ಲದೇ ಪ್ಯಾಬ್ಲೋಗೆ ಚಿಕಿತ್ಸೆ ನೀಡುವ ಪ್ಯಾರಿಸ್ ಪೀಡಿಯಾಟ್ರಿಕ್ ಆಸ್ಪತ್ರೆಯೂ ಇಂತಹ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಸೆಪ್ಟೆಂಬರ್​ ನಂತರ ಖಿನ್ನತೆಗೆ ಒಳಗಾದ ಮಕ್ಕಳು ಮತ್ತು ಆತ್ಮಹತ್ಯೆಗೆ ಯತ್ನಿಸಿದ ಹದಿ ಹರೆಯದವರ ಸಂಖ್ಯೆ ದ್ವಿಗುಣವಾಗಿದೆ. ಅಲ್ಲದೇ ಅವರೆಲ್ಲರಿಗೂ ಚಿಕಿತ್ಸೆಯ ಅಗತ್ಯವಿದೆ ಎನ್ನುವುದನ್ನು ತಿಳಿಸಿದೆ.

2. ಇದು ಒಂದು ದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಹಲವಾರು ದೇಶಗಳ ವೈದ್ಯರು ಸಹ ಇದೇ ರೀತಿಯಾದ ಮಕ್ಕಳ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. 8 ವರ್ಷದ ಹುಡುಗನೊಬ್ಬ ಟ್ರಾಫಿಕ್ ಕಡೆಗೆ ಓಡುವುದು, ಓವರ್​ ಡೋಸ್​ ಮಾತ್ರೆ ಸೇವನೆ, ಮಕ್ಕಳು ತಮ್ಮನ್ನೇ ಘಾಸಿಗೊಳಿಸಿಕೊಳ್ಳುವುದು ಈ ರೀತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಿಕ್ಷಣ ಸಚಿವಾಲದ ಮಾಹಿತಿ ಪ್ರಕಾರ ಜಪಾನ್​ನಲ್ಲಿ 2020 ನೇ ವರ್ಷದಲ್ಲಿ ಮಕ್ಕಳು ಮತ್ತು ಹದಿಹರೆಯದವರ ಆತ್ಮಹತ್ಯೆ ಸಂಖ್ಯೆ ನೂತನ ದಾಖಲೆ ಬರೆದಿದೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.

Mission Paani: ನಾವು ಕುಡಿಯುವ ನೀರು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

3. ಮಕ್ಕಳ ಮನೋವೈದ್ಯರ ಪ್ರಕಾರ, ಮಕ್ಕಳಲ್ಲಿ ಕೊರೋನಾ ವೈರಸ್​ ಫೋಬಿಯಾ, ಅತಿಯಾಗಿ ತಿನ್ನುವುದು, ಇಲ್ಲವೇ ತಿನ್ನದೇ ಇರುವಂಥ ಕಾಯಿಲೆ, ಇನ್​ಫೆಕ್ಷನ್​ ಬಗ್ಗೆ ಗೀಳು ಕಾಯಿಲೆ, ಯಾವಾಗಲೂ ಕೈಗಳನ್ನು ಉಜ್ಜುವುದು, ಮೈಗೆ ಸೋಂಕುನಿವಾರಕ ಜೆಲ್(ಡಿಸ್​​ಇನ್​ಫೆಕ್ಟೆಡ್ ಜೆಲ್ ) ಹಚ್ಚಿಕೊಳ್ಳುವುದು, ಊಟದಿಂದ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎನ್ನುವ ಭಯ ಮಕ್ಕಳಲ್ಲಿ ಮನೆ ಮಾಡಿದೆ.

4. ಇದಿಷ್ಟೇ ಅಲ್ಲದೇ ಮಕ್ಕಳಲ್ಲಿ , ಭಯ ಹೆಚ್ಚಾಗಿದ್ದು, ಹೃದಯದ ಬಡಿತದಲ್ಲಿ ಏರುಪೇರಾಗುವಿಕೆ, ಮಾನಸಿಕ ಉದ್ವೇಗ ಕಾಣಿಸಿಕೊಂಡಿದೆ. ಲಾಕ್​​ಡೌನ್​ ಸಮಯದಲ್ಲಿ ಕರ್ಫ್ಯೂ, ಶಾಲೆಗಳಿಲ್ಲದಿರುವುದರ ಪರಿಣಾಮ ಮೊಬೈಲ್ ಅಡಿಕ್ಷನ್, ಕಂಪ್ಯೂಟರ್ ಮುಂದೆಯೇ ಕುಳಿತುಕೊಂಡಿರುವುದು ಸಹ ಪರಿಣಾಮ ಬೀರಿದೆ5. ಕೊರೋನಾ ವೈರಸ್​ ಕಾರಣದಿಂದ ಮನೆಯಲ್ಲಿ ಸಂಕಷ್ಟಕ್ಕೆ ಒಳಗಾದವರು, ಕೆಲಸ ಕಳೆದುಕೊಂಡವರು, ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದ ಹಿರಿಯರ ಮುಂದೆ ಮಕ್ಕಳು ತಮ್ಮ ಸಮಸ್ಯೆಯನ್ನು ತೋರಿಸಿಕೊಂಡಿಲ್ಲ. ಕೆಲವು ಮಕ್ಕಳು ಉದ್ವೇಗದ ಸಮಸ್ಯೆಯನ್ನು ತಮ್ಮೊಳಗೆ ಮುಚ್ಚಿಟ್ಟುಕೊಂಡಿದ್ದಾರೆ. ಹೀಗೆ ದೀರ್ಘಕಾಲ ಮಕ್ಕಳು ಮೌನಕ್ಕೆ ಶರಣಾಗಿ ತಮ್ಮ ಭಾಷಾ ಪ್ರಾವೀಣ್ಯತೆ ಮರೆಯಬಹುದು. ತಮ್ಮ ದುಃಖವನ್ನು , ನೋವನ್ನು ವ್ಯಕ್ತಪಡಿಸಲಾಗದೇ ಸಾಂಕ್ರಾಮಿಕ ಸಮಯದಲ್ಲಿ ಸಹಾಯ ತೆಗೆದುಕೊಳ್ಳುವುದಕ್ಕೂ ಕಷ್ಟವಾಗಬಹುದು.

6.ಪ್ಯಾರಿಸ್​ನ ರಾಬರ್ಟ್​​ ಡೆಬ್ರೆಯಲ್ಲಿ ಮನೋವೈದ್ಯಕೀಯ ಘಟಕವು ತಿಂಗಳಿಗೆ 15 ವರ್ಷ ಮತ್ತು ಅದಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಆತ್ಮಹತ್ಯಗೆ ಶರಣಾಗುವುದನ್ನು ಗಮನಿಸಿದೆ. ಅಷ್ಟೇ ಅಲ್ಲದೇ ಸೆಪ್ಟೆಂಬರ್​ನಿಂದ ಈ ಸಂಖ್ಯೆ ದ್ವಿಗುಣವಾಗಿದೆ. ಅಲ್ಲದೇ ಮಕ್ಕಳು ಆತ್ಮಹತ್ಯೆಗೆ ದೃಢ ನಿರ್ಣಯವನ್ನು ಕೈಗೊಳ್ಳುವಷ್ಟು ಖಿನ್ನತೆಗೆ ಒಳಗಾಗಿರುವುದು ಮುಂಬರುವ ಪೀಳಿಗೆಯ ಬಗ್ಗೆ ಆತಂಕವನ್ನುಂಟು ಮಾಡಿದೆ.
Published by: Latha CG
First published: March 23, 2021, 9:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories