• Home
  • »
  • News
  • »
  • national-international
  • »
  • Coronavirus: ಬದಲಾಗ್ತಿದೆ ಕೊರೋನಾ ರೋಗಲಕ್ಷಣಗಳು, ಹೊಸ ತಳಿ ಎಷ್ಟು ಅಪಾಯಕಾರಿ ಅಂದ್ರು ತಜ್ಞರು

Coronavirus: ಬದಲಾಗ್ತಿದೆ ಕೊರೋನಾ ರೋಗಲಕ್ಷಣಗಳು, ಹೊಸ ತಳಿ ಎಷ್ಟು ಅಪಾಯಕಾರಿ ಅಂದ್ರು ತಜ್ಞರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Coronavirus: ಕೋವಿಡ್ ರೋಗಲಕ್ಷಣಗಳು ಪುನಃ ಬದಲಾಗುತ್ತಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಿದ್ದರೆ ಆ ಲಕ್ಷಣಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

  • Trending Desk
  • 3-MIN READ
  • Last Updated :
  • Share this:

2019 ರಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ಮೊದಲು ಪತ್ತೆಹಚ್ಚಿದಾಗ ಈ ರೋಗ ಎಷ್ಟು ಭಯಂಕರವಾಗಿರಬಹುದು ಎಂಬ ಕಲ್ಪನೆ ಕೂಡ ನಮಗಿರಲಿಲ್ಲ. ಆದರೆ ಕಾಯಿಲೆ ಹರಡುತ್ತಾ ಹೋದಂತೆ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದ್ದಂತೆ ಕೋವಿಡ್‌ನ (Coronavirus) ಆರ್ಭಟಕ್ಕೆ ಸಂಪೂರ್ಣ ವಿಶ್ವವೇ ಸ್ತಬ್ಧಗೊಂಡಿತು. ಸಾಮಾನ್ಯ ಜ್ವರ (Fever), ಶೀತ ನಮ್ಮನ್ನೇನು ಮಾಡಲಾರದು ಎಂದುಕೊಂಡವರ ಅನಿಸಿಕೆಗಳನ್ನೆಲ್ಲಾ ತಲೆಕೆಳಗೆ ಮಾಡುತ್ತಾ ಅಸಾಮಾನ್ಯ ರೋಗಲಕ್ಷಣಗಳನ್ನು ಪ್ರದರ್ಶಿಸುತ್ತಾ ಕೋವಿಡ್ (Covid 19) ಬರೋಬ್ಬರಿ ಎರಡು ವರ್ಷ ಮನುಕುಲವನ್ನು ಕಾಡಿದೆ, ಇನ್ನೂ ಕಾಡುತ್ತಲೇ ಇದೆ.


ಆರಂಭದಲ್ಲಿ ಪತ್ತೆಯಾದ ಕೋವಿಡ್ ರೋಗಲಕ್ಷಣಗಳು:


ಕೋವಿಡ್ ರೋಗ ಲಕ್ಷಣಗಳು ಕೂಡ ಸಾಮಾನ್ಯ ಜ್ವರದ ಲಕ್ಷಣಗಳಿಗಿಂತ ಭಿನ್ನವಾಗಿದ್ದವು. ವಾಸನೆ ಇಲ್ಲದಿರುವುದು, ಗಂಟಲು ಕೆರೆತ, ಶೀತ, ಜ್ವರ, ಉಸಿರಾಟದಲ್ಲಿ ತೊಂದರೆ ಹೀಗೆ ಕಂಡುಬಂದಿತು. ವೈರಸ್ ರೂಪಾಂತರಗೊಳ್ಳುತ್ತಿದ್ದಂತೆ ಲಸಿಕೆಗಳ ಬಳಕೆಯಲ್ಲಿ ಏರಿಕೆಯಾಗುತ್ತಿದ್ದಂತೆ ರೋಗಲಕ್ಷಣಗಳಲ್ಲಿ ಜೊತೆಗೆ ಕಾಯಿಲೆಗಳಲ್ಲಿ ಕೂಡ ವ್ಯತ್ಯಾಸವಾಗತೊಡಗಿತು.


ರೂಪಾಂತರಗಳೊಂದಿಗೆ ಲಕ್ಷಣಗಳು ಭಿನ್ನ:


ರೋಗಿಗಳು ಗಂಟಲಿನ ಕೆರೆತದೊಂದಿಗೆ ಕೆಮ್ಮಿನ ಲಕ್ಷಣಗಳನ್ನು ಪ್ರಕಟಿಸತೊಡಗಿದರು ಅಂತೆಯೇ ಕರುಳು ಸಂಬಂಧಿತ ಕಾಯಿಲೆಗಳು ಶೀಘ್ರದಲ್ಲೇ ಕಾಣಿಸತೊಡಗಿದವು, ಇದು ಕೂಡ ಕೋವಿಡ್ ಲಕ್ಷಣಗಳು ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಹೀಗೆ ಕೋವಿಡ್‌ನ ಬೇರೆ ಬೇರೆ ರೂಪಾಂತರಗಳು ಕಾಣಿಸಿಕೊಳ್ಳತೊಡಗುತ್ತಿದ್ದಂತೆ ಅದರ ರೋಗಲಕ್ಷಣಗಳು ವಿಭಿನ್ನವಾಗತೊಡಗಿದವು.


ಇದನ್ನೂ ಓದಿ: Shocking: ಇನ್ನೆರಡು ವರ್ಷ ಕಳೆದರೆ ಭಾರತದಲ್ಲಿ ಬದುಕೋಕೆ ಕಷ್ಟ ಆಗುತ್ತಂತೆ! ಕಾರಣವೇನು?


ಬದಲಾಗುತ್ತಿರುವ ರೋಗಲಕ್ಷಣಗಳು


ಇದೀಗ ಕೋವಿಡ್ ರೋಗಲಕ್ಷಣಗಳು ಪುನಃ ಬದಲಾಗುತ್ತಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಿದ್ದರೆ ಆ ಲಕ್ಷಣಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.


ಉಸಿರಾಟದ ಸಮಸ್ಯೆಗಳು ಮರುಕಳಿಸಿವೆ:


ಯೂನಿವರ್ಸಿಟಿ ಆಫ್ ಎಕ್ಸೆಟರ್ ಮೆಡಿಕಲ್ ಸ್ಕೂಲ್‌ನ ಹಿರಿಯ ಕ್ಲಿನಿಕಲ್ ಉಪನ್ಯಾಸಕರಾದ ಡೇವಿಡ್ ಸ್ಟ್ರೇನ್ ತಿಳಿಸಿರುವಂತೆ ಒಮಿಕ್ರಾನ್ ರೂಪಾಂತರಗಳಾದ BA.4 ಹಾಗೂ BA.5 ನೊಂದಿಗೆ ಉಸಿರಾಟ ಸಮಸ್ಯೆಗಳು ಮರುಕಳಿಸಿವೆ ಎಂದಿದ್ದಾರೆ. ಕೋವಿಡ್ ನ್ಯುಮೋನಿಯಾ ಮರುಕಳಿಸಲಿದೆ ಆದರೆ ಆರಂಭದ ಉದಾಹರಣೆಗಳನ್ನು ನೋಡಿದಾಗ ಅಷ್ಟೊಂದು ತೀವ್ರವಾಗಿಲ್ಲ ಎಂಬುದು ಕೊಂಚ ಸಮಾಧಾನಕರ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಕೋವಿಡ್ ರೋಗಲಕ್ಷಣಗಳು ಹೀಗಿರಬಹುದು ಎಂಬುದಾಗಿ ತಜ್ಞರು ತಿಳಿಸಿದ್ದಾರೆ.




ಶ್ವಾಸಕೋಶದ ಸೋಂಕು ತೀವ್ರ:


ಸ್ಟ್ರೈನ್ ಹೇಳುವಂತೆ ಶ್ವಾಸಕೋಶಗಳಿಗೆ ಸೋಂಕು ತೀವ್ರತರವಾಗಿ ಪರಿಣಾಮ ಬೀರಲಿದೆ ಎಂಬುದು ನಿರೀಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವ್ಯಕ್ತಿಯ ಶ್ವಾಸಕೋಶವನ್ನು ತಲುಪುವ ಮಾರ್ಗವಾದ ವಾಯುಮಾರ್ಗಕ್ಕೆ ಸೋಂಕಿನ ಏರಿಕೆಯಾಗಿರುವುದರಿಂದ ಒಬ್ಬರಿಂದೊಬ್ಬರಿಗೆ ಕಾಯಿಲೆ ವಿಸ್ತರಿಸಬಹುದು ಎಂಬುದು ಸ್ಟ್ರೈನ್ ಮಾತಾಗಿದೆ. ರೋಗಿಯ ಉಸಿರಾಟ ಹಾಗೂ ಮಾತನಾಡುವುದರಿಂದ ಕೂಡ ಸೋಂಕು ಹರಡುತ್ತದೆ ಎಂಬುದು ಸ್ಟ್ರೈನ್ ಹೇಳಿಕೆಯಾಗಿದೆ. ಆದರೆ ಶ್ವಾಸಕೋಶಕ್ಕೆ ತೀವ್ರವಾಗಿ ಹಾನಿ ಮಾಡುವುದಿಲ್ಲ ಎಂದು ಸ್ಟ್ರೈನ್ ತಿಳಿಸಿದ್ದಾರೆ.


ರಕ್ತಹೆಪ್ಪುಗಟ್ಟುವಿಕೆಯ ಅಪಾಯಗಳು:


ರಕ್ತಹೆಪ್ಪುಗಟ್ಟುವಿಕೆಯ ಅಪಾಯಗಳು ತಲೆದೋರಬಹುದು ಎಂದು ಡೇವಿಡ್ ಎಚ್ಚರಿಸಿದ್ದು, ಬೇರೆ ಬೇರೆ ರೂಪದಲ್ಲಿ ಇದು ಗಂಭೀರವಾಗಿರುತ್ತದೆ ಎಂಬುದು ಡೇವಿಡ್ ಸ್ಟ್ರೈನ್ ಮಾತಾಗಿದೆ. ರಕ್ತವನ್ನು ಹೆಚ್ಚು ಹೆಪ್ಪುಗಟ್ಟಿಸುವ ಪ್ರಕ್ರಿಯೆಗೆ ರೋಗವು ಕಾರಣವಾಗಬಹುದು ಎಂಬುದು ಹೆಚ್ಚಿನ ಭಯವಾಗಿದೆ ಎಂದು ಡೇವಿಡ್ ತಿಳಿಸಿದ್ದಾರೆ.


BA.2 ರೂಪಾಂತರ ಜೊತೆಗೆ ಡೆಲ್ಟಾ ರೂಪಾಂತರದಲ್ಲೂ ಇದೇ ರೋಗಲಕ್ಷಣವನ್ನು ಕಂಡುಕೊಂಡಿದ್ದೇವೆ. ಹೆಚ್ಚು ರಕ್ತಹೆಪ್ಪುಗಟ್ಟುವಿಕೆಯ ಅಪಾಯ ಇದ್ದೇ ಇದೆ ಎಂದು ಡೇವಿಡ್ ಸೂಚಿಸಿದ್ದಾರೆ.


ಭವಿಷ್ಯದಲ್ಲಿ ತಲೆದೋರಬಹುದಾದ ಇನ್ನಿತರ ರೋಗಲಕ್ಷಣಗಳೇನು?:


ಹಿಂದಿನ ರೂಪಾಂತರಗಳು ರೋಗಿಗಳಲ್ಲಿ 12 ತಿಂಗಳ ನಂತರ ಪಾರ್ಶ್ವವಾಯು ಹಾಗೂ ಹೃದಯಾಘಾತದಂತಹ ಅಪಾಯಗಳಿಗೆ ಕಾರಣವಾಗಿವೆ. ಅದೇ ರೀತಿ ಮಧುಮೇಹ ವಿಧ 1 ರ ಹೆಚ್ಚು ಏರಿಕೆಯ ಅಪಾಯ ಕೂಡ ಇದ್ದೇ ಇದೆ ಹಾಗೂ ಬುದ್ಧಿಮಾಂದ್ಯತೆಯ ಅಪಾಯವನ್ನು ಡೇವಿಡ್ ಸೂಚಿಸಿದ್ದಾರೆ. ಹಿಂದಿನ ರೂಪಾಂತರಗಳ ವೈಶಿಷ್ಟ್ಯಗಳು ಇದಾಗಿರಬಹುದೇ ಹಾಗೂ ಒಮಿಕ್ರಾನ್ ರೂಪಾಂತರದೊಂದಿಗೆ ಈ ರೋಗಲಕ್ಷಣಗಳು ಹೀಗೆಯೇ ಮುಂದುವರಿಯಲಿದೆಯೇ ಎಂಬುದನ್ನು ಸಮಯ ಮಾತ್ರ ಹೇಳಬಹುದು ಎಂದು ಡೇವಿಡ್ ತಿಳಿಸಿದ್ದಾರೆ.

Published by:shrikrishna bhat
First published: