ಚೀನಾದಲ್ಲಿ Corona ತಲ್ಲಣ! 2 ದಿನಕ್ಕೆ ಒಮ್ಮೆ ಮಾತ್ರ ಮನೆಯಿಂದ ಹೊರಗೆ ಬರಬಹುದು!

ಚೀನಾದಾದ್ಯಂತ ಕೋವಿಡ್ ಪ್ರಕರಣಗಳು ಈಗ ಒಂದೇ ದಿನದಲ್ಲಿ 1,000 ಪ್ರಕರಣಗಳ ಗಡಿ ದಾಟಿವೆ. ಕೇವಲ ಮೂರು ವಾರಗಳ ಹಿಂದಷ್ಟೇ ಪ್ರತಿದಿನ 100ಕ್ಕಿಂತ ಕಡಿಮೆ ಪ್ರಕರಣಗಳು ಇಲ್ಲಿ ವರದಿಯಾಗುತ್ತಿದ್ದವು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:

ಚೀನಾದಲ್ಲಿ ಡಿಸೆಂಬರ್‌ 2019ರಲ್ಲಿ ಮೊದಲ ಬಾರಿಗೆ ಕೋವಿಡ್ - 19 ಪ್ರಕರಣಗಳು ಬೆಳಕಿಗೆ ಬಂದವು. ಇದನ್ನು ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ 2020 ರಲ್ಲಿ (WHO) ಘೋಷಣೆ ಮಾಡಿತ್ತು. ನಂತರ, ಇಡೀ ವಿಶ್ವದಲ್ಲಿ ಕೊರೊನಾ ಅಟ್ಟಹಾಸ ಬೀರಿದ್ದು ಹಾಗೂ ಹಲವೆಡೆ ಈಗಲೂ ಬೀರುತ್ತಿರುವುದು ಜಗತ್ತಿಗೇ ಗೊತ್ತಿದೆ. ಆದರೀಗ, ಕೋವಿಡ್ - 19 ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಕೊರೊನಾ (Covid 19 In China) ಕಾಣಿಸಿಕೊಂಡ ಆ ಆರಂಭಿಕ ದಿನಗಳ ನಂತರ ಮೊದಲ ಬಾರಿಗೆ ಕೋವಿಡ್ ಪ್ರಕರಣಗಳು ಈ ವಾರ ಮತ್ತೆ 1,000 ಪ್ರಕರಣಗಳ ಗಡಿ ದಾಟಿದೆ. ಈ ಹಿನ್ನೆಲೆ ಡ್ರ್ಯಾಗನ್‌ ರಾಷ್ಟ್ರದ ಹಲವು ನಗರಗಳಲ್ಲಿ ಮತ್ತೆ ಲಾಕ್‌ಡೌನ್‌ (Covid Lockdown in China) ವಿಧಿಸಲಾಗುತ್ತಿದೆ.


ಇದೇ ರೀತಿ, 9 ಮಿಲಿಯನ್ ಅಂದರೆ ಬರೋಬ್ಬರಿ 90 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಚೀನಾದ ಚಾಂಗ್‌ಚುನ್ ನಗರದಲ್ಲೂ ಲಾಕ್‌ಡೌನ್‌ ವಿಧಿಸಲಾಗಿದೆ. ಇದಕ್ಕೆ ಕಾರಣ ಶುಕ್ರವಾರ ಈ ನಗರದಲ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿದೆ.


ಚೀನಾದಲ್ಲಿ ಕೋವಿಡ್ - 19ಗೆ ಸಂಬಂಧಪಟ್ಟ ಈ 10 ಬೆಳವಣಿಗೆಗಳು ಇಲ್ಲಿವೆ ನೋಡಿ..
 1. ಈಶಾನ್ಯ ಚೀನಾದ ಚಾಂಗ್‌ಚುನ್ ನಗರದ ತನ್ನ 9 ಮಿಲಿಯನ್ ನಿವಾಸಿಗಳನ್ನು ಮನೆಯಿಂದಲೇ ಕೆಲಸ ಮಾಡಲು ಸ್ಥಳೀಯ ಆಡಳಿತ ಮನವಿ ಮಾಡಿದೆ. ಇದರ ಜತೆಗೆ ಹೆಚ್ಚು ಕೋವಿಡ್ - 19 ಸಾಮೂಹಿಕ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ.

 2. ಜಿಲಿನ್ ಪ್ರಾಂತ್ಯದ ರಾಜಧಾನಿ ಮತ್ತು ಪ್ರಮುಖ ಕೈಗಾರಿಕಾ ನೆಲೆಯಾದ ಚಾಂಗ್‌ಚುನ್ ನಗರ, "ದೈನಂದಿನ ಅಗತ್ಯತೆಗಳನ್ನು" ಖರೀದಿಸಲು ಎರಡು ದಿನಗಳಿಗೊಮ್ಮೆ ಮಾತ್ರ ವ್ಯಕ್ತಿಗೆ ಮನೆಯಿಂದ ಹೊರಗೆ ಹೋಗಲು ಅವಕಾಶ ನೀಡುತ್ತದೆ.

 3. 2020 ರಲ್ಲಿ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳ ನಂತರ ಮೊದಲ ಬಾರಿಗೆ ಚೀನಾದಾದ್ಯಂತ ಕೋವಿಡ್ ಪ್ರಕರಣಗಳು ಈಗ ಒಂದೇ ದಿನದಲ್ಲಿ 1,000 ಪ್ರಕರಣಗಳ ಗಡಿ ದಾಟಿವೆ. ಕೇವಲ ಮೂರು ವಾರಗಳ ಹಿಂದಷ್ಟೇ ಪ್ರತಿದಿನ 100ಕ್ಕಿಂತ ಕಡಿಮೆ ಪ್ರಕರಣಗಳು ಇಲ್ಲಿ ವರದಿಯಾಗುತ್ತಿದ್ದವು.

 4. ಆದರೆ, ಶುಕ್ರವಾರದ ಅಂಕಿಅಂಶಗಳ ಪ್ರಕಾರ 1,369 ಹೊಸ ಕೋವಿಡ್ - 19 ಪ್ರಕರಣಗಳು ವರದಿಯಾಗಿದೆ.

 5. ಶಾಂಘೈ ಮತ್ತು ಇತರ ಪ್ರಮುಖ ನಗರಗಳ ಅಧಿಕಾರಿಗಳು ಕೊರೊನಾ ಹೊಸ ತಳಿ ಓಮಿಕ್ರಾನ್ ಅನ್ನು ತಡೆಯಲು ಉದ್ದೇಶಿತ ಲಾಕ್‌ಡೌನ್‌ಗಳನ್ನು ಮತ್ತು ಕೋವಿಡ್ - 19 ಪರೀಕ್ಷೆಯನ್ನು ಹೆಚ್ಚಿಸುತ್ತಿದ್ದಾರೆ.

 6. ಚೀನಾದ ಶಾಂಘೈ ನಗರದಲ್ಲೂ ಶಾಲೆಗಳನ್ನು ಮುಚ್ಚಿ ಆನ್‌ಲೈನ್ ಶಿಕ್ಷಣ ನೀಡಲು ಶುಕ್ರವಾರ ಸ್ಥಳೀಯ ಆಡಳಿತ ಸೂಚಿಸಿದೆ.ಇದನ್ನೂ ಓದಿ: Coronavirus: ಮತ್ತೆ ಹೆಚ್ಚುತ್ತಿವೆಯಂತೆ ಕೋವಿಡ್ ಪ್ರಕರಣಗಳು! ಹಾಗಿದ್ರೆ ತಜ್ಞರು ನೀಡಿದ ಎಚ್ಚರಿಕೆ ಏನು?

 7. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಆರೋಗ್ಯ ಸಿಬ್ಬಂದಿ ಶುಕ್ರವಾರ ಶಾಲೆಯ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು ಎಂದು ಶಾಂಘೈ ಅಮೆರಿಕನ್ ಸ್ಕೂಲ್‌ನ ಸಿಬ್ಬಂದಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ AFP ಗೆ ಮಾಹಿತಿ ನೀಡಿದೆ. ಆದರೂ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಶಾಲೆಯಲ್ಲೇ ಲಾಕ್‌ ಮಾಡಿಲ್ಲ ಎಂದೂ ತಿಳಿಸಿದ್ದಾರೆ.

 8. ಚೀನಾ ರಾಜಧಾನಿ ಬೀಜಿಂಗ್‌ನಲ್ಲೂ ಹಲವಾರು ವಸತಿ ಸಂಯುಕ್ತಗಳನ್ನು ಸಂಪೂರ್ಣವಾಗಿ ಅಥವಾ ಭಾಗಶ: ಲಾಕ್‌ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.

 9. 2019 ರ ಕೊನೆಯಲ್ಲಿ ಚೀನಾದಲ್ಲಿ ಕೋವಿಡ್ -19 ಪತ್ತೆಯಾಗಿತ್ತು. ಆದರೆ, ಕ್ಸಿ ಜಿನ್‌ಪಿಂಗ್‌ ನೇತೃತ್ವದ ಸರ್ಕಾರವು ಸ್ನ್ಯಾಪ್ ಲಾಕ್‌ಡೌನ್‌ಗಳು ಮತ್ತು ಸಾಮೂಹಿಕ ಕೋವಿಡ್ - 19 ಪರೀಕ್ಷೆಯನ್ನು ಹೆಚ್ಚಾಗಿ ಮಾಡಿ ಕೊರೊನಾವನ್ನು ನಿಯಂತ್ರಣದಲ್ಲಿ ಇರಿಸಿತ್ತು. ಅಲ್ಲದೆ, ಡ್ರ್ಯಾಗನ್‌ ರಾಷ್ಟ್ರದ ಗಡಿಗಳನ್ನು ಮುಚ್ಚಿತ್ತು.ಇದನ್ನೂ ಓದಿ: India China ಶತ್ರುಗಳಾಗೋ ಬದಲು ಗೆಳೆಯರಾಗಲಿ; ವಿದೇಶಾಂಗ ಸಚಿವ ಹೀಗೇಕಂದ್ರು?

 10. ಆದರೆ ಚೀನಾದ ಆರ್ಥಿಕ ಯೋಜನಾ ಸಂಸ್ಥೆ ಇತ್ತೀಚೆಗೆ ದೊಡ್ಡ ಲಾಕ್‌ಡೌನ್‌ಗಳಿಂದ ದೇಶದ ಆರ್ಥಿಕತೆಗೆ ಹಾನಿಯಾಗಬಹುದು ಎಂದು ಎಚ್ಚರಿಸಿದೆ. ಹಾಗೂ ದೇಶವು ಇತರ ರಾಷ್ಟ್ರಗಳಂತೆ ವೈರಸ್‌ನೊಂದಿಗೆ ಸಹ - ಅಸ್ತಿತ್ವವನ್ನು ಅಂದರೆ ಕೊರೊನಾದೊಂದಿಗೆ ಬದುಕುವ ಗುರಿಯನ್ನು ಹೊಂದಿರಬೇಕು ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಕಳೆದ ವಾರ ಸಲಹೆ ನೀಡಿದ್ದರು.

Published by:guruganesh bhat
First published: