Coronavirus: ಗಾಳಿಯಲ್ಲಿ ಹೆಚ್ಚು ಹರಡುತ್ತದೆ ಕೊರೊನಾ ರೂಪಾಂತರ ಸೋಂಕು..

Covid Alpha: ಆಲ್ಫಾ ರೂಪಾಂತರ ಸೋಂಕುಗಳು ಮೂಗಿನ ಸ್ವ್ಯಾಬ್ ಹಾಗೂ ಲಾಲಾರಸದಲ್ಲಿ ಹೆಚ್ಚು ಪ್ರಮಾಣದಲ್ಲಿವೆ ಎಂಬುದು ನಮಗೆ ಈಗಾಗಲೇ ಗೊತ್ತಿತ್ತು. ಸೋಂಕಿತ ವ್ಯಕ್ತಿಯ ಸಮೀಪದಿಂದ ದೊಡ್ಡ ಹನಿಗಳ ಸಿಡಿಯುವಿಕೆಯ ಮೂಲಕ ಮೂಗು ಹಾಗೂ ಬಾಯಿಯ ಮೂಲಕ ವೈರಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಕೊರೊನಾ ವೈರಸ್‌ನ(Coronavirus) ಮೂಲ ತಳಿಗಳಿಂದ ಸೋಂಕಿದ ಒಳಗಾದ ಜನರಿಗಿಂತ, ಕೋವಿಡ್ ಆಲ್ಫಾ(Alpha) ರೂಪಾಂತರದಿಂದ ಸೋಂಕಿಗೆ ಒಳಗಾದವರು 100 ಪಟ್ಟು ಹೆಚ್ಚು ವೈರಸ್ ಅನ್ನು ಉಸಿರಾಟದ ಮೂಲಕ ಗಾಳಿಯಲ್ಲಿ ಹೊರಬಿಡುತ್ತಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಸಮರ್ಪಕ ವ್ಯಾಕ್ಸಿನೇಶನ್‌ನೊಂದಿಗೆ ಉತ್ತಮ ಉಸಿರಾಟ ಪ್ರಕ್ರಿಯೆ ಹಾಗೂ ಬಿಗಿಯಾದ ಮಾಸ್ಕ್‌ ಬಳಕೆಯನ್ನು ಜನರು ಮಾಡಬೇಕೆಂದು ಮೇರಿಲ್ಯಾಂಡ್ ಯುನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.


ಆಲ್ಫಾ ರೂಪಾಂತರ ಸೋಂಕುಗಳಿಂದ ಗಾಳಿಯ ಮೂಲಕ ಹರಡುವ ವೈರಸ್‌ನ ಪ್ರಮಾಣವು 18 ಪಟ್ಟು ಹೆಚ್ಚಾಗಿದ್ದು ಮೂಗಿನ ಸ್ವ್ಯಾಬ್ ಹಾಗೂ ಲಾಲಾರಸದಲ್ಲಿ ಹೆಚ್ಚಿದ ವೈರಸ್‌ಗಳಿಂದ ಪತ್ತೆಯಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಡೆಲ್ಟಾ ರೂಪಾಂತರದ ಆಗಮನಕ್ಕೂ ಮುನ್ನವೇ ಆಲ್ಪಾ ಸೋಂಕುಗಳಿಂದ ಗಾಳಿಯ ಮೂಲಕ ಹರಡುವ ವೈರಸ್‌ನ ಪ್ರಮುಖ ಹೆಚ್ಚಳವು ಸಂಭವಿಸಿದೆ ಹಾಗೂ ವೈರಸ್‌ಗೆ ಗಾಳಿಯ ಮೂಲಕ ಹರಡಲು ಸುಲಭವಾಗುತ್ತಿದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.


ಆಲ್ಫಾ ರೂಪಾಂತರ ಸೋಂಕುಗಳು ಮೂಗಿನ ಸ್ವ್ಯಾಬ್ ಹಾಗೂ ಲಾಲಾರಸದಲ್ಲಿ ಹೆಚ್ಚು ಪ್ರಮಾಣದಲ್ಲಿವೆ ಎಂಬುದು ನಮಗೆ ಈಗಾಗಲೇ ಗೊತ್ತಿತ್ತು. ಸೋಂಕಿತ ವ್ಯಕ್ತಿಯ ಸಮೀಪದಿಂದ ದೊಡ್ಡ ಹನಿಗಳ ಸಿಡಿಯುವಿಕೆಯ ಮೂಲಕ ಮೂಗು ಹಾಗೂ ಬಾಯಿಯ ಮೂಲಕ ವೈರಸ್‌ಗಳು ಒಬ್ಬರಿಂದ ಒಬ್ಬರಿಗೆ ಹರಡಬಹುದು. ಆದರೆ ನಮ್ಮ ಅಧ್ಯಯನಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಉಸಿರಾಟದ ಮೂಲಕ ಗಾಳಿ ಸೇರುವ ವೈರಸ್‌ನ ಪ್ರಮಾಣಗಳು ಇನ್ನಷ್ಟು ಅಧಿಕಗೊಳ್ಳುತ್ತಿವೆ ಎಂದು ವಿವಿಯ ಡಾಕ್ಟರಲ್ ವಿದ್ಯಾರ್ಥಿ ಜಿಯಾನ್ಯು ಲೈ ವಿವರಿಸಿದರು.


ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಮಾನವೀಯತೆ ಮೆರೆದ ನಟ ಸೋನು ಸೂದ್ ತೆರಿಗೆ ವಂಚಿಸಿದ್ದಾರೆಯೇ?

ಕ್ಲಿನಿಕಲ್ ಸಾಂಕ್ರಾಮಿಕ ರೋಗಗಳಲ್ಲಿ ಪ್ರಕಟವಾದ ಅಧ್ಯಯನವು ಆಲ್ಫಾ ರೂಪಾಂತರ ಮತ್ತು ವೈರಸ್‌ನ ಮೂಲ ತಳಿಯನ್ನು ಕೇಂದ್ರೀಕರಿಸಿದೆ, ಸಂಶೋಧಕರು ಡೆಲ್ಟಾ ರೂಪಾಂತರವು ಹೆಚ್ಚು ಹರಡುತ್ತದೆ ಎಂದು ನಂಬುತ್ತಾರೆ. ಪ್ರಸ್ತುತ ಪ್ರಸಾರಗೊಳ್ಳುತ್ತಿರುವ ಡೆಲ್ಟಾ ರೂಪಾಂತರವು ಆಲ್ಫಾ ರೂಪಾಂತರಕ್ಕಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬುದು ನಮಗೆ ತಿಳಿದಿದೆ.


ಗಾಳಿಯಲ್ಲಿ ಪ್ರಸಾರವಾಗುತ್ತಿರುವ ಸಮಯದಲ್ಲಿ ರೂಪಾಂತರಗಳು ಅಭಿವೃದ್ಧಿಗೊಳ್ಳುತ್ತಲೇ ಇರುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗಾಗಿ ಲಸಿಕೆ ಪಡೆದಿದ್ದರೂ ನಾವು ಉತ್ತಮ ಉಸಿರಾಟ ಹಾಗೂ ಬಿಗಿಯಾದ ಮಾಸ್ಕ್‌ ಧರಿಸಬೇಕು. ಇದರಿಂದ ವೈರಸ್ ಹರಡುವುದನ್ನು ತಪ್ಪಿಸಬಹುದು ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆಯ ಪರಿಸರ ಆರೋಗ್ಯ ಪ್ರಾಧ್ಯಾಪಕ ಡಾನ್ ಮಿಲ್ಟನ್ ತಿಳಿಸಿದ್ದಾರೆ.


ವೈರಸ್ ಜನರಲ್ಲಿ ಹರಡುವುದನ್ನು ತಡೆಗಟ್ಟುವಲ್ಲಿ ಮುಖಗವಸುಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ಅಧ್ಯಯನವು SARS-CoV-2 ಗಾಳಿಯಲ್ಲಿ ಎಷ್ಟು ಹರಡುತ್ತದೆ..? ಹಾಗೂ ಬಟ್ಟೆ ಅಥವಾ ಸರ್ಜಿಕಲ್ ಮಾಸ್ಕ್ ಮೂಲಕ ಕೋವಿಡ್ -19 ಸೋಂಕಿತ ಜನರು ಎಷ್ಟು ಕಡಿಮೆ ವೈರಸ್ ಅನ್ನು ಗಾಳಿಯಲ್ಲಿ ಹೊರಹಾಕಿದರು ಎಂಬುದನ್ನು ಪರೀಕ್ಷಿಸಿದರು.


ಇದನ್ನೂ ಓದಿ: ಮಕ್ಕಳಾಗಲ್ಲ ಎಂಬ ಮೂಢನಂಬಿಕೆ; ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಪಾವಗಡ ತಾಲೂಕು ಜನರು

ಬಿಗಿಯಾದ ಮಾಸ್ಕ್‌ ಕೋವಿಡ್-19 ಇರುವ ವ್ಯಕ್ತಿಯ ಸುತ್ತಲಿನ ಗಾಳಿಯಲ್ಲಿರುವ ವೈರಸ್‌ ಹೊಂದಿರುವ ಕಣಗಳನ್ನು ಗಣನೀಯವಾಗಿ ತಗ್ಗಿಸುತ್ತವೆ ಎಂಬುದನ್ನು ಕಂಡುಹಿಡಿಯಲಾಗಿದ್ದು ಮಾಸ್ಕ್‌ಗಳು ವೈರಸ್ ಕಣಗಳ ಪ್ರಮಾಣವನ್ನು 50%ನಷ್ಟು ಕಡಿಮೆಗೊಳಿಸಿವೆ ಎಂಬುದು ತಿಳಿದುಬಂದಿದೆ. ಅದೇ ರೀತಿ ಸಡಿಲವಾದ ಬಟ್ಟೆಯ ಮಾಸ್ಕ್ ಅಥವಾ ಸರ್ಜಿಕಲ್ ಮಾಸ್ಕ್‌ಗಳು ವೈರಸ್‌ಗಳು ಗಾಳಿಯಲ್ಲಿ ಬಿಡುಗಡೆಯಾಗುವುದನ್ನು ತಡೆಯಲಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: