COVID-19 effect: ಕೋವಿಡ್ ನಿಂದಾಗಿ ತಾಜ್ ಮಹಲ್ ಆಫ್‌ಲೈನ್‌ ಟಿಕೆಟ್ ಬಂದ್

ಭಾರತೀಯ ಪುರಾತತ್ವ ಇಲಾಖೆಯ ಈ ಕ್ರಮ ಕೊರೊನಾ ತಗ್ಗಿಸಲು ಸಹಾಯಕಾರಿಯಾದ್ರೆ ಗ್ರಾಮೀಣ ಭಾಗದ ಜನರಿಗೆ ಮತ್ತು ಸ್ಮಾರ್ಟ್ ಫೋನ್ಹೊಂದಿಲ್ಲದವರಿಗೆ ತೊಂದರೆ ಆಗಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊರೊನಾ ಸಾವು-ನೋವಿನಲ್ಲಿ (Corona death) ಇಳಿಕೆ ಕಂಡಿದ್ದ ಭಾರತದಲ್ಲೀಗ ಮತ್ತೆ ಮಹಾಮಾರಿ ಅಬ್ಬರಿಸುತ್ತಿದೆ. ಎಲ್ಲೆಡೆ ರೂಪಾಂತರಿ (Mutant) ಕೊರೊನಾದ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗ್ಲೇ ನೈಟ್ ಕರ್ಪ್ಯೂ , ಸಮಾರಂಭಗಳಿಗೆ ಸೀಮಿತಾವಕಾಶ, ಶಾಲೆ ಬಂದ್ , ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನಿಷೇಧ ಇನ್ನಿತರ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬಂದಿವೆ. ಕೊರೊನಾ ಭಯ ಮರೆತು ಜನ ಟ್ರಿಪ್, ಅಲ್ಲಿ-ಇಲ್ಲಿ ಸುತ್ತಾಡ್ತಿದ್ರು ಆದ್ರೆ ಇದೀಗ ಅದೆಲ್ಲದಕ್ಕೂ ಬ್ರೇಕ್ ಬೀಳೋ ಟೈಮ್ ಬಂದಿದೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೂ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ವಿಶ್ವ ಪ್ರಸಿದ್ಧಿ ತಾಜ್ ಮಹಲ್‌ಗೂ (Taj Mahal) ಈಗ ಕೆಲವು ನಿರ್ಬಂಧ (Restrictions) ಹಾಕಲಾಗಿದೆ.

ಆನ್‌ಲೈನ್‌ನಲ್ಲಿ ಟಿಕೆಟ್‌
ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧಿ ತಾಜ್ ಮಹಲ್ ಆಡಳಿತ ಮಂದಿ ಕಟ್ಟೆಚ್ಚರ ವಹಿಸಿದೆ. ತಾಜ್ ಮಹಲ್‌ಗೆ ಪ್ರತಿದಿನ ಸಾವಿರಾರುದೇಶೀಯ, ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹೀಗಾಗಿ ಕೋವಿಡ್-19 ಹೆಚ್ಚುತ್ತಿದಂತೆ ಎಚ್ಚೆತ್ತ ತಾಜ್ ಆಡಳಿತ ವರ್ಗ ಆಫ್‌ಲೈನ್‌ ಟಿಕೆಟ್ ಕೌಂಟರ್ ಅನ್ನು ಬಂದ್ ಮಾಡಿದೆ. ಸ್ಮಾರಕಕ್ಕೆ ಭೇಟಿ ನೀಡಲು ಪ್ರವಾಸಿಗರು ಈಗ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡು ಭೇಟಿನೀಡಬೇಕು .

ಇದನ್ನೂ ಓದಿ: Taj Mahal : ಪತ್ನಿ ಮೇಲಿನ ಪ್ರೀತಿಗಾಗಿ ತಾಜ್​ಮಹಲ್​ ಮಾದರಿ ಮನೆ ನಿರ್ಮಾಣ: ಇವರೇ ಕಲಿಯುಗದ ಶಹಜಹನ್​!

ಭಾರತೀಯ ಪುರಾತತ್ವ ಇಲಾಖೆಯು (ASI ) ತಾಜ್ ಮಹಲ್‌ಗೆ ಭೇಟಿ ನೀಡಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಆನ್‌ಲೈನ್ ಬುಕಿಂಗ್ಸೌಲಭ್ಯವನ್ನು ನೀಡಿದೆ. ಆದರೂ, ಹೆಚ್ಚುವರಿ ಟಿಕೆಟ್ ಖರೀದಿಸಲು 200 ರೂ. ದರ ನಿಗದಿ ಮಾಡಿ ತಾಜ್ ಮಹಲ್ ಮುಖ್ಯ ಗುಮ್ಮಟದ ಒಳಗೆ jasmine ಫ್ಲೋರ್‌ನಲ್ಲಿ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಈ ಮೊದಲುಎಎಸ್‌ಐ ಹಲವು ಕೌಂಟರ್‌ಗಳನ್ನು ತೆರೆದಿತ್ತು. ಆದರೆ, ಜನರು ಮಾಸ್ಕ್‌, ಸಾಮಾಜಿಕ ಅಂತರ ಸರಿಯಾಗಿ ಪಾಲಿಸದ ಕಾರಣ ಇವುಗಳನ್ನು ಮುಚ್ಚಲಾಗಿದೆ.

ಸ್ಮಾರಕಗಳ ಟಿಕೆಟ್ ಕೌಂಟರ್‌ ಬಂದ್
ಭಾರತೀಯ ಪುರಾತತ್ವ ಇಲಾಖೆಯು ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಮತ್ತು ಸ್ಮಾರ್ಟ್‌ಫೋನ್ ಹೊಂದಿಲ್ಲದವರಿಗೆ ಅನುಕೂಲಮಾಡಿಕೊಡಲು ಆಫ್‌ಲೈನ್‌ ಟಿಕೆಟ್ ವ್ಯವಸ್ಥೆ ಮಾಡಿತ್ತು. ನವೆಂಬರ್ 27 ರಿಂದ ತಾಜ್ ಮಹಲ್ ಮತ್ತು ಡಿಸೆಂಬರ್ 1 ರಿಂದ ಇತರ ಸ್ಮಾರಕಗಳಲ್ಲಿಟಿಕೆಟ್ ಕೌಂಟರ್‌ಗಳನ್ನು ಮರು ಪ್ರಾರಂಭಿಸಿತ್ತು. ಆದ್ರೆ ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆಎಲ್ಲಾ ಸ್ಮಾರಕಗಳ ಟಿಕೆಟ್ ಕೌಂಟರ್‌ ಅನ್ನು ಈಗ ಬಂದ್ ಮಾಡಿದೆ. ಪ್ರವಾಸಿಗರು ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ಗಳನ್ನು ಕಾಯ್ದಿರಿಸಿ ತಾಜ್ ಮಹಲ್ನೋಡಲು ಬರಬೇಕಿದೆ.

ಭಾರತೀಯ ಪುರಾತತ್ವ ಇಲಾಖೆಯು ಆಗ್ರಾದ ತಾಜ್ ಮಹಲ್ ಜೊತೆಗೆ ಆಗ್ರಾ ಕೋಟೆ, ಫತೇಪುರ್ ಸಿಕ್ರಿ, ಸಿಕಂದ್ರ, ಎತ್ಮೌದ್ದೌಲಾ, ಮೆಹ್ತಾಬ್ ಬಾಗ್, ರಾಮ್‌ಬಾಗ್ ಮತ್ತು ಮೇರಿಯಮ್ ಸಮಾಧಿಗಳಿಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ತಾಜ್ ಮಹಲ್‌ಗೆ ಹೋಗೋ ಮುನ್ನ ಅದರ ಅಧಿಕೃತ ವೆಬ್‌ಸೈಟ್‌ ಅಥವಾ ಕಚೇರಿಗೆ ಕರೆ ಮಾಡಿಕೊಂಡು ಮಾಹಿತಿ ತಿಳಿದುಕೊಳ್ಳೋದು ಉತ್ತಮ.

ಇದನ್ನೂ ಓದಿ: Lalith Mahal Palace: ಶತಮಾನದ ಸಂಭ್ರಮದಲ್ಲಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್

ಕೊರೊನಾ ತಗ್ಗಿಸಲು ಸಹಾಯಕಾರಿ
ಭಾರತೀಯ ಪುರಾತತ್ವ ಇಲಾಖೆಯ ಈ ಕ್ರಮ ಕೊರೊನಾ ತಗ್ಗಿಸಲು ಸಹಾಯಕಾರಿಯಾದ್ರೆ ಗ್ರಾಮೀಣ ಭಾಗದ ಜನರಿಗೆ ಮತ್ತು ಸ್ಮಾರ್ಟ್ ಫೋನ್ಹೊಂದಿಲ್ಲದವರಿಗೆ ತೊಂದರೆ ಆಗಬಹುದು. ಆದಾಗ್ಯೂ ಇಲ್ಲಿ ಭೇಟಿ ನೀಡುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್‌, ಸಾಮಾಜಿಕಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ. ಅದೇನೇ ಇರಲಿ ದೇಶದಲ್ಲಿ ಮಹಾಮಾರಿ ಸೋಂಕು ಕಡಿಮೆ ಆಗಿ ಯಾವುದೇ ಸಾವು ನೋವುಗಳುಸಂಭವಿಸದೇ ಇರಲಿ. ಸ್ವಲ್ಪ ದಿನ ಅಲ್ಲಿ ಇಲ್ಲಿ ಹೋಗದೆ ಮನೆಯಲ್ಲಿ ಇರುವುದು ಸುರಕ್ಷಿತ. ಕೊರೊನಾ ತಗ್ಗಿಸುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಮುಖ್ಯವಾಗಿದ್ದು ನಾವೆಲ್ಲಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ .
Published by:vanithasanjevani vanithasanjevani
First published: