Covid 19: ಮತ್ತೆ ಆವರಿಸಿದೆ ಕೊರೊನಾ ಭೀತಿ, WHOನಿಂದ ಆಘಾತಕಾರಿ ವರದಿ, ಏಷ್ಯಾಗಿದು ಎಚ್ಚರಿಕೆಯ ಕರೆಗಂಟೆ!

ಕಳೆದ ವಾರ 54 ಲಕ್ಷ ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು WHO ಹೇಳಿದೆ. ಇದು ಹಿಂದಿನ ವಾರಕ್ಕಿಂತ 24 ಶೇಕಡಾ ಕಡಿಮೆಯಾಗಿದೆ ಎಂಬುವುದು ಸಮಾಧಾನದ ವಿಚಾರವಾಗಿದ್ದರೂ, ಸಾವಿನ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂಬುವುದು ಅಷ್ಟೇ ಆತಂಕ ಸೃಷ್ಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಆ.19): ವಿಶ್ವ ಆರೋಗ್ಯ ಸಂಸ್ಥೆ (World Health Organization) ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕಳೆದ ವಾರ ಕೊರೊನಾ ವೈರಸ್ (Covid 19) ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಕಾಲು ಭಾಗದಷ್ಟು ಕಡಿಮೆಯಾಗಿದೆ. ಇತ್ತ ಸಾವಿನ ಸಂಖ್ಯೆ ಆರು ಪ್ರತಿಶತದಷ್ಟು ಕಡಿಮೆಯಾಗಿದೆಯಾದರೂ, ಏಷ್ಯಾದ ಕೆಲ ಭಾಗಗಳಲ್ಲಿ ಇದು ಬಹಳಷ್ಟು ಹೆಚ್ಚು ಇದೆ. ಕಳೆದ ವಾರ 5.4 ಮಿಲಿಯನ್ ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ WHO ಹೇಳಿದೆ, ಇದು ಹಿಂದಿನ ವಾರಕ್ಕಿಂತ 24 ಶೇಕಡಾ ಕಡಿಮೆಯಾಗಿದೆ. ಆಫ್ರಿಕಾ ಮತ್ತು ಯುರೋಪ್‌ನಲ್ಲಿ (Africa And Europe) ಪ್ರಕರಣಗಳು ಸುಮಾರು 40 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಮಧ್ಯಪ್ರಾಚ್ಯದಲ್ಲಿ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ. ಆದರೆ ಪಶ್ಚಿಮ ಪೆಸಿಫಿಕ್ ಮತ್ತು ಆಗ್ನೇಯ ಏಷ್ಯಾದಲ್ಲಿ ಕೊರೊನಾ ವೈರಸ್ ಸಾವುಗಳು ಕ್ರಮವಾಗಿ ಶೇಕಡಾ. 31 ಮತ್ತು ಶೇಕಡಾ 12 ಹೆಚ್ಚಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಶೇಕಡಾ 35 ರಷ್ಟು ಹೆಚ್ಚಾಗಿದೆ. ಕಳೆದ ವಾರ 15,000 ಸಾವುಗಳು ಸಂಭವಿಸಿವೆ ಎಂದು ಅವರು ಹೇಳಿದರು. "ಒಂದು ವಾರದಲ್ಲಿ 15,000 ಸಾವುಗಳು ಯಾವುದೇ ರೀತಿಯಲ್ಲಿ ಸ್ವೀಕಾರಾರ್ಹವಲ್ಲ, ಆದರೆ ಸೋಂಕನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ನಾವು ಎಲ್ಲಾ ಸಾಧನಗಳನ್ನು ಹೊಂದಿದ್ದೇವೆ" ಎಂದು ಅವರು ಹೇಳಿದರು, ಪ್ರತಿ ವಾರ ಹಂಚಿಕೊಳ್ಳುವ ವೈರಸ್ ಸರಣಿಗಳ ಸಂಖ್ಯೆ ಶೇಕಡಾ 90ರಷ್ಟು ಕಡಿಮೆಯಾಗಿದೆ. ಹೀಗಾಗಿ ಕೋವಿಡ್-19 ಹೇಗೆ ರೂಪಾಂತರಗೊಳ್ಳುತ್ತದೆ ಎಂದು ಪತ್ತೆ ಹಚ್ಚುವುದು ವಿಜ್ಞಾನಿಗಳಿಗೆ ಬಹಳ ಕಷ್ಟವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿCoronavirus: ಡೆಲ್ಟಾ ರೂಪಾಂತರ ಮಕ್ಕಳಿಗೆ ಅಪಾಯಕಾರಿನಾ..? ತಜ್ಞರು ಹೇಳುವುದು ಹೀಗೆ..

ಹೀಗಿರುವಾಗಲೇ ಇತ್ತ ಭಾರತದಲ್ಲಿ ಒಂದು ದಿನದಲ್ಲಿ 12,608 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾದ ನಂತರ, ದೇಶದಲ್ಲಿ ಸೋಂಕಿತರ ಸಂಖ್ಯೆ 4,42,98,864 ಕ್ಕೆ ಏರಿದೆ. ಇದೇ ವೇಳೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 1,01,343 ಕ್ಕೆ ಇಳಿದಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ನವೀಕರಿಸಿದ ಮಾಹಿತಿಯ ಪ್ರಕಾರ, ಸೋಂಕಿನಿಂದ 72 ಜನರು ಸಾವನ್ನಪ್ಪಿದ ನಂತರ ದೇಶದಲ್ಲಿ ಸಾವಿನ ಸಂಖ್ಯೆ 5,27,206 ಕ್ಕೆ ಏರಿದೆ.

ಕೊರೊನಾ ಸೋಂಕಿತರಿಗೆ ಲಭ್ಯವಿರುವ ಔಷಧಗಳ ಪಟ್ಟಿ ಇಲ್ಲಿದೆ.

ಆರಂಭದಲ್ಲಿ ಕೊರೊನಾ ವೈರಸ್ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಹೀಗಾಗಿ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರು ರೋಗಿಗಳ ಆರೋಗ್ಯದ ಮೇಲೆ ದೀರ್ಘಕಾಲೀನ ಅಡ್ಡ ಪರಿಣಾಮ ಬೀರುವ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ತಮ್ಮ ಆದ್ಯತೆಯನ್ನು ನಿಗದಿಪಡಿಸಿಕೊಂಡಿದ್ದರು.

ಕೊರೊನಾದ ಪ್ರಥಮ ಅಲೆಯ ಸಂದರ್ಭದಲ್ಲಿ ಐವರ್‌ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಹಾಗೂ ಎಚ್‌ಐವಿ ನಿರೋಧಕ ಔಷಧ ಮಿಶ್ರಣಗಳು, ಲೋಪಿನಾವಿರ್/ರಿಟೊನಾವಿರ್ ಔಷಧಗಳ ಬಳಕೆ ವೇಗ ಪಡೆದುಕೊಂಡವಾದರೂ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಚಿಕಿತ್ಸೆಗಳನ್ನು ನಿಲ್ಲಿಸಿತು. ಹಾಗೂ ತನ್ನ ಚಿಕಿತ್ಸಾ ಶಿಷ್ಟಾಚಾರದ ಪಟ್ಟಿಯಿಂದ ಹಿಂಪಡೆಯಿತು.

ಇನ್ನೊಂದೆಡೆ ಸರ್ಕಾರಿ ಸಮಿತಿಯು ಸಾಧಾರಣದಿಂದ ತೀವ್ರ ಅಸೌಖ್ಯಕ್ಕೆ ಗುರಿಯಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮ್‌ಡೆಸಿವಿರ್ ಹಾಗೂ ಟೋಸಿಲಿಜುಮಾಬ್ ಔಷಧಗಳನ್ನು ತನ್ನ ಚಿಕಿತ್ಸಾ ಶಿಷ್ಟಾಚಾರ ಪಟ್ಟಿಯಲ್ಲಿ ಉಳಿಸಿಕೊಂಡಿತು. ಮೊದಲ ಔಷಧವು ವೈರಸ್‌ ದ್ವಿಗುಣಗೊಳ್ಳುವ ಪ್ರಕ್ರಿಯೆ ತಡೆಯುವ ಕೆಲಸ ನಿರ್ವಹಿಸಿದರೆ, ನಂತರದ್ದು ಸೈಟೊಕೈನ್ ಬಿರುಗಾಳಿ ಸಾಧ್ಯತೆ ತಡೆಯುವ ಮೊನಿಕ್ಲೊನಾಲ್ ಪ್ರತಿಕಾಯವಾಗಿತ್ತು.ಗಂಭೀರವಾದ ಕೊರೊನಾ ಸೋಂಕು ದೇಹದಲ್ಲಿ ದೀರ್ಘಕಾಲದ ಹಾಗೂ ವ್ಯವಸ್ಥಿತ ಉರಿಯೂತ ಸ್ಪಂದನೆ ಉಂಟು ಮಾಡುವ ಸಾಧ್ಯತೆ ಇದೆ. SARS COV-2 ವೈರಸ್‌ನಿಂದ ಉಂಟಾಗುವ ಉರಿಯೂತ ತಗ್ಗಿಸುವಲ್ಲಿ ಸ್ಡಿರಾಯ್ಡ್‌ಗಳು ನೆರವಾಗುತ್ತವೆ. ಸ್ಟಿರಾಯ್ಡ್‌ಗಳು ಯಾವುದೇ ಬಗೆಯಲ್ಲೂ ರೋಗವನ್ನು ಗುಣಪಡಿಸದಿದ್ದರೂ, ಉರಿಯೂತದಿಂದ ದೇಹದಲ್ಲಿ ಉಂಟಾಗುವ ತೀವ್ರ ಸ್ವರೂಪದ ರೋಗಲಕ್ಷಣಗಳಿಂದ ಕೊಂಚ ಮಟ್ಟಿನ ಚೇತರಿಕೆ ನೀಡುತ್ತವೆ.

ಆ್ಯಂಟಿ-ವೈರಲ್ ಔಷಧ

ಇನ್ಯಾವುದೇ ಆ್ಯಂಟಿ-ವೈರಲ್ ಔಷಧದ ರೀತಿಯೇ ಕೋವಿಡ್-19 ಮಾತ್ರೆ ಕೂಡಾ ವೈರಸ್‌ನ ದ್ವಿಗುಣಗುಳ್ಳುವ ಸಾಮರ್ಥ್ಯವನ್ನು ಶೂನ್ಯಗೊಳಿಸುತ್ತದೆ. ಲಸಿಕೆಗಳು ವೈರಸ್ ದೇಹ ಪ್ರವೇಶಿಸದಂತೆ ತಡೆದರೆ, ಈ ಮಾತ್ರೆಗಳು ಸೋಂಕಿನ ನಂತರ ಹೆಚ್ಚು ಹಾನಿಯಾಗುವುದನ್ನು ತಡೆಗಟ್ಟುತ್ತವೆ.

ಇತ್ತೀಚೆಗೆ ಔಷಧ ತಯಾರಿಕಾ ದೈತ್ಯ ಕಂಪನಿ ಮರ್ಕ್ ಅಭಿವೃದ್ಧಿ ಪಡಿಸಿರುವ ಮಾಲ್‌ನ್ಯುಪಿರಾವಿರ್ ಎಂಬ ಬಾಯಿ ಮೂಲಕ ನುಂಗುವ ಆ್ಯಂಟಿ ವೈರಲ್ ಮಾತ್ರೆಗೆ ಕೇಂದ್ರ ಔಷಧ ಮತ್ತು ಮಾಪಕ ನಿಯಂತ್ರಣ ಸಂಘಟನೆಯು ರೋಗಿಗಳಲ್ಲಿ ಆಮ್ಲಜನಕ ಪ್ರಮಾಣವು ಶೇ. 93ರಷ್ಟಿದ್ದು, ರೋಗ ಉಲ್ಬಣಿಸುವ ಅಪಾಯವಿದ್ದಾಗ 'ತುರ್ತು ಸಂದರ್ಭಗಳ ನಿಯಂತ್ರಿತ ಬಳಕೆ'ಗೆ ಅನುಮೋದನೆ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ ಕೊರೋನಾ ಉಲ್ಭಣ ಹಿನ್ನೆಲೆ, ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆ

ಇತ್ತೀಚೆಗೆ ಈ ಐದು ದಿನ ಅವಧಿಯ, ₹ 1399 ದರದ ಸೌಮ್ಯದಿಂದ ಸಾಧಾರಣ ಸೋಂಕಿಗೆ ಬಳಸಲಾಗುವ ಈ ಮಾತ್ರೆಯು ಭಾರತದಲ್ಲಿ ಬಿಡುಗಡೆಯಾಯಿತು. ಇದೇ ಬಗೆಯ ಮಾತ್ರೆಗಳನ್ನು ಡಾ. ರೆಡ್ಡೀಸ್, ನ್ಯಾಟ್ಕೊ, ಮೈಲಾನ್ ಹಾಗೂ ಹೆಟೆರೊ ಔಷಧ ಕಂಪನಿಗಳು ತಯಾರಿಸುವ ಪ್ರಯತ್ನದಲ್ಲಿವೆ.

ಆ್ಯಂಟಿವೈರಲ್ ಮಾತ್ರೆಯಿಂದ ಅಪಾಯ

ಔಷಧ ನಿಯಂತ್ರಕರು ಈ ಬಾಯಿ ಮೂಲಕ ಸೇವಿಸುವ ಆ್ಯಂಟಿವೈರಲ್ ಮಾತ್ರೆಯನ್ನು ಅನುಮೋದಿಸಿದ್ದರೂ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕರಾದ ಡಾ. ಬಲರಾಂ ಭಾರ್ಗವ್ ಈ ಮಾತ್ರೆಗಳ ದುರ್ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಬಹು ರೂಪಾಂತರ, ಸ್ನಾಯು ಹಾಗೂ ಮೂಳೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
Published by:Precilla Olivia Dias
First published: