ಇಂದಿನಿಂದ ದೇಶದಲ್ಲಿ ಎರಡು ಕಡೆ ಕೋವಿ ಶೀಲ್ಡ್ ವ್ಯಾಕ್ಸಿನ್ ಪ್ರಯೋಗ

ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಅಸ್ಟ್ರಾಜೆನಿಕಾ ಫಾರ್ಮಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್‌ ಈ ಪ್ರಯೋಗಗಳು ನಡೆಯುತ್ತಿವೆ.

news18-kannada
Updated:September 26, 2020, 2:16 PM IST
ಇಂದಿನಿಂದ ದೇಶದಲ್ಲಿ ಎರಡು ಕಡೆ ಕೋವಿ ಶೀಲ್ಡ್ ವ್ಯಾಕ್ಸಿನ್ ಪ್ರಯೋಗ
ಕೊರೋನಾ ವೈರಸ್
  • Share this:
ನವದೆಹಲಿ(ಸೆ.  26): ಕೊರೋನಾಗೆ ಮದ್ದು ಕಂಡುಹಿಡಿಯಲು ಇಡೀ‌ ಜಗತ್ತೇ ಹರಸಾಹಸ ಪಡುತ್ತಿದೆ. ಭಾರತದಲ್ಲೂ ಅಂತ ಪ್ರಯತ್ನ ನಡೆಯುತ್ತಿದ್ದು ಇಂದಿನಿಂದ ದೇಶದಲ್ಲಿ ಕೋವಿ ಶೀಲ್ಡ್ ವ್ಯಾಕ್ಸಿನ್ ಪರೀಕ್ಷೆ ಮಾಡಲಾಗುತ್ತಿದೆ. ಇಂದಿನಿಂದ ದೇಶದಲ್ಲಿ ಚಂಡಿಗಡದ ಪಿಜಿಐಎಂಇಆರ್ (PGIMER) ಪ್ರಯೊಗಾಲಯ ಹಾಗೂ ಮುಂಬೈನ ಕೆಇಎಂ (KEM) ಆಸ್ಪತ್ರೆಯಲ್ಲಿ ಪರೀಕ್ಷೆಗಳನ್ನು ಮಾಡಲು ನಿಶ್ಚಯಿಸಲಾಗಿದೆ. ಚಂಡಿಗಡದ ಪಿಜಿಐಎಂಇಆರ್ ಪ್ರಯೋಗಾಲಯದಲ್ಲಿ 57, 33 ಹಾಗೂ 26 ವಯಸ್ಸಿನವರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಹೀಗೆ ಒಟ್ಟು 100 ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ 13 ಸ್ವಯಂಸೇವಕರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಅಸ್ಟ್ರಾಜೆನಿಕಾ ಫಾರ್ಮಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್‌ ಈ ಪ್ರಯೋಗಗಳು ನಡೆಯುತ್ತಿವೆ.

ಈ ಪ್ರಯೋಗಗಳು ಮುಗಿಯಲು ಎಷ್ಟು ದಿನ‌ ಕಾಲಾವಕಾಶ ಬೇಕು ಎಂಬ ಮಾಹಿತಿಗಳು ಸದ್ಯಕ್ಕೆ ಹೊರಬಿದ್ದಿಲ್ಲ. ಆದರೆ ಪ್ರಯೋಗಗಳು ಆರಂಭ ಆಗುತ್ತಿರುವುದು ಶುಭಸುದ್ದಿ. ವಿವಿಧ ವಯಸ್ಸಿನ 100ಕ್ಕೂ ಹೆಚ್ಚು ಜನರ ಮೇಲೆ ನಡೆಸುತ್ತಿರುವ ಪ್ರಯೋಗ ಯಶಸ್ವಿಯಾದರೆ ಮುಂದಿನ‌ ಹಂತವೂ ಶೀಘ್ರದಲ್ಲೇ ಆರಂಭವಾಗಲಿದೆ.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂದೆ ಕಾರ್ಪೋರೇಟ್​ ಕಂಪನಿಗಳ ಪ್ರಭಾವ; ಸಿದ್ದರಾಮಯ್ಯ ವಾಗ್ದಾಳಿ

ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಮೊದಲು ಪ್ರತಿದಿನ ಸುಮಾರು ಒಂದು ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ತುಸು ಕಡಿಮೆಯಾಗಿದೆ. ಆದರೂ ದೇಶದ ಕೊರೊನಾ ಪೀಡಿತರ ಸಂಖ್ಯೆ 59 ಲಕ್ಷ ದಾಟಿದೆ. ಭಾರತದಲ್ಲಿ ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಸೆಪ್ಟೆಂಬರ್ 17ರಿಂದ 95ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇದಾದ ಬಳಿಕ ಸೆಪ್ಟೆಂಬರ್ 20ರಿಂದ ಇಳಿಕೆಯಾಗಿದೆ.

ಸೆಪ್ಟೆಂಬರ್ 20ರಂದು 86,961 ಪ್ರಕರಣಗಳು, ಸೆಪ್ಟೆಂಬರ್ 21ರಂದು 75,083 ಪ್ರಕರಣಗಳು, ಸೆಪ್ಟೆಂಬರ್ 22ರಂದು 83,347 ಪ್ರಕರಣಗಳು, ಸೆಪ್ಟೆಂಬರ್ 23ರಂದು 86,508 ಪ್ರಕರಣಗಳು ಹಾಗೂ ಸೆಪ್ಟೆಂಬರ್ 24ರಂದು 86,052 ಪ್ರಕರಣಗಳು ದಾಖಲಾಗಿದ್ದವು. ಸೆಪ್ಟೆಂಬರ್ 25ರಂದು 85,362 ಪ್ರಕರಣಗಳು ಕಂಡುಬಂದಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 59,03,933ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಶುಕ್ರವಾರ 1,089ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 93 ಸಾವಿರದ ಗಡಿ‌ ದಾಟಿದ್ದು 93,379ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 48,49,585 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,60,969 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.
Published by: Latha CG
First published: September 26, 2020, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading