ಪಿ.ಚಿದಂಬರಂ ನ್ಯಾಯಾಂಗ ಬಂಧನಕ್ಕೆ ಕೋರ್ಟ್​ ಆದೇಶ; ತಿಹಾರ್ ಜೈಲಿಗೆ ಕೇಂದ್ರದ ಮಾಜಿ ಸಚಿವ

ಆದರೆ, ಸಿಬಿಐ, ಆರೋಪಿ ಪ್ರಭಾವಶಾಲಿ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ವಾದಿಸಿತು. ಇದಕ್ಕೆ ಪ್ರತಿವಾದ ಮಾಡಿದ ಸಿಬಾಲ್​, ಸಾಕ್ಷ್ಯಗಳನ್ನು ತಿರುಚುವ ಅಥವಾ ಪ್ರಭಾವ ಬೀರುವ ಯಾವುದೇ ಪ್ರಕರಣಗಳು ಇಲ್ಲಿಲ್ಲ ಎಂದು ಹೇಳಿದರು.

HR Ramesh | news18-kannada
Updated:September 6, 2019, 9:43 AM IST
ಪಿ.ಚಿದಂಬರಂ ನ್ಯಾಯಾಂಗ ಬಂಧನಕ್ಕೆ ಕೋರ್ಟ್​ ಆದೇಶ; ತಿಹಾರ್ ಜೈಲಿಗೆ ಕೇಂದ್ರದ ಮಾಜಿ ಸಚಿವ
ಗುರುವಾರ ದೆಹಲಿ ನ್ಯಾಯಾಲಯಕ್ಕೆ ಪಿ.ಚಿದಂಬರಂ ಆಗಮಿಸಿದ ಕ್ಷಣ.
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ಎಸಗಿರುವ ಅರೋಪ ಎದುರಿಸುತ್ತಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. 

ಚಿದಂಬರಂ (74) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಸಿಬಿಐ ಮಂಡಿಸಿದ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ, ಸೆಪ್ಟೆಂಬರ್​ 19ರವರೆಗೆ ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹೀಗಾಗಿ ಮುಂದಿನ 14 ದಿನಗಳ ಕಾಲ ಚಿದಂಬರಂ ಅವರನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ.

ಚಿದಂಬರಂ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಾಲ್​, ಚಿದಂಬರಂ ಅವರಿಗೆ ಪ್ರತ್ಯೇಕ ಸೆಲ್​, ಮಂಚ, ವೆಸ್ಟರ್ನ್​ ಟಾಯ್ಲೆಟ್​ ಮತ್ತು ಔಷಧಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದರು.

ಇದನ್ನು ಓದಿ: ಇಡಿ ಬಳಿ ಇದೆ ‘ವಿಶಾಲಾಕ್ಷಿ’ ಅಸ್ತ್ರ; ಡಿಕೆ ಶಿವಕುಮಾರ್​ಗೆ ಕಂಟಕವಾಗ್ತಾರಾ ರಾಜವಂಶಸ್ಥೆ?

ಚಿದಂಬರಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ತೀವ್ರವಾಗಿ ವಿರೋಧಿಸಿ ಕಪಿಲ್ ಸಿಬಾಲ್​ ವಾದ ಮಂಡಿಸಿದರು. ಚಿದಂಬರಂ ಬಂಧಿಸಲು ಜಾರಿ ನಿರ್ದೇಶನಾಲಯ ಸಿದ್ಧವಾಗಿತ್ತು ಎಂದು ಹೇಳಿದರು.

ಜಾರಿ ನಿರ್ದೇಶನಾಲಯಕ್ಕೆ ಬೇಕಿದ್ದರೆ ನಾನು ಅವರ ಕಸ್ಟಡಿಗೆ ಹೋಗಲು ಸಿದ್ಧನಿದ್ದೇನೆ. ಆದರೆ, ನ್ಯಾಯಾಂಗ ಬಂಧನಕ್ಕೆ ಏಕೆ? ಒಂದೋ, ಜಾರಿ ನಿರ್ದೇಶನಾಲಯ ಕಸ್ಟಡಿ ಪಡೆದುಕೊಳ್ಳಲಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಚಿದಂಬರಂ ಹೇಳಿದ್ದರು.

ಆದರೆ, ಸಿಬಿಐ, ಆರೋಪಿ ಪ್ರಭಾವಶಾಲಿ ರಾಜಕಾರಣಿಯಾಗಿದ್ದಾರೆ. ಹೀಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ವಾದಿಸಿತು. ಇದಕ್ಕೆ ಪ್ರತಿವಾದ ಮಾಡಿದ ಸಿಬಾಲ್​, ಸಾಕ್ಷ್ಯಗಳನ್ನು ತಿರುಚುವ ಅಥವಾ ಪ್ರಭಾವ ಬೀರುವ ಯಾವುದೇ ಪ್ರಕರಣಗಳು ಇಲ್ಲಿಲ್ಲ ಎಂದು ಹೇಳಿದರು.ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಿಬಿಐ ವಾದವನ್ನು ಪುರಸ್ಕರಿಸಿ, ಚಿದಂಬರಂ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

First published:September 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading