ಟ್ರಸ್ಟ್ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ಗೆ 20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್

ಡೆಮಾಕ್ರಟಿಕ್ ಪಕ್ಷದವರೂ ಆದ ನ್ಯೂಯಾರ್ಕ್ ಅಟಾರ್ನಿ ಜನರಲ್ ಆಗ ಕಾರ್ಯನಿರ್ವಹಿಸುತ್ತಿರುವ ಲೆತಿಶಿಯಾ ಜೆಮ್ಸ್ ಅವರು ಈ ಸಂಬಂಧ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.

HR Ramesh | news18-kannada
Updated:November 8, 2019, 2:48 PM IST
ಟ್ರಸ್ಟ್ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ಗೆ 20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್
  • Share this:
ನ್ಯೂಯಾರ್ಕ್: ತಮ್ಮ ಚಾರಿಟೇಬಲ್ ಟ್ರಸ್ಟ್​ನ ಹಣವನ್ನು 2016ರ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪದ ಮೇಲೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ 20 ಲಕ್ಷ ಡಾಲರ್ ದಂಡವನ್ನು ವಿಧಿಸಿದೆ.

ಹಣ ದುರ್ಬಳಕೆ ಪ್ರಕರಣದ ವಿಚಾರಣೆ ನಡೆಸಿದ ನೂಯಾರ್ಕ್ ಸುಪ್ರೀಂಕೋರ್ಟ್ ನ್ಯಾ.ಸಾಲಿಯನ್ ಸ್ಕಾರ್ಪುಲ್ಲಾ ಅವರು, ಸರ್ಕಾರೇತರ ಸಂಸ್ಥೆಗಳನ್ನು ಯಾವುದೇ ದುರುದ್ದೇಶಕ್ಕಾಗಲಿ, ವೈಯಕ್ತಿಕ ಲಾಭಕ್ಕಾಗಲಿ ಬಳಸಿಕೊಳ್ಳುವಂತಿಲ್ಲ. ಆದರೆ, ಟ್ರಂಪ್ ಅವರ ತಮ್ಮ ಟ್ರಂಪ್ ಚಾರಿಟೇಬಲ್ ಟ್ರಸ್ಟ್​ಅನ್ನು ರಾಜಕೀಯ ಮತ್ತು ವ್ಯವಹಾರಿಕ ಲಾಭಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ಆ ಮೂಲಕ ನಾಗರಿಕ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಟ್ರಂಪ್ ಅವರಿಗೆ 2 ಮಿಲಿಯನ್ ಡಾಲರ್ ದಂಡ ವಿಧಿಸಿದರು.

ಡೆಮಾಕ್ರಟಿಕ್ ಪಕ್ಷದವರೂ ಆದ ನ್ಯೂಯಾರ್ಕ್ ಅಟಾರ್ನಿ ಜನರಲ್ ಆಗ ಕಾರ್ಯನಿರ್ವಹಿಸುತ್ತಿರುವ ಲೆತಿಶಿಯಾ ಜೆಮ್ಸ್ ಅವರು ಈ ಸಂಬಂಧ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಕಳೆದ ವರ್ಷ ಜೂನ್​ನಲ್ಲಿ ಹೂಡದ್ದ ದಾವೆಯಲ್ಲಿ ಟ್ರಂಪ್ ಅವರ ನಿರಂತರ ಕಾನೂನುಬಾಹಿರ ನಡವಳಿಕೆ ಬಗ್ಗೆ ಆರೋಪಿಸಿದ್ದರು.

ನ್ಯೂಯಾರ್ಕ್ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಜೇಮ್ಸ್ ಅವರು, ಚಾರಿಟೇಬಲ್ ಟ್ರಸ್ಟ್​ನ ಹಣ ಮತ್ತು ಚಾರಿಟಿಯನ್ನು ದುರುದ್ದೇಶಕಜ್ಕೆ ಬಳಸಿಕೊಳ್ಳುವವರ ವಿರುದ್ಧ ತಮಗೆ ಸಿಕ್ಕ ಬಹುದೊಡ್ಡ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಅಮೆರಿಕ ಸ್ಥಳೀಯ ಚುನಾವಣೆಯಲ್ಲಿ ಕನ್ನಡಿಗನಿಗೆ ಜಯ; ಇತಿಹಾಸ ನಿರ್ಮಿಸಿದ ಭಾರತೀಯರು

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading