ಕೋಮು ದ್ವೇಷ ಹರಡುವ ಪ್ರಯತ್ನ; ಕಂಗನಾ ಸಹೋದರಿಯರ ವಿರುದ್ಧ ದೂರು ದಾಖಲಿಸಲು ಕೋರ್ಟ್​ ಸೂಚನೆ

ಕಂಗಾನಾ ಆಕ್ಷೇಪಾರ್ಹ ಟ್ವೀಟ್​ ಮಾಡಿದ್ದಾರೆ. ಇದು ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುವಂತೆ ಇದೆ. ಅಷ್ಟೇ ಅಲ್ಲದೇ , ಅನೇಕ ಕಲಾವಿದರ ಭಾವನೆಗಳು ಚ್ಯುತಿ ತರುತ್ತಿದೆ. ಕಂಗನಾ ಕಲಾವಿದರನ್ನು ಕೋಮು ವರ್ಗದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ

news18-kannada
Updated:October 17, 2020, 4:26 PM IST
ಕೋಮು ದ್ವೇಷ ಹರಡುವ ಪ್ರಯತ್ನ; ಕಂಗನಾ ಸಹೋದರಿಯರ ವಿರುದ್ಧ ದೂರು ದಾಖಲಿಸಲು ಕೋರ್ಟ್​ ಸೂಚನೆ
ಕಂಗನಾ-ರಂಗೋಲಿ
  • Share this:
ಮುಂಬೈ (ಅ.17): ಬಾಲಿವುಡ್​ ನಟಿ ಕಂಗನಾ ರನೌತ್​ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ತಮ್ಮ ಟ್ವೀಟ್​ಗಳ ಮೂಲಕ ಕೋಮು ದ್ವೇಷವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ​ ದೂರಿನ ಕುರಿತು ಎಫ್​ಐಆರ್​ ದಾಖಲಿಸಿ, ತನಿಖೆ  ನಡೆಸುವಂತೆ ನ್ಯಾಯಾಲಯ ತಿಳಿಸಿದೆ. ಬಾಂದ್ರಾ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟರ್​ ಜಯದೇವ್​ ವೈ ಘುಲೆ ಈ ನಿರ್ದೇಶನ ನೀಡಿದ್ದಾರೆ. ನಿರ್ದೇಶಕ ಸಾಹಿಲ್​ ಆಸ್ರಫ್​ಆಲಿ ಸಯ್ಯದ್​ ಈ ಕುರಿತು ನ್ಯಾಯಾಲದಲ್ಲಿ  ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಕ್ರಮಕ್ಕೆ ಮುಂದಾಗಲಾಗಿದೆ. ಕಂಗನಾ ಸೋಹದರರಿಯರ ಮೇಲೆ ಐಪಿಸಿ ಸೆಕ್ಷನ್​ 153ಎ (ದ್ವೇಷವನ್ನು ಉತ್ತೇಜಿಸುವುದು), 295ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ನಡೆಸುವ ದುರುದ್ದೇಶ ಪೂರಿತ ಕೃತ್ಯಗಳು), 124 ಎ (ದೇಶದ್ರೋಹ) ಅಡಿಯಲ್ಲಿ ಅವರು ಎಫ್​ಐಆರ್​ ದಾಖಲಿಸಿದ್ದಾರೆ. ಈ ಕುರಿತು ನಿರ್ದೇಶಕರ ವಕೀಲರಾದ ರವೀಶ್​ ಜಾಮೀನ್ದಾರ್​ ತಿಳಿಸಿದ್ದಾರೆ.

ಕಂಗಾನಾ ಆಕ್ಷೇಪಾರ್ಹ ಟ್ವೀಟ್​ ಮಾಡಿದ್ದಾರೆ. ಇದು ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುವಂತೆ ಇದೆ. ಅಷ್ಟೇ ಅಲ್ಲದೇ , ಅನೇಕ ಕಲಾವಿದರ ಭಾವನೆಗಳು ಚ್ಯುತಿ ತರುತ್ತಿದೆ. ಕಂಗನಾ ಕಲಾವಿದರನ್ನು ಕೋಮು ವರ್ಗದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಯ್ಯದ್​ ದೂರು ನೀಡಿದ್ದಾರೆ.

ಅವರ ಸಹೋದರಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ದ್ವೇಷ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಒದಗಿಸಲಾಗಿದೆ.

ಸದ್ಯ ತನ್ನ ತವರು ಮನಾಲಿಯಲ್ಲಿರುವ ಕಂಗನಾ, ನವರಾತ್ರಿ ಆಚರಣೆ ಮಾಡುತ್ತಿದ್ದಾರೆ. ನವರಾತ್ರಿ ಕುರಿತು ಶುಭಾಶಯ ತಿಳಿಸಿದ ಅವರು ಇದೇ ವೇಳೆ ತಮ್ಮ ಮೇಲೆ ದಾಖಲಾಗಿರುವ ದೂರಿನ ಕುರಿತು ಉಲ್ಲೇಖಿಸಿದ್ದಾರೆ.ದೂರನ್ನು ಪುರಸ್ಕರಿಸಿರುವ ನ್ಯಾಯಾಲಯ ಸಂಬಂಧಪಟ್ಟ ಪೊಲೀಸ್​ ಠಾಣೆಗೆ ಅಗತ್ಯ ಕ್ರಮವನ್ನು ಅನುಸರಿಸಿ ತನಿಖೆ ಮಾಡುವಂಥೆ ಸೂಚನೆ ನೀಡಿದೆ. ಕಂಗನಾ ಮತ್ತು ಆಕೆ ಸಹೋದರಿ ಟ್ವೀಟರ್​, ಎಲೆಕ್ಟ್ರಾನಿಕ್​ ಮಾಧ್ಯಮಗಳ ಸಂದರ್ಶನ ಹೇಳಿಕೆಗಳ ಮೇಲೆ ಈ ಎಲ್ಲಾ ಆರೋಪಗಳಿವೆ. ಈ ಹಿನ್ನಲೆ ತಜ್ಞರಿಂದ ತನಿಖೆ ಅವಶ್ಯಕತೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನು ಓದಿ: ಒಕ್ಕಲಿಗ ಎಂಬ ಹೆಮ್ಮೆ ಇದೆ ಆದರೆ, ನನ್ನ ಜಾತಿ ಕಾಂಗ್ರೆಸ್​; ಡಿಕೆ ಶಿವಕುಮಾರ್​

ಕಳೆದ ಎರಡು ತಿಂಗಳಿನಿಂದ ಬಾಲಿವುಡ್​ನ ವಿರುದ್ಧ ಟೀಕಿಸುತ್ತಿದ್ದ ಅವರು, ಹಿಂದಿ ಚಿತ್ರರಂಗವನ್ನು ಸ್ವಜನ ಪಕ್ಷಪಾತದಿಂದ ತುಂಬಿದೆ. ಚಿತ್ರೋದ್ಯಮ ಗಟಾರದ ರೀತಿ ಆಗಿದೆ. ಅದನ್ನು ಸ್ವಚ್ಛಗೊಳಿಸಬೇಕು ಎಂದೆಲ್ಲಾ ತಮ್ಮ ಟ್ವೀಟ್​ ಹಾಗೂ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಟೀಕಿಸಿದ್ದರು.

ಕಂಗನಾ ವಿರುದ್ಧ ತುಮಕೂರಿನಲ್ಲಿ ಕೂಡ ಎಫ್​ಐಆರ್​ ದಾಖಲಾಗಿದೆ. ಕೃಷಿ ಮಸೂದೆ ವಿರೋಧಿಸಿದ ರೈತರನ್ನು  ಭಯೋತ್ಪಾದಕರು ಎಂದಿದ್ದರು. ಈ ಹಿನ್ನಲೆ ಕ್ಯಾತ್ಸಂದ್ರದಲ್ಲಿ ಬಾಲಿವುಡ್​ ನಟಿ ವಿರುದ್ಧ ದೂರು ದಾಖಲಾಗಿದೆ.
Published by: Seema R
First published: October 17, 2020, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading