• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Divorce Case: 25 ವರ್ಷ ಸಂಬಳವಿಲ್ಲದೇ ಮನೆಕೆಲಸ ಮಾಡಿದ್ದ ಮಾಜಿ ಪತ್ನಿಗೆ ₹1.75 ಕೋಟಿ ಪಾವತಿಸುವಂತೆ ಪತಿಗೆ ಕೋರ್ಟ್​​​​ ಆದೇಶ

Divorce Case: 25 ವರ್ಷ ಸಂಬಳವಿಲ್ಲದೇ ಮನೆಕೆಲಸ ಮಾಡಿದ್ದ ಮಾಜಿ ಪತ್ನಿಗೆ ₹1.75 ಕೋಟಿ ಪಾವತಿಸುವಂತೆ ಪತಿಗೆ ಕೋರ್ಟ್​​​​ ಆದೇಶ

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ಮನೆಗೆಲಸಕ್ಕೆ ಪತ್ನಿಗೆ ಸಂಬಳ ನೀಡದೇ, ತನ್ನ ವ್ಯವಹಾರದಲ್ಲಿನ ಲಾಭಂಶವನ್ನೂ ನೀಡದೇ ಕೇವಲ ಕೆಲಸಕ್ಕೆ ಬಳಸಿಕೊಂಡಿದ್ದರ ಬಗ್ಗೆ ಪತ್ನಿ ಇವಾನಾ ಮೋರಲ್ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

  • Share this:

ಎಲ್ಲಾ ಉದ್ಯೋಗ (Job), ಕೆಲಸಕ್ಕೆ (Work) ಸಂಬಳವಿದೆ. ಆದರೆ ಮನೆಯಲ್ಲಿ ಗಂಡ-ಮಕ್ಕಳನ್ನು (Husband and Children) ನೋಡಿಕೊಂಡು, ಅಡುಗೆ ಮಾಡಿ, ಬಟ್ಟೆ ತೊಳೆದು, ಮನೆಯನ್ನು ಸ್ವಚ್ಛವಾಗಿಡುವ ಗೃಹಿಣಿಯ ಕೆಲಸಕ್ಕೆ ಮಾತ್ರ ಸಂಬಳವೇ ಇಲ್ಲ. ಹಣದ ಹಂಗಿಲ್ಲದೇ ಹಗಲು-ರಾತ್ರಿ ಕೆಲಸ ಮಾಡುವವರು ಯಾರಾದಾರೂ ಇದ್ದಾರೆಯೇ ಎಂದರೆ ಅದು ಗೃಹಿಣಿ (Housewife) ಎನ್ನಬಹುದು. ಮನೆಗೆಲಸದಲ್ಲಿ ಲಿಂಗಭೇದ ಮಾಡಬಾರದು ಎಂದರೂ ಕೆಲ ಪುರುಷರು ಇದನ್ನೇ ಅನುಸರಿಸುತ್ತಾರೆ. ಪುರುಷರ ಈ ವರ್ತನೆಗೆ ಮಹಿಳೆ ಬೇಸತ್ತು ಕೋರ್ಟ್‌ (Court) ಮೆಟ್ಟಿಲೇರಿರುವ ತಾಜಾ ನಿದರ್ಶನಕ್ಕೆ ಈಗ ಸ್ಪೇನ್‌ (Spain) ಸಾಕ್ಷಿಯಾಗಿದೆ. ಹೌದು, ಈ ಒಂದು ಅಂಶವನ್ನೇ ಪರಿಗಣಿಸಿ ನ್ಯಾಯಾಲಯಾವು ವಿಚ್ಚೇದನದ ಪ್ರಕರಣ (Divorce Settlement) ಒಂದರಲ್ಲಿ ಪಾವತಿಯಿಲ್ಲದ ಮನೆಕೆಲಸಕ್ಕಾಗಿ ಮಾಜಿ ಪತ್ನಿಗೆ ₹ 1.75 ಕೋಟಿ ಪಾವತಿಸುವಂತೆ ಮಾಜಿ ಪತಿಗೆ ಕೋರ್ಟ್‌ ಆದೇಶಿಸಿದೆ.


25 ವರ್ಷಗಳಿಂದ ಮನೆಗೆಲಸ ಮಾಡಿದ ಮಾಜಿ ಪತ್ನಿಗೆ 1.75 ಕೋಟಿ ರೂ ಪರಿಹಾರ


ದಕ್ಷಿಣ ಸ್ಪೇನ್‌ನ ವೆಲೆಜ್ ಮಲಗಾದಲ್ಲಿನ ನ್ಯಾಯಾಲಯವು ತನ್ನ ಪತ್ನಿಗೆ ಸುಮಾರು 25 ವರ್ಷಗಳ ಕಾಲ ಸಂಬಳ ನೀಡದೇ ಕೆಲಸ ಮಾಡಿಸಿಕೊಂಡಿದ್ದಕ್ಕಾಗಿ 1.75 ಕೋಟಿ (1,80,000 ಪೌಂಡ್) ಹಣವನ್ನು ಮಾಜಿ ಪತ್ನಿಗೆ ಪಾವತಿಸಲು ಮಾಜಿ ಪತಿಗೆ ಆದೇಶಿಸಿದೆ.


ಮನೆಗೆಲಸಕ್ಕೆ ಪತ್ನಿಗೆ ಸಂಬಳ ನೀಡದೇ, ತನ್ನ ವ್ಯವಹಾರದಲ್ಲಿನ ಲಾಭಂಶವನ್ನೂ ನೀಡದೇ ಕೇವಲ ಕೆಲಸಕ್ಕೆ ಬಳಸಿಕೊಂಡಿದ್ದರ ಬಗ್ಗೆ ಪತ್ನಿ ಇವಾನಾ ಮೋರಲ್ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Gold Smuggling: ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ ಏರ್‌ ಇಂಡಿಯಾ ಸಿಬ್ಬಂದಿ! ತಗ್ಲಾಕ್ಕೊಂಡಿದ್ದು ಮಾತ್ರ ರೋಚಕ ಸುದ್ದಿ!


ಈ ಅಂಶದ ಬಗ್ಗೆ ಒತ್ತು ನೀಡಿದ ನ್ಯಾಯಾಲಯ ದಂಪತಿಗಳ ಮದುವೆಯ ಅವಧಿಯಲ್ಲಿ ವಾರ್ಷಿಕ ಕನಿಷ್ಠ ವೇತನದ ಆಧಾರದ ಮೇಲೆ ಭಾರಿ ವಿಚ್ಛೇದನದ ಪರಿಹಾರವನ್ನು ಲೆಕ್ಕಹಾಕಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ (NYP) ವರದಿ ಮಾಡಿದೆ.


ವಿಚ್ಛೇದನದ ಇತ್ಯರ್ಥದ ವೇಳೆ ಮಹತ್ವದ ತೀರ್ಪು


ನ್ಯಾಯಾಧೀಶರಾದ ಲಾರಾ ರೂಯಿಜ್ ಅಲಮಿನೋಸ್ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಇವಾನ್‌ ಮೊರಾಲ್‌ ಪತಿ ಜೊತೆ 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.


ಪರಿಹಾರದ ಅಂಶವಾಗಿ ಪ್ರಕರಣವೂ ಇನ್ನೂ ಕೋರ್ಟ್‌ ಅಂಗಳದಲ್ಲಿತ್ತು. ಇದೀಗ ವಿಚ್ಛೇದನದ ಇತ್ಯರ್ಥದ ವೇಳೆ ಇವಾನ್‌ ಹೇಳಿಕೆ ಮತ್ತು ಪತಿಯ ಉದ್ಯಮದ ಎಲ್ಲಾ ವರದಿಗಳನ್ನು ಆಧರಿಸಿ ಕೋರ್ಟ್‌ ಇವಾನ್‌ಗೆ ಭಾರಿ ಮೊತ್ತದ ಹಣವನ್ನು ಪರಿಹಾರವನ್ನಾಗಿ ನೀಡಲು ಆದೇಶಿಸಿದೆ.


ದಂಪತಿಗೆ ಮದುವೆಯಾಗಿ ಸುಮಾರು 25 ವರ್ಷಗಳಾಗಿತ್ತು. ಇಬ್ಬರಿಗೂ ಎರಡು ಹೆಣ್ಣು ಮಕ್ಕಳು ಜನಿಸಿದ್ದರು. ವಿಚ್ಛೇದನದ ಬಳಿಕೆ ಎರಡೂ ಮಕ್ಕಳು ಇವಾನ್‌ ಜೊತೆಯಲ್ಲಿದ್ದರು. ಹೀಗಾಗಿ ಇವರನ್ನೆಲ್ಲಾ ನೋಡಿಕೊಂಡು ಇವಾನ್‌ ಜೀವನ ಸಾಗಿಸಬೇಕಿತ್ತು. ಇದನ್ನು ಸಹ ಗಮನಿಸಿದ ಕೋರ್ಟ್ ಪತ್ನಿ ಮತ್ತು ಮಕ್ಕಳಿಗೆ ಮಾಸಿಕ ಜೀವನಾಂಶವನ್ನು ಪಾವತಿಸಲು ನ್ಯಾಯಾಲಯವು ಆದೇಶಿಸಿದೆ.


ಮನೆಕೆಲಸ ಮತ್ತು ತನ್ನ ಜಿಮ್‌ ಕೆಲಸ ಮಾಡಿಸಿಕೊಳ್ಳುತ್ತಿದ್ದ ಪತಿ


ಇವಾನಾ ಮೋರಲ್, ತನ್ನ ಪತಿ ತನ್ನ ಮನೆಯೊಳಗೆ ಮತ್ತು ಆಗಾಗ್ಗೆ ಆತನ ಜಿಮ್‌ಗಳಲ್ಲಿ ಸಹ ಕೆಲಸ ಮಾಡಿಸಿಕೊಳ್ಳುತ್ತಿದ್ದರು, ಹೊರಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದೂ ದೂರಿನಲ್ಲಿ ಹೇಳಿಕೊಂಡಿದ್ದಾಳೆ.


ನನ್ನ ಪತಿ ಮತ್ತು ಮನೆ, ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ನಾನು ಮನೆಗೆಲಸಕ್ಕೆ ನನ್ನನ್ನು ಸೀಮಿತ ಮಾಡಿಕೊಂಡಿದ್ದೆ. ನಾನು ನಿಜವಾಗಿಯೂ ಬೇರೆ ಏನೂ ಕೆಲಸ ಮಾಡಲು ಸಾಧ್ಯವಾಗದ ಸ್ಥಳದಲ್ಲಿದ್ದೆ. ಇದು ಸ್ಪಷ್ಟವಾಗಿ ನನ್ನ ಪತಿಯಿಂದ ಆರ್ಥಿಕ ದುರುಪಯೋಗದ ಪ್ರಕರಣವಾಗಿದೆ ಎಂದು ಇವಾನ್‌ ಹೇಳಿದ್ದಾರೆ.




ಲಾಭಾಂಶ, ಸಂಬಳ ನೀಡದೇ ದುಡುಸಿಕೊಳ್ಳುತ್ತಿದ್ದರು ಎಂದು ದೂರಿದ ಇವಾನ್‌


ಮದುವೆಯ ಸಂದರ್ಭದಲ್ಲಿ, ಪತಿ ತನ್ನ ಸಂಪತ್ತನ್ನು ಹಂಚಿಕೊಳ್ಳುವ ಮತ್ತು ಅವರ ಸಾಮಾನ್ಯ ಆಸ್ತಿಯನ್ನು ವಿಭಜಿಸಲು ಅನುವು ಮಾಡಿಕೊಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು.


ಆದರೆ ನಂತರ ಜಿಮ್‌ ವ್ಯವಹಾರಕ್ಕೆ ನನ್ನನ್ನು ಅನುಮತಿಸುತ್ತಿರಲಿಲ್ಲ ಮತ್ತು ಲಾಭಾಂಶ ಸಹ ನೀಡುತ್ತಿರಲಿಲ್ಲ. ನನ್ನ ಪತಿ ಸುಮಾರು $ 6.4 ಮಿಲಿಯನ್ ಮೌಲ್ಯದ ಹಲವಾರು ಐಷಾರಾಮಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಇವಾನ್‌ ದೂರಿದ್ದಾರೆ.


ಕೆಲ ಒಪ್ಪಂದಗಳ ಹೊರತಾಗಿಯೂ ಪತಿ ನನಗೆ ಸಂಬಳವಾಗಲಿ, ಆದಾಯವನ್ನಾಗಲಿ ನೀಡದೇ ಕೇವಲ ಮನೆ ಕೆಲಸ ಮತ್ತು ಜಿಮ್‌ಗೆ ಸಂಬಂಧಿಸಿದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಎಲ್ಲಾ ಆಸ್ತಿ, ಆದಾಯವೂ ಅವರ ಹೆಸರಿನಲ್ಲಿತ್ತು ಎಂದು ಹೇಳಿದ್ದರು.


ಇದನ್ನೂ ಓದಿ: Kerala: ತಮ್ಮ ಹೆಣ್ಣು ಮಕ್ಕಳಿಗೆ ಸಂಪೂರ್ಣ ಆಸ್ತಿ ಸೇರಲಿ; ಮುಸ್ಲಿಂ ದಂಪತಿಯ ಮರು ಮದುವೆ-ಇಲ್ಲಿದೆ ಕಂಪ್ಲೀಟ್ ಸ್ಟೋರಿ


ಇವಾನ್‌ ಅವರ ಎಲ್ಲಾ ಹೇಳಿಕೆಗಳ ಆಧಾರದ ಮೇಲೆ ಮಾಜಿ ಪತಿಯೊಂದಿಗೆ ಸಂಸಾರ ನಡೆಸಿದ ವೇಳೆ ನೈತಿಕತೆಯಿಂದ ಪಡೆದ ಕೆಲಸದ ಕನಿಷ್ಠ ವೇತನವನ್ನು ಆಧರಿಸಿ ಈ ದಂಡವನ್ನು ನಿರ್ಧರಿಸಲಾಗಿದೆ ಎಂದು ಕೋರ್ಟ್‌ ಹೇಳಿದೆ.


ಜೊತೆಗೆ ನಮಾಜಿ ಪತಿ ತಮ್ಮ ಹೆಣ್ಣುಮಕ್ಕಳಿಗೆ ಮಾಸಿಕ ಶಿಶುಪಾಲನಾ ಶುಲ್ಕವನ್ನು ಪಾವತಿಸಬೇಕು ಎಂದು ಸಹ ದಕ್ಷಿಣ ಸ್ಪೇನ್‌ನ ವೆಲೆಜ್-ಮಲಗಾ ನ್ಯಾಯಾಲಯ ಆದೇಶಿಸಿದೆ.

Published by:Sumanth SN
First published: