ಕಾಶ್ಮೀರಿ ಯುವಕನನ್ನು ಜೀಪ್​ಗೆ ಕಟ್ಟಿ ಎಳೆದಿದ್ದ ಮೇಜರ್​ ಗೊಗೋಯ್​ ಈಗ ಮತ್ತೊಂದು ಪ್ರಕರಣದಲ್ಲಿ ಅಪರಾಧಿ

news18
Updated:August 27, 2018, 1:53 PM IST
ಕಾಶ್ಮೀರಿ ಯುವಕನನ್ನು ಜೀಪ್​ಗೆ ಕಟ್ಟಿ ಎಳೆದಿದ್ದ ಮೇಜರ್​ ಗೊಗೋಯ್​ ಈಗ ಮತ್ತೊಂದು ಪ್ರಕರಣದಲ್ಲಿ ಅಪರಾಧಿ
news18
Updated: August 27, 2018, 1:53 PM IST
ಈ ಹಿಂದೆ ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿ ಎಳೆದು ಕ್ರೌರ್ಯ ಮೆರೆದ ಕಾರಣಕ್ಕೆ ಸುದ್ದಿಯಾಗಿದ್ದ ಮೇಜರ್​ ಲಿತುಲ್​ ಗೊಗೋಯ್​  ಮತ್ತೊಂದು ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದಾರೆ. ಈ ಸಂಬಂಧ ಮೇಜರ್​ ಗೊಗೋಯ್​ ಮೇಲೆ ಕ್ರಮ ಜರುಗಿಸುವಂತೆ ಸೇನೆಗೆ ಕೋರ್ಟ್​ ಆದೇಶಿಸಿದೆ.

ಶ್ರೀನಗರ ಹೋಟೆಲ್​ ಗಲಾಟೆ ಪ್ರಕರಣದ ಹಿನ್ನಲೆ ಮೇಜರ್​ ಲಿತುಲ್​ ಗೊಗೋಯ್​ನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆತ ತಪ್ಪಿತಸ್ಥನಾಗಿದ್ದ ಅವರ ಮೇಲೆ  ಶಿಸ್ತುಕ್ರಮ ಜಾರಿ ಮಾಡಿ ಆದೇಶ ನೀಡಿದೆ,

ಗೋಗಯ್​ ಸ್ಥಳೀಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ ಹಾಗೂ ಕೆಲಸದಲ್ಲಿ ಪ್ರಮಾಣಿಕವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮೇ.23ರಂದು ಗೋಗಯ್​ 18 ವರ್ಷದ ಯುವತಿಯೊಂದಿಗೆ ಹೋಟೆಲ್​ ಪ್ರವೇಶಿಸಲು ಮುಂದಾದಾಗ ವಾಗ್ವಾದ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದ್ದರು.

ಇದಾದ ಬಳಿಕ ಈ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸೇನಾ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಗೊಗೋಯ್​ ಯಾವುದೇ ಅಪರಾಧ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರೆ ಅವರಿಗೆ ಶಿಕ್ಷೆಯನ್ನು ವಿಧಿಸಲಾಗುವುದು ಎಂದಿದ್ದರು.

"ಭಾರತೀಯ ಸೇನೆಯ ಯಾವುದೇ ವ್ಯಕ್ತಿ ಅಪರಾಧ ಪ್ರಕ್ರಿಯೆಯಲ್ಲಿ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ರಾವತ್​ ತಿಳಿಸಿದ್ದರು

ಕಳೆದ ವರ್ಷಕೂಡ ಕಲ್ಲು ತೂರಾಟಗಾರರಿಂದ ರಕ್ಷಿಸಿಕೊಳ್ಳಲು ಸೇನೆಯ ಜೀಪಿನ ಮುಂಣಭಾಗಕ್ಕೆ ಕಾಶ್ಮೀರಿ ಯುವಕನನ್ನು ಕಟ್ಟಿ ಗಾಡಿ ಚಲಾಯಿಸಿದ್ದರು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...