Rooh Afza: ಪಾಕಿಸ್ತಾನ ನಿರ್ಮಿತ ಪಾನೀಯದ ಪಟ್ಟಿ ತೆಗೆದುಹಾಕುವಂತೆ ಅಮೆಜಾನ್ ಇಂಡಿಯಾಗೆ ಸೂಚನೆ

ಹಮ್ದರ್ದ್ ಫೌಂಡೆಶನ್ ಪಾಕಿಸ್ತಾನದಲ್ಲಿ ತಯಾರಿಸಲಾಗುತ್ತಿರುವ ರೂಹ್ ಅಫ್ಜಾ ಪಾನೀಯವನ್ನು ಅಮೆಜಾನ್ ಮೂಲಕ ಭಾರತದಲ್ಲಿ ಮಾರಲಾಗುತ್ತಿದೆ ಎಂದು ದೂರಿ ಪ್ರಕರಣ ದಾಖಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸದ್ಯ, ಅಮೆಜಾನ್ ಇಂಡಿಯಾ ಆನ್ಲೈನ್ ವೇದಿಕೆಗೆ ತನ್ನಲ್ಲಿ ಲಿಸ್ಟ್ ಮಾಡಲಾಗಿರುವ ಎಲ್ಲ ರೂಹ್ ಅಫ್ಜಾ ಮಾರಾಟಗಾರರ ಪಟ್ಟಿಯನ್ನು ತೆಗೆದು ಹಾಕುವಂತೆ ಸೂಚಿಸಿದೆ.

ರೂಹ್ ಅಫ್ಜಾ ಪಾನೀಯ

ರೂಹ್ ಅಫ್ಜಾ ಪಾನೀಯ

  • Share this:
ನಮ್ಮಲ್ಲಿ ಬಹುತೇಕರಿಗೆ ಈ ರೂಹ್ ಅಫ್ಜಾ (Rooh Afza) ಎಂಬ ಪಾನೀಯದ ಬಗ್ಗೆ ಗೊತ್ತೆ ಇರುತ್ತದೆ. 80-90 ರ ದಶಕಗಳಿಂದಲೂ ಇದು ಸಾಕಷ್ಟು ಜಾಹಿರಾತುಗಳ (Advertisement) ಮೂಲಕ ಜನಪ್ರೀಯತೆಗಳಿಸಿರುವ ಒಂದು ಆರೋಗ್ಯ ಸಂಬಂಧಿತ ಚೈತನ್ಯ ನೀಡುವಂತಹ ಪಾನೀಯ (Drink) ಎನ್ನಲಾಗಿದ್ದು ಇದನ್ನು ಭಾರತ ಮೂಲದ ಹಮ್ದರ್ದ್ ನ್ಯಾಷನಲ್ ಫೌಂಡೆಶನ್ (Hamdard National Foundation) ಎಂಬ ಸಂಸ್ಥೆಯು ನಿರ್ಮಿಸುತ್ತದೆ. ಸದ್ಯ, ಈಗ ಬಂದಿರುವ ಮಾಹಿತಿಯ ಪ್ರಕಾರ, ಹಮ್ದರ್ದ್ ಫೌಂಡೆಶನ್ ಪಾಕಿಸ್ತಾನದಲ್ಲಿ ತಯಾರಿಸಲಾಗುತ್ತಿರುವ ರೂಹ್ ಅಫ್ಜಾ ಪಾನೀಯವನ್ನು ಅಮೆಜಾನ್ (Amazon) ಮೂಲಕ ಭಾರತದಲ್ಲಿ (India) ಮಾರಲಾಗುತ್ತಿದೆ ಎಂದು ದೂರಿ ಪ್ರಕರಣ ದಾಖಲಿಸಿದೆ.

ರೂಹ್ ಅಫ್ಜಾ ಮಾರಾಟಗಾರರ ಪಟ್ಟಿಯನ್ನು ತೆಗೆದು ಹಾಕುವಂತೆ ಸೂಚನೆ 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸದ್ಯ, ಅಮೆಜಾನ್ ಇಂಡಿಯಾ ಆನ್ಲೈನ್ ವೇದಿಕೆಗೆ ತನ್ನಲ್ಲಿ ಲಿಸ್ಟ್ ಮಾಡಲಾಗಿರುವ ಎಲ್ಲ ರೂಹ್ ಅಫ್ಜಾ ಮಾರಾಟಗಾರರ ಪಟ್ಟಿಯನ್ನು ತೆಗೆದು ಹಾಕುವಂತೆ ಸೂಚಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಭಾರತದಲ್ಲಿ ರೂಹ್ ಅಫ್ಜಾ ಎಂಬುವುದು ಜನಪ್ರೀಯ ಪೇಯವಾಗಿದ್ದು ಜನರು ನೂರು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಇದನ್ನು ಬಳಸುತ್ತಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ತಯಾರಿಸಲಾಗಿರುವ ಈ ರೂಹ್ ಅಫ್ಜಾ ಅಮೆಜಾನಿನಲ್ಲಿ ದೊರಕುತ್ತಿರುವುದಕ್ಕೆ ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ, ಈ ಅಚ್ಚರಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಈ ಪಾನೀಯವನ್ನು ಉತ್ಪಾದಕರ ಯಾವುದೇ ಮಾಹಿತಿ, ವಿಳಾಸಗಳಿಲ್ಲದೆ ಅಮೆಜಾನ್ ನಲ್ಲಿ ಸರಾಗವಾಗಿ ಮಾರುತ್ತಿರುವುದು.

ಇದನ್ನೂ ಓದಿ: Delhi Kidney Racket: 3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ ಪಡೆದು ಕಿಡ್ನಿ ಕಸಿ ಕಳ್ಳಸಾಗಾಣಿಕೆ!

ನ್ಯಾಯಾಧೀಶೆ ಪ್ರತಿಭಾ ಎಂ ಸಿಂಗ್ ಅವರಿದ್ದ ಪೀಠವು ಈ ಪ್ರಕರಣವನ್ನು ಆಲಿಸಿ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಮುಂದಿನ 48 ಗಂಟೆಗಳಲ್ಲಿ ಅಮೆಜಾನ್ ಆನ್ಲೈನ್ ವೇದಿಕೆಯಿಂದ ಲಿಸ್ಟ್ ಮಾಡಲಾಗಿರುವ ಎಲ್ಲ ರೂಹ್ ಅಫ್ಜಾ ಮಾರಾಟ ಪಟ್ಟಿಯನ್ನು ತೆಗೆದು ಹಾಕುವಂತೆ ಸಂಸ್ಥೆಗೆ ಸೂಚಿಸಿದೆ.

ರೂಹ್ ಅಫ್ಜಾದ ಪಾನೀಯವನ್ನು ಮೊದಲು ಆರಂಭಿಸಿದ್ದು ಯಾರು 
ಇನ್ನು, ರೂಹ್ ಅಫ್ಜಾದ ಬಗ್ಗೆ ಸ್ವಲ್ಪ ಇತಿಹಾಸ ನೋಡಿದರೆ ನಮಗೆ ತಿಳಿಯುವ ಅಂಶವೆಂದರೆ, ದೆಹಲಿಯಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಹಕೀಮರಾಗಿದ್ದ ಹಫೀಜ್ ಅಬ್ದುಲ್ ಮಜೀದ್ ಎಂಬುವವರು ಈ ಪೇಯವನ್ನು ಮೊದಲ ಬಾರಿಗೆ ಶೋಧಿಸಿ ಪರಿಚಯಿಸಿದ್ದರು. ಆದರೆ, ಭಾರತದ ವಿಭಜನೆಯ ನಂತರ ರೂಹ್ ಅಫ್ಜಾದ ವಿಭಜನೆಯೂ ಆಯಿತು, ಏಕೆಂದರೆ ಹಫೀಜ್ ಅವರ ಹಿರಿಯ ಮಗೆ ಭಾರತವನ್ನು ಆಯ್ದುಕೊಂಡರೆ ಕಿರಿಯ ಮಗ ಪಾಕಿಸ್ತಾನಕ್ಕೆ ತೆರಳಿದ.

ಪ್ರಸ್ತುತ ಭಾರತದಲ್ಲಿ ಹಮ್ದರ್ದ್ ನ್ಯಾಷನಲ್ ಫೌಂಡೆಶನ್ ಸಂಸ್ಥೆಯು ಈ ಪಾನೀಯದ ಉತ್ಪಾದನೆ ಹಾಗೂ ಮಾರಾಟದ ಹಕ್ಕನ್ನು ಹೊಂದಿದ್ದರೆ, ಪಾಕಿಸ್ತಾನದಲ್ಲಿರುವ ಪಾಕಿಸ್ತಾನ್ ಹಮ್ದರ್ದ್ ಲ್ಯಾಬ್ ಸಂಸ್ಥೆಯು ಆ ದೇಶದಲ್ಲಿ ಉತ್ಪಾದನೆ ಹಾಗೂ ಮಾರಾಟದ ಹಕ್ಕನ್ನು ಹೊಂದಿದೆ.

ಮಾರಾಟಗಾರರಿಗೆ ನೋಟೀಸ್ ಜಾರಿ
ಭಾರತದಲ್ಲಿರುವ ಹಮ್ದರ್ದ್ ಸಂಸ್ಥೆಯು ಈ ಮುಂಚೆ ತಮ್ಮ ಅರಿವಿಗೆ ಬರದಂತೆ ಯಾರೆಲ್ಲ ರೂಹ್ ಅಫ್ಜಾ ಪೇಯವನ್ನು ಮಾರುತ್ತಿದ್ದಾರೆ ಎಂಬುದನ್ನು ಹುಡುಕಿ ಅವರಿಗೆ ನೋಟಿಸ್ ನೀಡುತ್ತಿತ್ತು. ಈ ಸಂದರ್ಭದಲ್ಲಿ ಅವರಿಗೆ ಅಮೆಜಾನ್ ನಲ್ಲಿ ಪಾಕಿಸ್ತಾನದಲ್ಲಿ ತಯಾರಾಗುತ್ತಿರುವ ರೂಹ್ ಅಫ್ಜಾ ಭಾರತದಲ್ಲಿ ಮಾರಲ್ಪಡುತ್ತಿರುವ ಬಗ್ಗೆ ಗೊತ್ತಾಗಿದೆ ಹಾಗೂ ಇದು ಅಕ್ರಮವೂ ಆಗಿದೆ.

ಅಲ್ಲದೆ, ಈ ಸಂದರ್ಭದಲ್ಲಿ ಸಂಪರ್ಕ ಎಂಬ ಬಟನ್ ಅನ್ನು ಅಮೆಜಾನ್ ನಲ್ಲಿ ಗ್ರಾಹಕರು ರೂಹ್ ಅಫ್ಜಾ ಖರೀದಿಸುವ ಸಮಯದಲ್ಲಿ ಕ್ಲಿಕ್ ಮಾಡಿದರೆ, ಅದು ನೇರವಾಗಿ ಹಮ್ದರ್ದ್ ಲ್ಯಾಬೊರೇಟರೀಸ್, ಇಂಡಿಯಾ ಎಂಬ ಪುಟಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಗ್ರಾಹಕರು ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳಲ್ಲಿರುವ ಹಮ್ದರ್ದ್ ಸಂಸ್ಥೆಗಳು ಒಂದಕ್ಕೊಂದು ಸಂಪರ್ಕ ಹೊಂದಿವೆ ಎಂದು ತಿಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ, ವಾಸ್ತವದಲ್ಲಿ ಹಾಗೆ ಇಲ್ಲ ಎಂಬುದು ಭಾರತದ ಸಂಸ್ಥೆಯ ಮಾತಾಗಿದೆ. ಹಾಗಾಗಿ, ಈ ಎಲ್ಲ ಅಂಶಗಳನ್ನು ಗಮನಿಸಿ ಭಾರತೀಯ ಸಂಸ್ಥೆಯು ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ:  Electric Highway: ಭಾರತದಲ್ಲೂ ಎಲೆಕ್ಟ್ರಿಕ್ ಹೈವೇ ನಿರ್ಮಾಣ, ಗಾಡಿ ಓಡಿದ್ರೆ ಚಾರ್ಜ್ ಆಗುತ್ತೆ!

ಏತನ್ಮಧ್ಯೆ, ನ್ಯಾಯಾಲಯವು ಅಮೆಜಾನ್ ಸಂಸ್ಥೆಯು ತನ್ನನ್ನು ತಾನು ಕೇವಲ ಮಧ್ಯಸ್ಥಗಾರ ಎಂದು ಹೇಳಿಕೊಂಡಿರುವುದರಿಂದ ಅದು ಮಾರಾಟಗಾರರ ಸಂಪೂರ್ಣ ವಿಳಾಸವನ್ನೂ ಸಹ ತನ್ನ ಪುಟದಲ್ಲಿ ಒದಗಿಸಬೇಕೆಂದು ಸೂಚಿಸಿದೆ.
Published by:Ashwini Prabhu
First published: