Court Case: ಕೋರ್ಟ್​ ವಿಧಿಸಿರುವ 300 ರೂ. ದಂಡ ಕಟ್ಟಲು ಜಗಳ- 60 ವರ್ಷಗಳಿಂದ ಮುಗಿದೇ ಇಲ್ಲ ವ್ಯಾಜ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹೊಡೆದಾಟ ಹಳೆಯದಾಗಿದ್ದರೂ ಇದು ಪುನಃ ಭುಗಿಲೇಳಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ, ಆದರೆ 300 ರೂಗಳ ಜುಲ್ಮಾನೆಯಿಂದ ಆರಂಭವಾದ ಕಲಹ ಎರಡೂ ಕುಟುಂಬಗಳ ನಡುವೆ ತಲೆಮಾರಿನಿಂದ ತಲೆಮಾರಿನವರೆಗೆ ಮುಂದುವರಿದಿದೆ.

  • Trending Desk
  • 2-MIN READ
  • Last Updated :
  • Share this:

ನ್ಯಾಯಾಲಯಗಳಲ್ಲಿ(Courts) ಕೌಟುಂಬಿಕ ಕಲಹಗಳು ನಡೆಯುವುದು ನ್ಯಾಯಾಧೀಶರು ಅದನ್ನು ತೀರ್ಮಾನಿಸುವುದು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ನ್ಯಾಯಾಲಯ ವಿಧಿಸುವ ಜುಲ್ಮಾನೆಯನ್ನು ಕುಟುಂಬಗಳು ಪಾವತಿಸಬೇಕಾಗುತ್ತದೆ(Pay). ಆದರೆ ರೂ 300 ಕ್ಕೆ ಆರಂಭವಾದ ಜುಲ್ಮಾನೆಯ ಮೊತ್ತ ತಲೆಮಾರಿನಿಂದ ತಲೆಮಾರಿಗೆ ಮುಂದುವರಿದಿದ್ದು, ಇದೀಗ ದೊಡ್ಡ ಮೊತ್ತವಾಗಿ ಮಾರ್ಪಟ್ಟಿದೆ ಹಾಗೂ ಎರಡೂ ಕುಟುಂಬಗಳ(Families) ನಡುವೆ ವಿವಾದ ಇತ್ಯರ್ಥಗೊಳ್ಳದೆ ಹಾಗೆಯೇ ಉಳಿದಿದೆ ಜೊತೆಗೆ ಬಡಿದಾಟ ಹೊಡೆದಾಟ ಸಾಮಾನ್ಯವಾಗಿದೆ.


ಹೌದು ಇಂಥದ್ದೊಂದು ವಿಚಿತ್ರ ಆದರೆ ಸತ್ಯವಾಗಿರುವ ಘಟನೆ ಗುಜರಾತಿನಲ್ಲಿ ನಡೆಯುತ್ತಿದೆ ಎಂದರೆ ನಿಮಗೆ ನಂಬದೆ ಬೇರೆ ವಿಧಿಯಿಲ್ಲ.


ಆರು ದಶಕಗಳಿಗಿಂತ ಹೆಚ್ಚು ಕಾಲ ನಡೆಯುತ್ತಿರುವ ವ್ಯಾಜ್ಯ


ಗುಜರಾತ್‌ನ ಸಬರ್ಕಾಂತ ಜಿಲ್ಲೆಯಲ್ಲಿರುವ ಎರಡು ಕುಟುಂಬಗಳ ನಡುವಿನ ವ್ಯಾಜ್ಯವು ನಾಲ್ಕು ತಲೆಮಾರಿನವರೆಗೆ ಬಂದು ನಿಂತಿದ್ದು ನ್ಯಾಯಾಲಯ ವಿಧಿಸಿರುವ ರೂ 300 ಜುಲ್ಮಾನೆಯನ್ನು ಯಾರು ಪಾವತಿಸಬೇಕು ಎಂಬುದರ ನಡುವೆ ಜಗಳಗಳು, ಹೊಡೆದಾಟಗಳು ನಡೆಯುತ್ತಿದ್ದು, ಬರೋಬ್ಬರಿ ಆರು ದಶಕಗಳಿಗಿಂತಲೂ ಅಧಿಕ ಸಮಯವನ್ನು ತೆಗೆದುಕೊಂಡಿದೆ ಎಂದರೆ ನೀವು ನಂಬಲೇಬೇಕು.


ತಲೆಮಾರಿನಿಂದ ತಲೆಮಾರಿಗೆ ಮುಂದುವರಿದಿರುವ ಸಾಲ


ಈ ಹೊಡೆದಾಟ ಹಳೆಯದಾಗಿದ್ದರೂ ಇದು ಪುನಃ ಭುಗಿಲೇಳಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ, ಆದರೆ 300 ರೂಗಳ ಜುಲ್ಮಾನೆಯಿಂದ ಆರಂಭವಾದ ಕಲಹ ಎರಡೂ ಕುಟುಂಬಗಳ ನಡುವೆ ತಲೆಮಾರಿನಿಂದ ತಲೆಮಾರಿನವರೆಗೆ ಮುಂದುವರಿದಿದೆ.


ಒಂದು ರೀತಿಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಇದು ದ್ವೇಷವನ್ನು ಹೆಚ್ಚಿಸಿದ್ದು, ಎರಡೂ ಕುಟುಂಬಗಳ ಸದಸ್ಯರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದು ಅದಕ್ಕಾಗಿ ಹೊಡೆದಾಟವನ್ನು ನಡೆಸುತ್ತಿದ್ದಾರೆ.


ಹಣ ಪಾವತಿಸದೇ ಇರುವ ಹರ್ಕಾ ಕುಟುಂಬಸ್ಥರು


1960 ರ ಸಮಯದಲ್ಲಿ ತೆಂಬಾ ಹಳ್ಳಿಯ ಹರ್ಕಾ ರಾಥೋಡ್ ತನ್ನದೇ ಬುಡಕಟ್ಟು ಜನಾಂಗದ ಜೇಠಾ ರಾಥೋಡ್‌ನೊಂದಿಗೆ ಕ್ಷುಲ್ಲಕ ವಿಷಯಕ್ಕೆ ತಗಾದೆ ತೆಗೆದು ಜಗಳವಾಗುತ್ತದೆ.


ಸಮುದಾಯ ನ್ಯಾಯಾಲಯ ಈ ಜಗಳಕ್ಕೆ ಇತ್ಯರ್ಥ ಹಾಡಿದ್ದು ಹರ್ಕಾ ರೂ. 300 ಅನ್ನು ದಂಡವಾಗಿ ಜೇಠಾ ಕುಟುಂಬದವರಿಗೆ ನೀಡಬೇಕು ಎಂದು ತೀರ್ಪು ನೀಡುತ್ತದೆ.


ಸಾಲವಾಗಿ ಬೆಳೆದಿರುವ ಜುಲ್ಮಾನೆ


ಇದುವರೆಗೆ ಹಣವನ್ನು ಪಾವತಿಸಿಲ್ಲವೆಂದು ಜೇಠಾ ಕುಟುಂಬದವರು ಹರ್ಕಾ ಕುಟುಂಬ ಸದಸ್ಯರೊಂದಿಗೆ ಕಲಹವನ್ನು ಮುಂದುವರಿಸಿದರು ಹಾಗೂ ದಾಳಿಯನ್ನು ನಡೆಸಿದರು ಮತ್ತು ಹರ್ಕಾ ಕುಟುಂಬದವರೂ ಜೇಠಾ ಕುಟುಂಬಸ್ಥರನ್ನು ಥಳಿಸಿದ್ದಾರೆ ಎಂಬುದು ವರದಿಯಾಗಿದೆ.


ನ್ಯಾಯಾಲಯ ಎರಡೂ ಕುಟುಂಬಗಳಿಗೂ ದಂಡ ವಿಧಿಸುವುದನ್ನು ಮುಂದುವರಿಸಿದ್ದು ಇಬ್ಬರೂ ಪರಸ್ಪರ ಜುಲ್ಮಾನೆಗಳನ್ನು ಪಾವತಿಸದೆಯೇ ತಗಾದೆ ತೆಗೆಯುವುದನ್ನು ಮುಂದುವರಿಸಿದ್ದಾರೆ.


ಇದನ್ನೂ ಓದಿ: Taslima Nasreen: ಮೊಣಕಾಲು ನೋವೆಂದು ಆಸ್ಪತ್ರೆಗೆ ಹೋದ್ರೆ, ಹಿಪ್‌ ರಿಪ್ಲೇಸ್‌ಮೆಂಟ್‌ ಸರ್ಜರಿ ಮಾಡಿದ್ರು- ಲೇಖಕಿ ತಸ್ಲೀಮಾ ನಸ್ರೀನ್ ಆರೋಪ


ಸರ್‌ಪಂಚ್ ವ್ಯವಸ್ಥೆ ಅನುಸರಣೆ


ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ದುಂಗಾರಿ ಭೇಲ್‌ನ ಸಮುದಾಯ ಸರ್‌ಪಂಚ್ ಹರ್ಕಾ ಕುಟುಂಬ ದಂಡ ರೂಪದಲ್ಲಿ ರೂ 25,0000 ವನ್ನು ಜೇಠಾ ಕುಟುಂಬಸ್ಥರಿಗೆ ಪಾವತಿಸಬೇಕು ಎಂದು ತಿಳಿಸಿದರು.


ಹಣವನ್ನು ಪಾವತಿಸದೇ ಇರುವುದರಿಂದ ಜೇಠಾನ ಇಬ್ಬರು ಮಕ್ಕಳು ಹರ್ಕಾನ ಮೊಮ್ಮಗನಾದ ವಿನೋದ್, ಆತನ ಪತ್ನಿ ಚಂಪಾ ಹಾಗೂ ಅವರ ಮಗ ಕಾಂತಿಯ ಮೇಲೆ ಜನವರಿ ಮೊದಲ ವಾರದಲ್ಲಿ ಹಲ್ಲೆ ನಡೆಸಿದ್ದಾರೆ.


ಕೇರೋಜ್‌ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿರುವಂತೆ ಈ ಹಳ್ಳಿಯಲ್ಲಿ ಆರ್ಥಿಕ ಸಾಲವನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದಿರುವ ಈ ಎರಡು ಕುಟುಂಬಗಳು ಮಾತ್ರವಲ್ಲ ಇನ್ನೂ ಹೆಚ್ಚಿವೆ ಎಂದು ಸೂಚಿಸಿದ್ದಾರೆ.


ಈ ಪ್ರದೇಶದಲ್ಲಿರುವ ಎಲ್ಲಾ ಸಮುದಾಯಗಳು ಸಮುದಾಯ ಪಂಚನ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ. ಇಲ್ಲಿನವರು ತಮ್ಮ ಕಲಹಗಳನ್ನು ಬಗೆಹರಿಸಲು ಕೋರ್ಟ್, ಕಚೇರಿ ಹಾಗೂ ಪೊಲೀಸರನ್ನು ಸಂಪರ್ಕಿಸುವುದಿಲ್ಲ.


ಬದಲಿಗೆ ಸರ್‌ಪಂಚ್ ಬಳಿ ತಮ್ಮ ವ್ಯಾಜ್ಯವನ್ನು ಕೊಂಡೊಯ್ಯುತ್ತಾರೆ ಹಾಗೂ ಅವರು ತಿಳಿಸಿರುವಂತೆ ದಂಡವನ್ನು ನಿರ್ಧರಿಸುತ್ತಾರೆ ಹಾಗೂ ಕುಟುಂಬಗಳ ನಡುವೆ ಸಂಧಾನ ನಡೆಸುತ್ತಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಸಂಧಾನ ಸಫಲವಾಗುತ್ತಿಲ್ಲ


ಹರ್ಕಾ ಹಾಗೂ ಜೇಠಾ ಕುಟುಂಬಸ್ಥರು ಜನವರಿಯಲ್ಲಿ ಪೊಲೀಸ್ ಮೆಟ್ಟಿಲೇರಿದ್ದರು. ಅದಾಗ್ಯೂ ಎರಡು ತಿಂಗಳ ಬಳಿಕ ಜಗಳ ಹಿಂಸಾತ್ಮಕವಾಗಿದ್ದು, ಸಮುದಾಯದ ಹಿರಿಯರಿಗೂ ಎರಡೂ ಕುಟುಂಬಸ್ಥರ ನಡುವೆ ಸಂಧಾನ ಮಾಡಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: Mysterious Death: ಗ್ರಾಮದಲ್ಲಿ 12 ದಿನಗಳಲ್ಲಿ 12 ಸಾವು, ದುಷ್ಟಶಕ್ತಿಯ ಕಾಟ ಎಂದು ವಿಚಿತ್ರ ನಿರ್ಧಾರ ತೆಗೆದುಕೊಂದ ಗ್ರಾಮಸ್ಥರು!


ಈ ಜಗಳ ರೂ 300 ಕ್ಕೆ ಆರಂಭಗೊಂಡಿದ್ದಾದರೂ ತಲೆಮಾರಿನಿಂದ ತಲೆಮಾರಿಗೆ ಇದು ಬೆಳೆದುಕೊಂಡೇ ಬರುತ್ತಿದೆ ಹಾಗೂ ಇದರ ಕಷ್ಟವನ್ನು ಆ ತಲೆಮಾರಿನವರು ಅನುಭವಿಸುತ್ತಿದ್ದಾರೆ ಎಂಬುದು ಹರ್ಕಾ ಕುಟುಂಬಸ್ಥರ ಅಳಲಾಗಿದೆ.


ವಿವಾದವನ್ನು ಇತ್ಯರ್ಥಗೊಳಿಸಲು ಹರ್ಕಾನ ಮೊಮ್ಮಕ್ಕಳು, ಮಕ್ಕಳು ಹಣವನ್ನು ನೀಡಿದರೂ ಇದು ಇನ್ನೂ ಇತ್ಯರ್ಥವಾಗದೇ ಮುಂದುವರಿಯುತ್ತಿದೆ ಎಂಬುದು ಕುಟುಂಸ್ಥರ ಅಳಲಾಗಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು