ಬಿರಿಯಾನಿಯಲ್ಲಿ ಪೀಸ್ ಬಂದಿಲ್ಲವೆಂದು ಯುವತಿಯನ್ನೇ ಬರ್ಬರವಾಗಿ ಕೊಲೆಗೈದ ಯುವಕ

ದಣಿವಿನಿಂದ ಹಸಿದ ಹೊಟ್ಟೆ ತುಂಬಿಸಲು ಬಿರಿಯಾನಿ ಸವಿಯಲು ಮುಂದಾದಾಗ ಯುವತಿ ತಿನ್ನುತ್ತಿದ್ದ ಬಿರಿಯಾನಿಯಲ್ಲಿ ಚಿಕನ್ ಪೀಸ್​​ ಇರಲಿಲ್ಲ. ಇದನ್ನು ಯುವತಿ ತನ್ನ ಯುವಕನಿಗೆ ತಿಳಿಸಿದ್ದಾಳೆ. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಮಾರಾಮಾರಿ ನಡೆದಿದೆ.

Vinay Bhat | news18
Updated:February 21, 2019, 8:48 PM IST
ಬಿರಿಯಾನಿಯಲ್ಲಿ ಪೀಸ್ ಬಂದಿಲ್ಲವೆಂದು ಯುವತಿಯನ್ನೇ ಬರ್ಬರವಾಗಿ ಕೊಲೆಗೈದ ಯುವಕ
ಸಾಂದರ್ಭಿಕ ಚಿತ್ರ
  • News18
  • Last Updated: February 21, 2019, 8:48 PM IST
  • Share this:
ಚೆನ್ನೈ: ಸಾಮಾನ್ಯವಾಗಿ ಒಂದು ಕೊಲೆ ನಡೆದಿದೆ ಎಂದಾದರೆ ಅಲ್ಲಿ ಬಲವಾದ ಕಾರಣ ಇದ್ದೇ ಇರುತ್ತೆ. ಆದರೆ ಇಲ್ಲಿ ಕೇವಲ ಒಂದು ಚಿಕನ್ ಪೀಸ್​ಗಾಗಿ ಯುವಕ ತನ್ನ ಯುವತಿಯನ್ನೇ ಕೊಲೆಗೈದ ಘಟನೆ ನಡೆದಿದೆ. ಇಂತಹ ವಿಚಿತ್ರ ಘಟನೆ ನಡೆದಿದ್ದು ತಮಿಳುನಾಡು ಚೆನ್ನೈನ ಮಾರ್ಕೆಟ್ ಒಂದರಲ್ಲಿ.

ಇಲ್ಲಿನ ಕೊಯಂಬೆಡು ಎಂಬ ಹೂವಿನ ಮಾರ್ಕೆಟ್​​ ಮುಂಜಾನೆಯಿಂದ ಮಧ್ಯ ರಾತ್ರಿವರೆಗೂ ಜನಜಂಗುಳಿಯಿಂದಲೇ ತುಂಬಿರುತ್ತದೆ. ಅಂತೆಯೆ ಮಾರುಕಟ್ಟೆಗೆ ವ್ಯಾಪಾರಕ್ಕೆಂದ ಬಂದ ಯುವಕ ಮತ್ತು ಯುವತಿ ಕೆಲಸ ಮುಗಿಸಿ ತೆರಳುವಾಗ ಅಲ್ಲೆ ಪಕ್ಕದಲ್ಲಿದ್ದ ಹೊಟೇಲ್​​​​ನಿಂದ ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಸ್ವಿಗ್ಗಿ ಆ್ಯಪ್​ನಲ್ಲಿ ಊಟ ಆರ್ಡರ್​ ಮಾಡಿದ ಚೆನ್ನೈ ಗ್ರಾಹಕನಿಗೆ ಕಾದಿತ್ತು ಶಾಕ್​!

ದಣಿವಿನಿಂದ ಹಸಿದ ಹೊಟ್ಟೆ ತುಂಬಿಸಲು ಬಿರಿಯಾನಿ ಸವಿಯಲು ಮುಂದಾದಾಗ ಯುವತಿ ತಿನ್ನುತ್ತಿದ್ದ ಬಿರಿಯಾನಿಯಲ್ಲಿ ಚಿಕನ್ ಪೀಸ್​​ ಇರಲಿಲ್ಲ. ಇದನ್ನು ಯುವತಿ ತನ್ನ ಯುವಕನಿಗೆ ತಿಳಿಸಿದ್ದಾಳೆ. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಮಾರಾಮಾರಿ ನಡೆದಿದೆ. ಇಬ್ಬರೂ ಜಗಳವಾಡಿ ಕಿತ್ತಾಡಿಕೊಂಡಿದ್ದಾರೆ. ಈ ಮಧ್ಯೆ ಯುವಕನ ಸಿಟ್ಟು ನೆತ್ತಿಗೇರಿ ಯುವತಿಯ ಕುತ್ತಿಗೆ ಕೊಯ್ದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಯುವಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಮೂಲಕ ಬಿರಿಯಾನಿ ಪೀಸ್​ಗಾಗಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.

ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

First published:February 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading