Saptapadi: ಪಾತ್ರೆಯಲ್ಲಿ ಬೆಂಕಿ ಉರಿಸಿ ಸಪ್ತಪದಿ ತುಳಿದ ಜೋಡಿ, 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್‌!

No Valid Marriage: 20ರ ಹರೆಯದ ಹುಡುಗಿ ಹಾಗೂ 19ರ ಹರೆಯದ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಿದ್ದು ಸಂಬಂಧಿಗಳ ಇಚ್ಛೆಗೆ ವಿರುದ್ಧವಾಗಿ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದು ತಮ್ಮ ಜೀವ ಹಾಗೂ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವುದರಿಂದ ರಕ್ಷಣೆಯನ್ನೊದಗಿಸುವಂತೆ ನ್ಯಾಯಾಲಯವನ್ನು ವಿನಂತಿಸಿಕೊಂಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Saptapadi: ಹೋಟೆಲ್ ಕೊಠಡಿಯೊಂದರಲ್ಲಿ ಪಾತ್ರೆಯಲ್ಲಿ ಬೆಂಕಿ ಉರಿಸಿ ಸಪ್ತಪದಿ ತುಳಿದು ಹಾರಗಳನ್ನು ಬದಲಾಯಿಸಿಕೊಂಡು ವಿವಾಹಿತರಾಗಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೊಂಡಿರುವ ಜೋಡಿಗೆ ಪಂಜಾಬ್ - ಹರಿಯಾಣ ಹೈಕೋರ್ಟ್ (Punjab and Haryana High Court)‌ ಇತ್ತೀಚೆಗೆ 25 ಸಾವಿರ ರೂ. ದಂಡ ವಿಧಿಸಿದೆ. ಈ ರೀತಿ ನಡೆದಿರುವ ವಿವಾಹವನ್ನು ಮಾನ್ಯವೆಂದು ಅಂಗೀಕರಿಸಲಾಗುವುದಿಲ್ಲ ಹಾಗೂ ಅರ್ಜಿದಾರರು ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಸಿರುವುದಾಗಿ ತೀರ್ಪು ನೀಡಿದ್ದು ಪೊಲೀಸ್ ಆಯುಕ್ತರಿಗೆ ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಜೋಡಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ತಿಳಿಸಿದ್ದಾರೆ.

  ಘಟನೆಯ ವಿವರ:

  20ರ ಹರೆಯದ ಹುಡುಗಿ ಹಾಗೂ 19ರ ಹರೆಯದ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಿದ್ದು ಸಂಬಂಧಿಗಳ ಇಚ್ಛೆಗೆ ವಿರುದ್ಧವಾಗಿ ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದು ತಮ್ಮ ಜೀವ ಹಾಗೂ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವುದರಿಂದ ರಕ್ಷಣೆಯನ್ನೊದಗಿಸುವಂತೆ ನ್ಯಾಯಾಲಯವನ್ನು ವಿನಂತಿಸಿಕೊಂಡಿದ್ದರು. ತಮ್ಮ ತಮ್ಮ ಮನೆಗಳಿಂದ ಓಡಿಹೋದ ಜೋಡಿ ಸಪ್ಟೆಂಬರ್ 26, 2021ರಂದು ವಿವಾಹ ಮಾಡಿಕೊಂಡಿರುವುದಾಗಿ ತಿಳಿಸಿದ್ದು ವಿವಾಹ ಪ್ರಮಾಣಪತ್ರ ಹಾಗೂ ವಿವಾಹದ ಯಾವುದೇ ಫೋಟೋಗಳನ್ನು ಮನವಿಯಲ್ಲಿ ಲಗತ್ತಿಸಿರುವುದಿಲ್ಲ. ಈ ಕುರಿತು ಅವಲೋಕನ ನಡೆಸಿದ ನ್ಯಾಯಾಲಯವು ವಿವಾಹದ ಕುರಿತಾಗಿ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿತ್ತು ಹಾಗಾಗಿ ಅವರು ತಂಗಿದ್ದ ಹೋಟೆಲ್ ಕೊಠಡಿಯಲ್ಲಿಯೇ ಹುಡುಗನು ಹುಡುಗಿಯ ಹಣೆಗೆ ಸಿಂಧೂರ ಹಚ್ಚಿ, ಹಾರಗಳನ್ನು ಬದಲಾಯಿಸಿಕೊಂಡಿದ್ದು ಪಾತ್ರೆಯಲ್ಲಿ ಬೆಂಕಿ ಉರಿಸಿ ಸಪ್ತಪದಿ ತುಳಿದು ವಿವಾಹಿತರಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ ಸಪ್ತಪದಿ ವಿಧಿ ವಿಧಾನಗಳನ್ನು ನಡೆಸುವಾಗ ಮಂತ್ರ ಘೋಷಣೆಗಳನ್ನು ನಡೆಸಿಲ್ಲ ಎಂಬುದನ್ನು ಕೂಡ ಮನವಿಯಲ್ಲಿ ತಿಳಿಸಲಾಗಿದೆ.

  ನ್ಯಾಯಾಲಯದ ತೀರ್ಮಾನ:

  ಅರ್ಜಿದಾರ ಸಂಖ್ಯೆ 2 ಹುಡುಗನು ವಿವಾಹ ಯೋಗ್ಯ ವಯಸ್ಸಿನವನಲ್ಲ ಎಂಬುದನ್ನು ಗಮನಿಸಿರುವ ನ್ಯಾಯಾಲಯವು ವಿವಾಹವನ್ನು ನೆರವೇರಿಸಿರುವುದಾಗಿ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂಬುದಾಗಿ ತಿಳಿಸಿದೆ. ಅರ್ಜಿದಾರರ ನಡುವೆ ಯಾವುದೇ ಮಾನ್ಯ ವಿವಾಹ ಪ್ರಕ್ರಿಯೆಗಳು ನಡೆದಿಲ್ಲವಾದ್ದರಿಂದ ಅರ್ಜಿಯಲ್ಲಿ ನಮೂದಿಸಿರುವ ಅಂಶಗಳು ವಿಷಯ ಮುಚ್ಚಿಹಾಕುವ ಪ್ರಯತ್ನದಂತೆ ಕಾಣುತ್ತಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

  ಅರ್ಜಿದಾರರು ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ನ್ಯಾಯಾಲಯವನ್ನು ಸಂಪರ್ಕಿಸಿದ್ದು ಅದೇ ರೀತಿ ಅರ್ಜಿದಾರನು ವಿವಾಹ ಯೋಗ್ಯ ವಯಸ್ಸಿನವನಲ್ಲವಾದ್ದರಿಂದ ನ್ಯಾಯಾಲಯವನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಅರ್ಜಿದಾರರು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಗೆ 25,000 ರೂ ದಂಡ ಪಾವತಿಸಬೇಕೆಂದು ನ್ಯಾಯಾಲಯ ತೀರ್ಪಿತ್ತಿದೆ. ಆದರೂ, ಅರ್ಜಿದಾರರು ತಮ್ಮ ಜೀವ ಹಾಗೂ ಸ್ವಾತಂತ್ರ್ಯಕ್ಕೆ ಬೆದರಿಕೆಯನ್ನು ಹೊಂದಿರುವುದಾಗಿ ತಿಳಿಸಿದ್ದು ಅರ್ಜಿದಾರರ ಜೀವ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವ ಕರ್ತವ್ಯಗಳಿಂದ ನ್ಯಾಯಾಲಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಪಂಚಕುಲದ ಪೊಲೀಸ್ ಆಯುಕ್ತರಿಗೆ ಘಟನೆಯನ್ನು ಕೂಲಂಕುಷವಾಗಿ ತನಿಖೆ ನಡೆಸಿ ಅವರ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ.

  Read Also: Viral Story: ಹಿಂದಿನ ಜನ್ಮದ ಪಾಪ ಕಳೆದುಕೊಳ್ಳೋಕೆ ಭಾನುವಾರ ಭಿಕ್ಷೆ ಬೇಡುತ್ತೇನೆ, ರಜೆ ಬೇಕು ಎಂದ ಎಂಜಿನಿಯರ್..!

  ಒಂದು ವೇಳೆ, ಅರ್ಜಿದಾರರ ಜೀವಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ನಿಜವಾದ ಬೆದರಿಕೆ ಇದೆ ಎಂದು ಕಂಡುಬಂದಲ್ಲಿ, ಅರ್ಜಿದಾರರಿಗೆ ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳಲು ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
  First published: