Strange Wedding: ತನ್ನ ಅಪ್ಪ ಅಮ್ಮನ ಮದುವೆಗೆ ಸಾಕ್ಷಿಯಾದ ಮಗು; ಮಗನ ಮುಂದೆಯೇ ದಾಂಪತ್ಯ ಆರಂಭಿಸಿದ ಜೋಡಿ
Couple married in front of newborn baby: ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿದ್ದಾಗ ಅರಿವಿಲ್ಲದೇ ಅಪ್ಪ ಅಮ್ಮನ ಮದುವೆಯನ್ನು ನಾನು ನೋಡಿಲ್ಲ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಈ ಮಗುವಿಗೆ, ತಂದೆ ತಾಯಿಯ ಮದುವೆಯಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ
ಕುಡಲ್ಲೋರು: ಈ ರೀತಿಯ ಮದುವೆಯನ್ನು ನೀವೆಂದೂ ನೋಡಲು ಸಾಧ್ಯವೇ ಇಲ್ಲ (Strange wedding in Tamil Nadu). ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿದ್ದಾಗ ಅರಿವಿಲ್ಲದೇ ಅಪ್ಪ ಅಮ್ಮನ ಮದುವೆಯನ್ನು ನಾನು ನೋಡಿಲ್ಲ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಈ ಮಗುವಿಗೆ, ತಂದೆ ತಾಯಿಯ ಮದುವೆಯಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ (Couple married in front of new born baby). ಇಂತಾ ವಿಲಕ್ಷಣ ಮದುವೆ ನಡೆದಿರುವುದು ತಮಿಳುನಾಡಿನ (Tamil Nadu) ಕುಡಲ್ಲೋರು ಊರಿನಲ್ಲಿ. ಹೌದು ತಂದೆ ತಾಯಿ ಇಬ್ಬರೂ ಮಗು ಹುಟ್ಟಿದ ಮೇಲೆ ಮದುವೆಯಾಗಿದ್ದಾರೆ. ವೆಲ್ಮುರುಗನ್ (Velmurugan) ಎಂಬಾತ ಯುವತಿಯನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದ. ಆದರೆ ಅದಾದ ನಂತರ ಮೋಸ ಮಾಡಿದ್ದ. ಆದರೆ ಪೊಲೀಸರ ಭಯಕ್ಕೆ ಕಡೆಗೂ ಮದುವೆಯಾಗಲು ಒಪ್ಪಿಕೊಂಡಿದ್ದಾನೆ.
ವೆಲ್ಮುರುಗನ್ಗೆ 36 ವರ್ಷ, 27 ವರ್ಷದ ಸತ್ಯ ಎಂಬುವವಳನ್ನು ಮದುವೆಯಾಗುತ್ತೀನಿ ಎಂದು ನಂಬಿಸಿ ಲೈಂಗಿಕ ಸಂಪರ್ಕ ಸಾಧಿಸಿದ್ದ. ಇತ್ತ ಸತ್ಯ ಗರ್ಭವತಿಯಾಗಿದ್ದಾಳೆ, ಅದಾದ ನಂತರ ವೆಲ್ಮುರುಗನ್ ವರಸೆ ಬದಲಾಗಿದೆ. ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಆಕೆ ಮೊದಲಿಗೆ ಅತ್ತು ಕರೆದು ಮಾಡಿದ್ದಾಳೆ. ಆದರೆ ವೆಲ್ಮುರುಗನ್ ಕೇಳಿಲ್ಲ. ಆತನ ಮನೆಗೆ ಹೋಗಿ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಆಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಬೇಕಾಯಿತು.
ಆಸ್ಪತ್ರೆಯಿಂದ ದೊರೆಯಿತು ಆಸರೆ:
ಸತ್ಯ ಗರ್ಭವತಿಯನ್ನಾಗಿ ಮೋಸ ಮಾಡಿದ ವೆಲ್ಮುರುಗನ್ ಜೊತೆ ಮದುವೆಯಾಗಲು ಹಲವು ರೀತಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಒಂಭತ್ತು ತಿಂಗಳು ನೋವಿನಲ್ಲೇ ಕಳೆದು ಗಂಡು ಮಗುವನ್ನು ಹೆತ್ತಳು. ಆತ ಮೋಸ ಮಾಡಿದ ನಂತರ ಆಕೆ ಮಗುವನ್ನು ತೆಗೆಸಬಹುದಿತ್ತು ಆದರೆ ಹಾಗೆ ಮಾಡದೇ ಮಗುವನ್ನು ಹೆರುವ ನಿರ್ಧಾರ ಮಾಡಿದ್ದಳು ಸತ್ಯ. ಆಸ್ಪತ್ರೆಯಲ್ಲಿ ಮಗುವಿನ ತಂದೆಯ ಹೆಸರು ಕೇಳಿದಾಗ, ಅವಳು ಅನಿವಾರ್ಯವಾಗಿ ವೆಲ್ಮುರುಗನ್ ಹೆಸರು ಹೇಳಬೇಕಾಯ್ತು. ಜತೆಗೆ ತಾನು ಅನುಭವಿಸಿದ ನೋವನ್ನು ಕೂಡ ನರ್ಸ್ಗೆ ಸತ್ಯ ಹೇಳಿದಳು.
ಅದಾದ ನಂತರ ನರ್ಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ, ವೆಲ್ಮುರುಗುನ್ನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಸತ್ಯ ಮಾತ್ರ ಆತನ ಮೇಲೆ ಕಾನೂನು ಕ್ರಮ ಬೇಡ ಎಂದಿದ್ದಾಳೆ. ಪೊಲೀಸರು ವೆಲ್ಮುರುಗನ್ಗೆ ಕಿವಿಮಾತು ಹೇಳಿ, ಒಂದೋ ಮದುವೆಯಾಗು ಇಲ್ಲದಿದ್ದರೆ ಜೈಲಿಗೆ ಹೋಗಬೇಕು ಎಂದು ಬೆದರಿಸಿದ್ದಾರೆ. ಜೈಲಿಗೆ ಹೋಗುವ ಭಯಕ್ಕೋ, ತಪ್ಪಿನ ಅರಿವಾಗಿಯೋ ವೆಲ್ಮುರುಗನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಹಸುಗೂಸಿನ ಮುಂದೆಯೇ ಇಬ್ಬರೂ ಮದುವೆಯಾಗಿದ್ದಾರೆ. ಸತ್ಯಳ ತಾಯಿ - ತಂದೆ ಸಮ್ಮುಖದಲ್ಲಿ ಮದುವೆಯಾಗಿದೆ.
ಒಟ್ಟಿನಲ್ಲಿ ಮೋಸ ಮಾಡಿ ಬಚಾವಾಗಬಹುದು ಎಂದುಕೊಂಡಿದ್ದವ ಕಡೆಗೂ ಮದುವೆಯಾಗಿದ್ದಾನೆ.
ಈ ರೀತಿಯ ಘಟನೆಗಳು ದೇಶಾದ್ಯಂತ ಆಗಾಗ ನಡೆಯುತ್ತಲೇ ಇರುತ್ತಾವೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ನಂತರ ಎಲ್ಲವೂ ಮುಗಿದ ಅಧ್ಯಾಯ ಎಂದು ವಂಚಿಸುವುದು. ಇಂತಾ ಮಂದಿಯ ವಿರುದ್ಧ ಸರಿಯಾದ ಕಾನೂನು ಕ್ರಮ ಜರುಗಿಸದಲ್ಲಿ ಮಾತ್ರ ಈ ರೀತಿಯ ಪ್ರಕರಣಗಳು ಕಡಿಮೆಯಾಗಬಹುದು. ಈ ಪ್ರಕರಣದಲ್ಲೂ ವೆಲ್ಮುರುಗನ್ ವಿರುದ್ಧ ಸತ್ಯ ದೂರು ನೀಡಿದ್ದರೆ ಕಂಬಿ ಎಣಿಸಬೇಕಿತ್ತು. ಆದರೆ ಆಕೆಯ ಒಳ್ಳೆಯತನದಿಂದ ಜೈಲು ಪಾಲಾಗುವುದು ತಪ್ಪಿದೆಯಷ್ಟೇ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ