ಲಕ್ನೋ: ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತೆ ಕಾಣಿಸುವುದಿಲ್ಲ. ಅದರಲ್ಲಿಯೂ ಕೆಲ ಪ್ರೇಮಿಗಳು (Lovers) ತಮ್ಮ ಅಕ್ಕ, ಪಕ್ಕ ಯಾರಿರುತ್ತಾರೆ ಎಂಬುವುದನ್ನು ಕೂಡ ಮರೆತು ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸುತ್ತಾರೆ. ಜನರಿರುವುದನ್ನು ಗಮನಿಸದೇ ಬಸ್ ನಿಲ್ದಾಣ, ರಸ್ತೆ, ಪಾರ್ಕ್ನಂತಹ ಸ್ಥಳದಲ್ಲಿ ಆಗಾಗ ಮುತ್ತಿನಾಟದಲ್ಲಿ (Kiss) ತೊಡಗಿಕೊಳ್ಳುವುದನ್ನು ನೋಡಿರುತ್ತೇವೆ. ನಡು ರಸ್ತೆಯಲ್ಲಿ ಜನನಿಬಿಡ ಪ್ರದೇಶದಲ್ಲಿ ಚಲಿಸುತ್ತಿರುವ ಸ್ಕೂಟರ್ (Scooter) ಮೇಲೆ ಪ್ರೇಮಿಗಳಿಬ್ಬರು ಚುಂಬಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಪ್ರೀತಿ ಪ್ರೇಮದ ಅಮಲಿನಲ್ಲಿದ್ದ ಪ್ರೇಮಿಗಳು ಥೇಟ್ ಸಿನಿಮಾ ಶೈಲಿಯಲ್ಲಿ ಸ್ಕೂಟರ್ ಮೇಲೆ ಜಾಲಿ ರೈಡ್ ಮಾಡಿರುವ ಈ ವಿಡಿಯೋ ವೈರಲ್ (Video Viral) ಆದ ಬೆನ್ನೆಲ್ಲೇ ಪೊಲೀಸರು (Police) ಯುವಕನನ್ನು ಬಂಧಿಸಿದ್ದಾರೆ. ಲಕ್ನೋದ ಹಜರತ್ಗಂಜ್ (Lucknow's Hazratganj) ಪ್ರದೇಶದಲ್ಲಿ ಘಟನೆ ವರದಿಯಾಗಿದ್ದು, ಹಿಂದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ (Mobile) ಸೆರೆಹಿಡಿದಿದ್ದಾರೆ.
नबाबों का शहर Lucknow उत्तर प्रदेश pic.twitter.com/dZ92Sn1R0E
— sakshi (@ShadowSakshi) January 17, 2023
ಯುವಕನ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು
ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದ ಬಳಿಕ ದ್ವಿಚಕ್ರ ಚಲಾಯಿಸುತ್ತಿದ್ದ ಯುವಕನನ್ನು ವಿಕ್ಕಿ ಎಂದು ಗುರುತಿಸಲಾಯಿತು. ಹೀಗಾಗಿ ಚಿನ್ಹತ್ನಲ್ಲಿರುವ ಆತನ ನಿವಾಸಕ್ಕೆ ತೆರಳಿದ ಪೊಲೀಸರ ತಂಡವೊಂದು ಆತನನ್ನು ಬಂಧಿಸಿದೆ. ವಿಕ್ಕಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಶ್ಲೀಲ ಕೃತ್ಯಗಳು (294) ಮತ್ತು ಅಜಾಗರೂಕ ಚಾಲನೆ (279) ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತೆಯಾಗಿದ್ದರಿಂದ ಹುಡುಗಿ ಬಿಟ್ಟು ಕಳುಹಿಸಿರುವ ಪೊಲೀಸ್ರು
ಆದರೆ ಹುಡುಗಿ 12ನೇ ತರಗತಿಯಲ್ಲಿ ಓದುತ್ತಿದ್ದು, ಅಪ್ರಾಪ್ತೆ ಎಂಬ ಕಾರಣಕ್ಕೆ ಆಕೆಯನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಕೇಂದ್ರ ವಲಯದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಜನನಿಬಿಡ ರಸ್ತೆಯಲ್ಲೇ ಬಾಯ್ಫ್ರೆಂಡ್ ಜೊತೆಗೆ ಹುಡುಗಿ ಲಿಪ್ಲಾಕ್
14 ಸೆಕೆಂಡ್ ಇರುವ ವಿಡಿಯೋದಲ್ಲಿ ಹುಡುಗಿ ಉಲ್ಟಾ ಕುಳಿತುಕೊಂಡು ಕಪ್ಪು ಜಾಕೆಟ್ ಧರಿಸಿದ್ದ ತನ್ನ ಬಾಯ್ಫ್ರೆಂಡ್ ಅನ್ನು ಬಿಗಿದಪ್ಪಿಕೊಳ್ಳುವುದನ್ನು ಕಾಣಬಹುದಾಗಿದೆ. ಇಷ್ಟೇ ಅಲ್ಲದೇ ಕುತ್ತಿಗೆ ಹಿಡಿದುಕೊಂಡು ಲಿಪ್ಲಾಕ್ ಮಾಡಿರುವುದನ್ನು ಕೂಡ ಕಾಣಬಹುದಾಗಿದೆ.
ಹೆಲ್ಮೆಟ್ ಧರಿಸಿದೇ ರಸ್ತೆಯಲ್ಲಿ ಪ್ರೇಮಿಗಳ ಮೋಜು
ಈ ವೇಳೆ ಇಬ್ಬರು ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಅಲ್ಲದೇ ಯುವಕ ಝಿಗ್-ಜಾಗ್ ಆಗಿ ವಾಹನ ಚಲಾಯಿಸುತ್ತಿದ್ದನು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಪ್ರೇಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ.
ವಿಶಾಖ ಪಟ್ಟಣದಲ್ಲಿ ಬೈಕ್ ಮೇಲೆ ಬಾಯ್ಫ್ರೆಂಡ್ ಜೊತೆ ರೋಮ್ಯಾನ್ಸ್
ಇದೇ ರೀತಿ ಕೆಲ ದಿನಗಳ ಹಿಂದೆ ವಿಶಾಖ ಪಟ್ಟಣದಲ್ಲಿ ಬಾಯ್ ಫ್ರೆಂಡ್ ಒಬ್ಬ ತನ್ನ ಹುಡುಗಿಯನ್ನು ಬೈಕ್ನ ಫ್ಯುಯೆಲ್ ಟ್ಯಾಕ್ ಮೇಲೆ ಕುರಿಸಿಕೊಂಡು ಫಿಲ್ಮಿ ಸ್ಟೈಲ್ನಲ್ಲಿ ರೋಮ್ಯಾನ್ಸ್ ಮಾಡಿದ್ದನು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.
విశాఖలో లవర్స్ ఓవర్ యాక్షన్. స్టీల్ ప్లాంట్ మెయిన్ రోడ్డుపై పట్టపగలు బరితెగింపు. హెల్మెట్ లేకుండా యువకుడు డ్రైవింగ్. కాలేజ్ యూనిఫామ్ ధరించి విద్యార్థిని వికృత చేష్టలు చూసి నివ్వెరపోయిన స్థానికులు. #AndhraPradesh #Visakhapatnam #Vizag pic.twitter.com/i2dGgHKElg
— Vizag News Man (@VizagNewsman) December 29, 2022
ಪ್ರೇಮಿಗಳನ್ನು ಬಂಧಿಸಿದ್ದ ಪೊಲೀಸ್ರು
ಈ ವೀಡಿಯೋವನ್ನು ದಾರಿ ಹೋಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಜೋಡಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.
ಬೈಕ್ ಚಲಾಯಿಸುತ್ತಿದ್ದ ವೇಳೆ ಯುವಕನನ್ನು ತಬ್ಬಿಕೊಂಡಿದ್ದ ಹುಡುಗಿ
ವೀಡಿಯೋದಲ್ಲಿ ಯುವಕ ಹೆಲ್ಮಟ್ ಧರಿಸಿದೇ ಬೈಕ್ ಓಡಿಸುತ್ತಿದ್ದರೆ, ಫ್ಯುಯೆಲ್ ಮೇಲೆ ಕುಳಿತ್ತಿದ್ದ ಯೂನಿಫಾಮ್ರ್ ಧರಿಸಿದ್ದ ಹುಡುಗಿ ಆತನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡಿದನ್ನು ಕಾಣಬಹುದಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ