ಮಕ್ಕಳನ್ನು ಕೊಂದು ಅಪಾರ್ಟ್​​ಮೆಂಟ್​​ನಿಂದ ಜಿಗಿದ ತಂದೆ-ತಾಯಿ

ಡೆತ್​ನೋಟ್​ ಜೊತೆಗೆ ಹಣ ಕೂಡ ಇದ್ದು, ಅದನ್ನು ತಮ್ಮ ಅಂತ್ಯಸಂಸ್ಕಾರಕ್ಕೆ ಬಳಸುವಂತೆ ಡೆತ್​ ನೋಟ್​​ನಲ್ಲಿ ಉಲ್ಲೇಖಿಸಲಾಗಿದೆ. ಮೃತ ವ್ಯಕ್ತಿ ಬ್ಯುಸಿನೆಸ್​ನಲ್ಲಿ ನಷ್ಟವಾಗಿ ತೀರ ಕುಸಿದಿದ್ದ. ಸಾಕಷ್ಟು ಬಾರಿ ಚೆಕ್​ ಬೌನ್ಸ್​ ಕೂಡ ಆಗಿತ್ತು ಎಂದು ತಿಳಿದು ಬಂದಿದೆ.

news18-kannada
Updated:December 3, 2019, 1:07 PM IST
ಮಕ್ಕಳನ್ನು ಕೊಂದು ಅಪಾರ್ಟ್​​ಮೆಂಟ್​​ನಿಂದ ಜಿಗಿದ ತಂದೆ-ತಾಯಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.03):  ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಫ್ಯಾಕ್ಟರಿ ಮಾಲೀಕ ಮತ್ತು ಆತನ ಪತ್ನಿ ಅಪಾರ್ಟ್​​ಮೆಂಟ್​ನ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ತಾವು ಸಾಯುವ ಮುನ್ನ ತಮ್ಮ ಮಕ್ಕಳ ಗಂಟಲನ್ನು ಸೀಳಿ ಕೊಂದಿದ್ದಾರೆ.

ಈ ಘಟನೆ ದೆಹಲಿ ಸಮೀಪದ ಘಾಜಿಯಾಬಾದ್​ನಲ್ಲಿ ನಡೆದಿದೆ. ಇಡೀ ಕುಟುಂಬವೇ ಸಾವನ್ನಪ್ಪಿದೆ. ಮತ್ತೊಬ್ಬ ಮಹಿಳೆಯೂ ಮಹಡಿಯಿಂದ ಜಿಗಿದಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಡಿಯಿಂದ ಜಿಗಿದ ಮತ್ತೊಬ್ಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಬ್ಯುಸಿನೆಸ್​ ಪಾರ್ಟ್ನರ್​​ ಆಗಿದ್ದಳು. ಅಷ್ಟೇ ಅಲ್ಲದೇ, ಆಕೆ ಆ ವ್ಯಕ್ತಿಯ ಎರಡನೇ ಹೆಂಡತಿಯಾಗಿದ್ದಳು ಎಂದು ತಿಳಿದು ಬಂದಿದೆ.

17 ಮಂದಿ ಬಲಿಯಾಗಿದ್ದ ಬೀಜಾಪುರ್ ನಕ್ಸಲ್ ಎನ್​ಕೌಂಟರ್ ನಕಲಿ: ನ್ಯಾಯಾಂಗ ಸಮಿತಿ ವರದಿ

ಆತ್ಮಹತ್ಯೆ ಮಾಡಿಕೊಂಡ ದಂಪತಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಮನೆಯಲ್ಲಿ ಡೆತ್​​ನೋಟ್​ ಬರೆದಿಟ್ಟು, ಮಕ್ಕಳು ಮಲಗಿರುವಾಗ ಅವರ ಗಂಟಲು ಸೀಳಿ ಕೊಲೆ ಮಾಡಿದ್ಧಾರೆ. ಬಳಿಕ ಅವರೂ ಸಹ ಅಪಾರ್ಟ್​​​ಮೆಂಟ್​ನಿಂದ ಜಿಗಿದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್​ನೋಟ್​ ಜೊತೆಗೆ ಹಣ ಕೂಡ ಇದ್ದು, ಅದನ್ನು ತಮ್ಮ ಅಂತ್ಯಸಂಸ್ಕಾರಕ್ಕೆ ಬಳಸುವಂತೆ ಡೆತ್​ ನೋಟ್​​ನಲ್ಲಿ ಉಲ್ಲೇಖಿಸಲಾಗಿದೆ. ಮೃತ ವ್ಯಕ್ತಿ ಬ್ಯುಸಿನೆಸ್​ನಲ್ಲಿ ನಷ್ಟವಾಗಿ ತೀರ ಕುಸಿದಿದ್ದ. ಸಾಕಷ್ಟು ಬಾರಿ ಚೆಕ್​ ಬೌನ್ಸ್​ ಕೂಡ ಆಗಿತ್ತು ಎಂದು ತಿಳಿದು ಬಂದಿದೆ.

"ನಾವು ಇಬ್ಬರು ಮಕ್ಕಳ ಮೃತದೇಹಗಳನ್ನು ಅಪಾರ್ಟ್​​ಮೆಂಟ್​​ನಲ್ಲಿ ನೋಡಿದೆವು. ಅಲ್ಲಿಯೇ ಹಣದ ಜೊತೆಗೆ ಡೆತ್​ನೋಟ್​ ಕೂಡ ಇತ್ತು. ಹಣಕಾಸಿನ ಸಮಸ್ಯೆಯಿಂದಾಗಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ಧಾರೆ," ಎಂದು ಹಿರಿಯ ಪೊಲೀಸ್​ ಅಧಿಕಾರಿ ಸುಧೀರ್ ಕುಮಾರ್​ ಹೇಳಿದ್ಧಾರೆ.ಮಗುವಿಗೆ ಜನ್ಮ ನೀಡಿದ ತಾಯಿ ಕೋಮಾ ಸ್ಥಿತಿಯಲ್ಲಿ; ವೈದ್ಯರ ನಿರ್ಲಕ್ಷ್ಯ ಎಂದು ಪೋಷಕರ ಆರೋಪ
First published: December 3, 2019, 12:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading