Viral Video: ಮಗನ ಮೃತ ದೇಹ ಪಡೆಯಲು ಪೋಷಕರು ಪಡುವ ಕಷ್ಟ ನೋಡಿ; ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ

ಬಿಹಾರದ ಸಮಸ್ತಿಪುರದಲ್ಲಿ ವೃದ್ಧ ದಂಪತಿಯೊಬ್ಬರು ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆಯಲು ಹಣವನ್ನು ಜೋಡಿಸಲು ಬೀದಿಗಿಳಿದು ಭಿಕ್ಷೆ ಬೇಡುತ್ತಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ 50,000 ರೂಪಾಯಿ ಲಂಚ ಕೇಳಿದರು ಎಂದು ಇವರು ಆರೋಪಿಸಿದ್ದಾರೆ.

ಮಗನ ಶವ ಪಡೆಯಲು ಭಿಕ್ಷೆ ಬೇಡಿ ಹಣ ಸೇರಿಸುತ್ತಿರುವ ದಂಪತಿ

ಮಗನ ಶವ ಪಡೆಯಲು ಭಿಕ್ಷೆ ಬೇಡಿ ಹಣ ಸೇರಿಸುತ್ತಿರುವ ದಂಪತಿ

  • Share this:
ಈಗಂತೂ ಜನರಿಗೆ ದುಡ್ಡಿನ (Money) ಆಸೆ ಎಷ್ಟೊಂದು ಆಗಿದೆ ಎಂದರೆ ಯಾರಾದರೂ ಆಸ್ಪತ್ರೆಯಲ್ಲಿ (Hospital) ತೀರಿಕೊಂಡರೆ ಅವರ ಮೃತದೇಹವನ್ನು ಅವರ ಮನೆಯವರಿಗೆ ನೀಡಲು ಸಹ ಲಂಚ (Bribe) ಕೇಳುತ್ತಿದ್ದಾರೆ. ಇಂತಹ ಘಟನೆಗಳು ನಾವು ಆಗಾಗ ನೋಡುತ್ತಲೇ ಇರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ಈ ಆಸ್ಪತ್ರೆಗಳಿಗೆ ರೋಗಿಗಳನ್ನು (Patient) ತರುವುದಕ್ಕೂ ಸಹ ಆಸ್ಪತ್ರೆಗಳ ಆಂಬ್ಯುಲೆನ್ಸ್ (Ambulance) ವಿಭಾಗದವರು ಹೆಚ್ಚಿನ ದುಡ್ಡು ಕೇಳುವುದನ್ನು ನಾವು ನೋಡಿರುತ್ತೇವೆ. ಎಷ್ಟೋ ಜನರು ತಮ್ಮ ಹತ್ತಿರದವರನ್ನು ಆಸ್ಪತ್ರೆಗೆ ತಳ್ಳುಗಾಡಿಯಲ್ಲಿ ಮಲಗಿಸಿಕೊಂಡು ಆಸ್ಪತ್ರೆಗೆ ತರುವ ಘಟನೆಗಳನ್ನು ಸಹ ನಾವು ಸುದ್ದಿ ಮಾಧ್ಯಮದಲ್ಲಿ ನೋಡಿರುತ್ತೇವೆ.

50,000 ರೂಪಾಯಿಗೆ ಬೇಡಿಕೆ ಇಟ್ಟ ಆಸ್ಪತ್ರೆಯ ಉದ್ಯೋಗಿ
ಇಲ್ಲಿಯೂ ಸಹ ಅಂತಹದೇ ಒಂದು ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ ನೋಡಿ. ಬಿಹಾರದ ಸಮಸ್ತಿಪುರದಲ್ಲಿ ವೃದ್ಧ ದಂಪತಿಯೊಬ್ಬರು ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಪಡೆಯಲು ಹಣವನ್ನು ಜೋಡಿಸಲು ಬೀದಿಗಿಳಿದು ಭಿಕ್ಷೆ ಬೇಡುತ್ತಿದ್ದಾರೆ. ಆಸ್ಪತ್ರೆಯ ಉದ್ಯೋಗಿಯೊಬ್ಬರು ತಮ್ಮ ಮಗನ ಶವವನ್ನು ಬಿಡುಗಡೆ ಮಾಡಲು ದಂಪತಿಗೆ 50,000 ರೂಪಾಯಿ ಲಂಚ ಕೇಳಿದರು ಎಂದು ಇವರು ಆರೋಪಿಸಿದ್ದಾರೆ.

ಮಗನ ಶವಕ್ಕಾಗಿ ಬೀದಿ ಬದಿ ಭಿಕ್ಷೆ ಬೇಡುತ್ತಿರುವ ದಂಪತಿಗಳು
ಬಿಹಾರದ ಸಮಸ್ತಿಪುರ ನಗರದ ಬೀದಿಗಳಲ್ಲಿ ವೃದ್ಧ ದಂಪತಿಗಳು ತಮ್ಮ ಮಗನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣ ಹೊಂದಿಸಲು ಭಿಕ್ಷೆ ಬೇಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತುಂಬಾನೇ ವೈರಲ್ ಆಗಿದೆ. ಮಗನ ಶವವನ್ನು ಬಿಡುಗಡೆ ಮಾಡಲು 50,000 ರೂಪಾಯಿಗಳನ್ನು ಪಾವತಿಸುವಂತೆ ಸದರ್ ಆಸ್ಪತ್ರೆಯ ಉದ್ಯೋಗಿಯೊಬ್ಬರು ಕೇಳಿದ ನಂತರ ನಮಗೆ ಬೇರೆ ದಾರಿ ತೋಚದೆ ಭಿಕ್ಷೆ ಬೇಡಬೇಕಾಗಿದೆ ಎಂದು ವೃದ್ಧ ದಂಪತಿಗಳು ಹೇಳಿದ್ದಾರೆ.

ಇದನ್ನೂ ಓದಿ:  Crime News: 7 ತಿಂಗಳು ರೇಪ್ ಮಾಡಿದವನನ್ನು ಕೊಂದ 13 ವರ್ಷದ ಬಾಲಕಿಗೆ ಶಿಕ್ಷೆ!

ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೃತನ ತಂದೆ ಮಹೇಶ್ ಠಾಕೂರ್ ಅವರು "ಕೆಲವು ಸಮಯದ ಹಿಂದೆ ನನ್ನ ಮಗ ಕಾಣೆಯಾಗಿದ್ದನು. ಈಗ, ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಒಂದು ಪೋನ್ ಕರೆಯೊಂದು ಬಂದಿದೆ. ನನ್ನ ಮಗನ ದೇಹವನ್ನು ಬಿಡುಗಡೆ ಮಾಡಲು ಆಸ್ಪತ್ರೆಯ ಉದ್ಯೋಗಿಯೊಬ್ಬರು 50,000 ರೂಪಾಯಿಗಳನ್ನು ಕೇಳಿದ್ದಾರೆ. ನಾವು ಬಡವರು, ಇಂತಹ ದೊಡ್ಡ ಮೊತ್ತವನ್ನು ನಾವು ಹೇಗೆ ಪಾವತಿಸಲು ಸಾಧ್ಯ ಹೇಳಿ" ಎಂದು ಕೇಳಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ
ಈ ವಿಷಯ ಅದು ಹೇಗೋ ಅಲ್ಲಿನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ವಿನಯ್ ಕುಮಾರ್ ರೈ ಅವರಿಗೆ ತಿಳಿದಿದ್ದು, ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗಿದ್ದು, ಇಡೀ ವಿಷಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಕಂಡು ಬಂದಿದೆ ಎಂದು ಅವರು ಮಾಧ್ಯಮದವರಿಗೆ ಹೇಳಿದರು.



ಇದು ಜಿಲ್ಲಾಡಳಿತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಅವರು ಈ ಎಲ್ಲಾ ವರದಿಗಳನ್ನು ನಿರಾಕರಿಸಿದರು. ಮೃತದೇಹವು ಪೊಲೀಸ್ ವಶದಲ್ಲಿದೆ ಮತ್ತು ಅದನ್ನು 72 ಗಂಟೆಗಳ ಮೊದಲು ಬಿಡುಗಡೆ ಮಾಡಬಾರದು ಮತ್ತು ಶವಾಗಾರದ ಸಿಬ್ಬಂದಿ ಪೋಷಕರಿಗೆ 50,000 ರೂಪಾಯಿಗಳನ್ನು ಪಾವತಿಸಿದರೂ ಸಹ ಶವವನ್ನು ಹಸ್ತಾಂತರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಕುಟುಂಬವು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಎಡಿಎಂ ಹೇಳಿದರು.

ರೋಗಿಗಳ ಸಂಬಂಧಿಕರಿಂದ ಹಣವನ್ನು ವಸೂಲಿ ಮಾಡುವ ಸಿಬ್ಬಂದಿಗಳು
ಈ ಆಸ್ಪತ್ರೆಯಲ್ಲಿನ ಹೆಚ್ಚಿನ ಸಿಬ್ಬಂದಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಆಗಾಗ್ಗೆ ತಮ್ಮ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಡೆಯುವುದಿಲ್ಲ. ಸಿಬ್ಬಂದಿಯು ರೋಗಿಗಳ ಸಂಬಂಧಿಕರಿಂದ ಹಣವನ್ನು ತೆಗೆದುಕೊಂಡ ಹಲವಾರು ಉದಾಹರಣೆಗಳಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Delhi Parents: ಹೋಂವರ್ಕ್​ ಮಾಡದ್ದಕ್ಕೆ 5 ವರ್ಷದ ಮಗುವನ್ನು ಬಿಸಿಲಲ್ಲಿ ಮಲಗಿಸಿದ ಪೋಷಕರು!

ಸಮಸ್ತಿಪುರದ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬುಧವಾರ ಹೇಳಿದ್ದರು. "ಈ ವಿಷಯದಲ್ಲಿ ನಾವು ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಅವರು ಹೇಳಿದರು.
Published by:Ashwini Prabhu
First published: