Twin Tower Demolition: ಅವಳಿ ಗೋಪುರ ಧ್ವಂಸಕ್ಕೆ ಕೌಂಟ್‌ ಡೌನ್:‌ 3,700 ಕೆಜಿ ಸ್ಫೋಟಕ ಬಳಸಿ ಕೆಡವಲು ಸಿದ್ಧತೆ

ದೇಶದಲ್ಲಿ ತಲೆ ಎತ್ತಿದ್ದ ಮತ್ತೊಂದು ಅಕ್ರಮ ಕಟ್ಟಡದ ನೆಲಸಮಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ. ಆಗಸ್ಟ್ 28, ಮಧ್ಯಾಹ್ನ 2.30 ಕ್ಕೆ ಉತ್ತರ ಪ್ರದೇಶದ ನೋಯ್ಡಾದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು ಸ್ಪೋಟಕಗಳನ್ನು ಬಳಸಿ ಕೆಡವಲು ಈಗಾಗಲೇ ನಿರ್ಧರಿಸಿದ್ದು, ಅದಕ್ಕೆ ಬೇಕಾದ ತಯಾರಿ ಭರದಿಂದ ಸಾಗುತ್ತಿದೆ.

ಉತ್ತರ ಪ್ರದೇಶದ ಅವಳಿ ಗೋಪುರ

ಉತ್ತರ ಪ್ರದೇಶದ ಅವಳಿ ಗೋಪುರ

  • Share this:
ನೋಯ್ಡಾ: ದೇಶದಲ್ಲಿ ತಲೆ ಎತ್ತಿದ್ದ ಮತ್ತೊಂದು ಅಕ್ರಮ ಕಟ್ಟಡದ (Building) ನೆಲಸಮಕ್ಕೆ ಕೌಂಟ್‌ ಡೌನ್‌ ಶುರುವಾಗಿದೆ. ಆಗಸ್ಟ್ 28, ಮಧ್ಯಾಹ್ನ 2.30 ಕ್ಕೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದ (Noida) ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು ಸ್ಪೋಟಕಗಳನ್ನು ಬಳಸಿ ಕೆಡವಲು ಈಗಾಗಲೇ ನಿರ್ಧರಿಸಿದ್ದು, ಅದಕ್ಕೆ ಬೇಕಾದ ತಯಾರಿ ಭರದಿಂದ ಸಾಗುತ್ತಿದೆ. ಸುಪ್ರೀಂ ಕೋರ್ಟ್ (Supreme Court) ಆದೇಶದ ಮೇರೆಗೆ ಅಪೆಕ್ಸ್ ಕಟ್ಟಡದ 32 ಮಹಡಿಗಳು ಮತ್ತು ಸಿಯಾನಿ ಕಟ್ಟಡದ 29 ಮಹಡಿಗಳನ್ನು ಆಧುನಿಕ ಎಂಜಿನಿಯರಿಂಗ್, ಸುಧಾರಿತ ತಂತ್ರಜ್ಞಾನ ಮತ್ತು ವಿಜ್ಞಾನದ ನಿಯಮವನ್ನು ಬಳಸಿಕೊಂಡು ಧ್ವಂಸ ಮಾಡಲು ಸಿದ್ಧತೆ ನಡೆದಿದೆ.

ಅಕ್ಕಪಕ್ಕದ ನಿವಾಸಿಗಳ ಸ್ಥಳಾಂತರ
ಅವಳಿ ಗೋಪುರಗಳು ನೆಲಸಮವಾಗುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳನ್ನು ಆಗಸ್ಟ್ 28 ರಂದು ಬೆಳಿಗ್ಗೆ 7 ಗಂಟೆಯ ಮೊದಲು ಈ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರವಾಗುವಂತೆ ಆದೇಶಿಸಲಾಗಿದೆ. ಆದಾಗಲೇ ಹಲವಾರು ನಿವಾಸಿಗಳು ಬೇರೆಡೆ ಹೊರಟ್ಟಿದ್ದು ಸ್ಫೋಟದ ನಂತರದ ಆಘಾತಗಳಿಂದ ಹಾನಿಯಾಗದಂತೆ ತಡೆಯಲು ಅನೇಕರು ತಮ್ಮ ಬೆಲೆಬಾಳುವ ವಸ್ತುಗಳನ್ನು ಪ್ಯಾಕ್ ಮಾಡಲು ಆರಂಭಿಸಿದ್ದಾರೆ.

3,700 ಕೆಜಿ ಸ್ಫೋಟಕಗಳ ಬಳಕೆ
ಸ್ಫೋಟಕಗಳನ್ನು ಸಿಡಿಸಿ ಕಟ್ಟಡಗಳನ್ನು ಕೆಡವಲು ಯೋಜನೆ ಹಾಕಿಕೊಳ್ಳಲಾಗಿದೆ. ಯೋಜನೆಗೆ 3,500 ಕೆಜಿ ಸ್ಫೋಟಕಗಳನ್ನು ಬಳಸಿ ಧ್ವಂಸ ಮಾಡಲಾಗುತ್ತೆ. ಈಗಾಗಲೇ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸಿಯಾನಿ ಕಟ್ಟಡಗಳ ಕಾಲಂಗಳಲ್ಲಿ 3,700 ಕೆಜಿ ಸ್ಪೋಟಕಗಳನ್ನು ಬರೋಬ್ಬರಿ 9,400 ತೂತು ಕೊರೆದು ಅವುಗಳಲ್ಲಿ ಇಡಲಾಗಿದೆ.
ಅವಳಿ ಗೋಪುರಗಳನ್ನು ಕೆಡವಲು ನಾವು 3,700 ಕೆಜಿ ಸ್ಫೋಟಕಗಳನ್ನು ಹೊಂದಿಸಿದ್ದೇವೆ" ಎಂದು ಎಡಿಫೈಸ್ ಎಂಜಿನಿಯರಿಂಗ್‌ನ ಪ್ರಾಜೆಕ್ಟ್ ಇಂಜಿನಿಯರ್ ಮಯೂರ್ ಮೆಹ್ತಾ ಹೇಳಿದರು, ಸೂಪರ್‌ಟೆಕ್ ಮತ್ತು ನೋಯ್ಡಾ ಅಧಿಕಾರಿಗಳು ಡೆಮಾಲಿಶನ್‌ ಕೆಲಸ ಮಾಡಲು ಪ್ರತಿಯೊಂದು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

" ಯೋಜನೆ ಸುರಕ್ಷಿತವಾಗಿದೆ"
ಮೆಹ್ತಾ ಅವರು ಧ್ವಂಸದ ಸಂದರ್ಭದಲ್ಲಿ ಅಪಾಯವನ್ನುಂಟುಮಾಡುವ ಕಂಪನದ ಬಗ್ಗೆ ತಿಳಿಸಿದರು. "ನೋಯ್ಡಾವನ್ನು ಭೂಕಂಪನ ವಲಯ IVರ ಭೂಕಂಪಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಮಾನದಂಡಗಳ ಪ್ರಕಾರ ನಿರ್ಮಿಸಲಾದ ರಚನೆಗಳು ರಿಕ್ಟರ್ ಮಾಪಕದಲ್ಲಿ 6 ರ ತೀವ್ರತೆಯ ಭೂಕಂಪಗಳನ್ನು ನಿಭಾಯಿಸಬಲ್ಲವು. ಈ ಸ್ಫೋಟವು ರಿಕ್ಟರ್ ಮಾಪಕ-4 ಭೂಕಂಪದ ಹತ್ತನೇ ಒಂದು ಭಾಗವನ್ನು ಮಾತ್ರ ಪ್ರಚೋದಿಸುತ್ತದೆ. ಇದು ಸುರಕ್ಷಿತವಾಗಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Sonali Phogat: ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿಯದ್ದು ಸಾವಲ್ಲ, ಕೊಲೆ! ಕೇಸ್​ನಲ್ಲಿ ಟ್ವಿಸ್ಟ್

"ನಾವು ಯುಕೆ ಮೂಲದ ಸಂಸ್ಥೆಯಾದ ವೈಬ್ರೊಟೆಕ್ ಅನ್ನು ನೇಮಿಸಿಕೊಂಡಿದ್ದೇವೆ, ಈ ಸ್ಫೋಟವು ಪ್ರತಿ ಸೆಕೆಂಡಿಗೆ 22 ರಿಂದ 34 ಮಿಮೀ ಕಂಪನವನ್ನು ಪ್ರಚೋದಿಸುತ್ತದೆ. ರಿಕ್ಟರ್ ಮಾಪಕದಲ್ಲಿ 4 ರ ವಿಶಿಷ್ಟ ಭೂಕಂಪವು ಸೆಕೆಂಡಿಗೆ 300 ಮಿಮೀ ಉಂಟಾಗುತ್ತದೆ," ಅವರು ವಿವರಿಸಿದರು.

ಧೂಳು ಹೆಚ್ಚಾಗುವ ಭಯ
ಆಗಸ್ಟ್ 28ರಂದು ಮಧ್ಯಾಹ್ನ 2.30ಕ್ಕೆ ಕೇವಲ 9 ರಿಂದ 15 ಸೆಕೆಂಡ್ ಗಳಲ್ಲಿ ಅವಳಿ ಗೋಪುರಗಳು ಧರೆಗುರುಳಲಿವೆ. ಹೀಗಾಗಿ ಸುತ್ತಮುತ್ತಲೂ ಧೂಳಿನ ಭಯ ಆವರಿಸಿದೆ. ಆದರೆ ಈ ಬಗ್ಗೆ ಮುನ್ನೆಚ್ಚರಿಕೆಯನ್ನು ಈಗಾಗಲೇ ಎಡಿಫೈಸ್ ಇಂಜಿನಿಯರಿಂಗ್ ಕಂಪನಿಯು ತೆಗೆದುಕೊಂಡಿದೆ. ಅಕ್ಕ ಪಕ್ಕದ ಪ್ರದೇಶಗಳನ್ನು ಧೂಳು, ಮಾಲಿನ್ಯದಿಂದ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಅಲ್ಲದೇ ಗೋಪುರದ ಧ್ವಂಸವಾದ ಬಳಿಕ 35 ಸಾವಿರ ಕ್ಯೂಬಿಕ್ ಮೀಟರ್ ಅವಶೇಷ ಸೃಷ್ಟಿಯಾಗಲಿದೆ. ಇದನ್ನು 5 ರಿಂದ 6 ಹೆಕ್ಟೇರ್ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹಾಕಲಾಗುತ್ತೆ. ಕೆಡವುವಿಕೆಯ ನಂತರ ಶಿಲಾಖಂಡರಾಶಿಗಳ ತೆರವು ಪ್ರಾರಂಭಿಸಲು ಯಂತ್ರಗಳು ಮತ್ತು ಕಾರ್ಮಿಕರನ್ನು ಸಿದ್ಧಗೊಳಿಸಲಾಗಿದೆ ಎಂದು ಮೆಹ್ತಾ ತಿಳಿಸಿದ್ದಾರೆ.

'ಜಲಪಾತ'ದ ಸ್ಫೋಟ ತಂತ್ರ ಬಳಕೆ
ಗೋಪುರಗಳನ್ನು ಕೆಡವಲು ನಾವು 'ಜಲಪಾತದ ಸ್ಫೋಟ' ತಂತ್ರವನ್ನು ಬಳಸಲಾಗುತ್ತಿದೆ. ಇದರರ್ಥ ನೆಲಮಾಳಿಗೆಯು ಮೊದಲು ಕುಸಿಯುತ್ತದೆ, ಮತ್ತು ನಂತರ ಮೇಲಿನ ಮಹಡಿಗಳು ಒಂದೊಂದಾಗಿ ಕುಸಿಯುತ್ತವೆ. ಈ ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರಲು ದಕ್ಷಿಣ ಆಫ್ರಿಕಾದಿಂದ ತಜ್ಞರನ್ನು ಕರೆಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸ್ಫೋಟಕಗಳನ್ನು ಸಿಡಿಸಲು ಒಬ್ಬ ಬ್ಲಾಸ್ಟರ್ ಅನ್ನು ನಿಯೋಜಿಸಲಾಗಿದೆ.

ಸೈಟ್‌ನಿಂದ 450 ಮೀಟರ್‌ವರೆಗಿನ ಪ್ರದೇಶ ಅಂದರೆ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಭಾಗಗಳನ್ನು ಒಳಗೊಂಡಂತೆ ವಾಹನಗಳಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲಾ ಸಂಚಾರವನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಸ್ಫೋಟದ 15 ನಿಮಿಷಗಳ ಮೊದಲು ಧೂಳು ನೆಲೆಗೊಳ್ಳುವವರೆಗೆ ಸುಮಾರು ಅರ್ಧ ಘಂಟೆಯವರೆಗೆ ವಿಮಾನ ಹಾರಾಟ ನಿಷೇಧ ವಲಯವನ್ನು ವಿಧಿಸಲಾಗಿದೆ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಅವಳಿ ಗೋಪುರಗಳನ್ನುಏಕೆ ಕೆಡವಲಾಗುತ್ತಿದೆ?
ಅವಳಿ ಗೋಪುರಗಳು ನೂರು ಮೀಟರ್ ಗಿಂತ ಹೆಚ್ಚು ಎತ್ತರ ಇದ್ದು, ದೆಹಲಿಯ ಪ್ರಸಿದ್ದ ಕುತುಬ್‌ ಮಿನಾರ್ ಗಿಂತ ಹೆಚ್ಚು ಎತ್ತರ ಇವೆ. ನೋಯ್ಡಾ ಅಭಿವೃದ್ದಿ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆಯದೇ ಈ ಅವಳಿ ಗೋಪುರಗಳನ್ನು ನಿರ್ಮಿಸಲಾಗಿತ್ತು. ಒಂದು ಗೋಪುರದಿಂದ ಮತ್ತೊಂದು ಗೋಪುರಕ್ಕೆ 9 ಮೀಟರ್ ಅಂತರ ಮಾತ್ರ ಇದೆ. ಇದು ನಿಯಮದ ಉಲಂಘನೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ ಉಲಂಘಿಸಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ:  Kalasipalya Market: ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದ ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್! ಸರ್ಕಾರದ ಮುಂದಿನ ಪ್ಲ್ಯಾನ್ ಏನು?

ಈ ಅವಳಿ ಗೋಪುರದ ಪಕ್ಕದ ಎಮರಾಲ್ಡ್ ಕೋರ್ಟ್ ಅಪಾರ್ಟ್ ಮೆಂಟ್ ನಿವಾಸಿಗಳು ಆಕ್ರಮ ಗೋಪುರ ನಿರ್ಮಾಣದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಹಲವು ಗಡುವು ವಿಸ್ತರಣೆಗಳ ನಂತರ, ಸುಪ್ರಿಂ ಕೋರ್ಟ್ ಕಳೆದ ವರ್ಷ ಆಗಸ್ಟ್ 31 ರಂದು, ಸೂಪರ್‌ಟೆಕ್ ಪ್ರೈವೇಟ್ ಲಿಮಿಟೆಡ್‌ಗೆ 40 ಅಂತಸ್ತಿನ ಅವಳಿ ಗೋಪುರಗಳನ್ನು ಮೂರು ತಿಂಗಳೊಳಗೆ ಕೆಡವಲು ನಿರ್ದೇಶಿಸಿತ್ತು, ನ್ಯಾಯಾಲಯದ ತೀರ್ಪಿನ ಸುಮಾರು ಒಂದು ವರ್ಷದ ನಂತರ ಉರುಳಿಸುವಿಕೆಯ ಪ್ರಕ್ರಿಯೆ ನಡೆಯುತ್ತಿದೆ.
Published by:Ashwini Prabhu
First published: