news18-kannada Updated:May 20, 2020, 6:26 PM IST
ಅಂಪನ್ ಚಂಡಮಾರುತ ಅಪ್ಪಳಿಸುವ ಮುನ್ನ ವಾತಾವರಣ
ನವದೆಹಲಿ: ಅಂಫಾನ್ ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ ಶುರುವಾಗಿದ್ದು, ಸಂಜೆ 7 ಗಂಟೆಯೊಳಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲು ಪಶ್ವಿಮ ಬಂಗಾಳದ ದಿಗಾ ಮತ್ತು ಹತಿಯಾ ನಡುವೆ ಇರುವ ಸುಂದರ್ಬನ್ ಕರಾವಳಿ ಪ್ರದೇಶಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಬಳಿಕ ಅದು ಬೇರೆಡೆಗೆ ಪಸರಿಸುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ ಮಾತ್ರವಲ್ಲದೆ ಒರಿಸ್ಸಾ ಕರಾವಳಿವರೆಗೂ ತನ್ನ ಕೆನ್ನಾಲಿಗೆ ಚಾಚಲಿದೆ.
ಇದೇ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ಕರಾವಳಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಸಮುದ್ರ ತೀರದಿಂದ ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಜಾನುವಾರುಗಳನ್ನು ಸುರಕ್ಷಿತ ಪ್ತದೇಶಗಳಿಗೆ ಸಾಗಿಸಲಾಗಿದೆ.
ಅಂಫಾನ್ ಚಂಡಮಾರುತವು ಗಂಟೆಗೆ 160 ಕಿಲೋ ಮೀಟರ್ ತೀವ್ರತೆಯೊಂದಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಚಂಡಮಾರುತ ನಿರಂತರವಾಗಿ 2ರಿಂದ 3 ಗಂಟೆಗಳ ಕಾಲ ಇರಲಿದೆ. ಈ ಸಂದರ್ಭದಲ್ಲಿ ಕರಾವಳಿಯಲ್ಲಿ ಭೂಕುಸಿತ ಆಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.
ಇದನ್ನು ಓದಿ: Cyclone Amphan: ಅಂಪನ್ ಸೂಪರ್ ಸೈಕ್ಲೋನ್ಗೆ ಬಾಂಗ್ಲಾದೇಶದಲ್ಲಿ ಮೊದಲ ಬಲಿ
First published:
May 20, 2020, 6:12 PM IST