ತಾಲಿಬಾನಿಗಳು ಅಪಘಾನಿಸ್ತಾನದಲ್ಲಿ ಹಿಂಸ್ಮಾತ್ಮಕವಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಭಾನುವಾರ ಅಲ್ಲಿಂದ ಪಲಾಯನ ಮಾಡಿ, ಪ್ರಸ್ತುತ ಯುಎಇ ಸರಕಾರದ ಆಶ್ರಯ ಪಡೆದಿರುವ ಅಪಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಬುಧವಾರ ತಡರಾತ್ರಿ ವಿಡಿಯೋ ಬಿಡುಗಡೆ ಮಾಡಿದ್ದು, ಮನೆಗೆ ‘ಹಿಂದಿರುಗುವ ಮಾತುಕತೆ’ಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡಿಕೊಂಡಿರುವ ವಿಡಿಯೋ ಸಂದೇಶದಲ್ಲಿ ತಾವು ತಾಲಿಬಾನಿಗಳಿಂದ ‘ಪಲಾಯನ’ ಮಾಡಿದ ಕುರಿತು ವಿವರಿಸಿದ್ದಾರೆ. “ನಾನು ಎಂತಹ ಪರಿಸ್ಥಿತಿಯಲ್ಲಿ ಜಾಗ ಖಾಲಿ ಮಾಡಬೇಕಾಯಿಂದರೆ, ನನಗೆ ನನ್ನ ಶೂಗಳನ್ನು ಕೂಡ ಧರಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದಾರೆ.
ದೇಶ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ ಪಲಾಯನ ಮಾಡಿದ್ದಕ್ಕಾಗಿ ಜಾಗತಿಕವಾಗಿ ಟೀಕೆಗೆ ಒಳಗಾಗಿರುವ ಘನಿ ತಮ್ಮ 6 ನಿಮಿಷಗಳ ವಿಡಿಯೋದಲ್ಲಿ, “ಸ್ಥಳೀಯ ಭಾಷೆಯನ್ನು ಮಾತನಾಡುತ್ತಿರದ ಜನರು ಅಧ್ಯಕ್ಷರ ಅರಮನೆಗೆ ನುಗ್ಗಿ , ನನಗಾಗಿ ಹುಡುಕುತ್ತಿದ್ದರು, ನನ್ನನ್ನು ಸ್ಥಳಾಂತರಿಸಲಾಯಿತು. ಸಂದರ್ಭಗಳು ವೇಗವಾಗಿ ತೆರೆದುಕೊಂಡವು. ನಾನು ತಾಲಿಬಾನ್ ಜೊತೆ ಎಲ್ಲವನ್ನು ಒಳಗೊಂಡ ಸರಕಾರದ ಬಗ್ಗೆ ಸಮಾಲೋಚಿಸಲು ಬಯಸಿದ್ದೆ” ಎಂದವರು ಹೇಳಿಕೊಂಡಿದ್ದಾರೆ.
ತಾಲಿಬಾನ್ ಮತ್ತು ಸರಕಾರದ ಮಾಜಿ ಅಧಿಕಾರಿಗಳ ನಡುವಿನ ಮಾತುಕತೆಗೆ ತಮ್ಮ ಬೆಂಬಲವಿದೆ ಎಂದು ಹೇಳಿರುವ ಅವರು, ಪ್ರಸ್ತುತ ಯುನೈಟೆಡ್ ಅರಬ್ ಎಮಿರೆಟ್ಸ್ ಆಶ್ರಯ ಪಡೆದಿದ್ದು, ಮನೆಗೆ ‘ಮರಳುವ ಮಾತುಕತೆ’ಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
“ಅಬ್ದುಲ್ಲಾ ಮತ್ತು ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಸರಕಾರದ ಉಪಕ್ರಮವನ್ನು ನಾನು ಬೆಂಬಲಿಸುತ್ತೇನೆ. ಈ ಪ್ರಕ್ರಿಯೆ ಯಶಸ್ವಿ ಆಗಬೇಕೆಂಬುದು ನನ್ನ ಆಸೆ” ಎಂದು ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಯುದ್ಧ ಪೀಡಿತ ದೇಶದಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪಲಾಯನ ಮಾಡಿದ ನಂತರ ಮೊದಲ ಬಾರಿಗೆ ಅವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನ ತೊರೆದ ನಂತರ , ಭಾನುವಾರ ಫೇಸ್‌ಬುಕ್‌ನಲ್ಲಿ ನೀಡಿದ್ದ ಮೊದಲ ಪ್ರತಿಕ್ರಿಯೆಯಲ್ಲಿ, ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸಲು ಬಯಸಿದ್ದ “ಸಶಸ್ತ್ರ ತಾಲಿಬಾನಿಗಳು” ಮತ್ತು “ತಾನು 20 ವರ್ಷಗಳಿಂದ ತನ್ನ ಬದುಕನ್ನು ಮೀಸಲಿಟ್ಟಿದ್ದ ಪ್ರೀತಿಪಾತ್ರ ದೇಶವನ್ನು ತೊರೆಯುವುದರ” ನಡುವೆ “ಕಠಿಣ ಆಯ್ಕೆ” ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚಿನ ದೇಶವಾಸಿಗಳು ಹುತಾತ್ಮರಾದರೆ ಮತ್ತು ವಿನಾಶ ಹಾಗೂ ಕಾಬೂಲ್ ನಗರದ ವಿನಾಶವನ್ನು ಎದುರಿಸಿದರೆ, ಅದರ ಫಲಿತಾಂಶವಾಗಿ 6 ಮಿಲಿಯನ್ ಜನಸಂಖ್ಯೆ ಇರುವ ನಗರದಲ್ಲಿ ದೊಡ್ಡ ಮಾನವ ದುರಂತ ನಡೆಯುತ್ತಿತ್ತು. ತಾಲಿಬಾನಿಗಳು ನನ್ನನ್ನು ತೆಗೆದು ಹಾಕಲು ಇದನ್ನು ಮಾಡಿದ್ದಾರೆ, ಇಡೀ ಕಾಬೂಲ್ ಹಾಗೂ ಕಾಬೂಲಿನ ಜನರ ಮೇಲೆ ಆಕ್ರಮಣ ಮಾಡಲು ಬಂದಿದ್ದಾರೆ. ರಕ್ತದ ಪ್ರವಾಹ ಹರಿಯುವುದನ್ನು ತಡೆಯಲು, ನಾನು ಅಲ್ಲಿಂದ ಹೊರ ಬರುವುದೇ ಉತ್ತಮ ಎಂದು ಭಾವಿಸಿದೆ” ಎಂದು ಹೇಳಿದ್ದಾರೆ.
ಘನಿ ಮತ್ತು ಕುಟುಂಬವನ್ನು ಮಾನವೀಯ ಕಾರಣಕ್ಕಾಗಿ ಸ್ವೀಕರಿಸಿದ್ದೇವೆ ಎಂದು ಬುಧವಾರ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿತ್ತು. ಅಲ್ಲಿನ ವಿದೇಶಾಂಗ ಸಚಿವಾಲಯ ಒಂದು ವಾಕ್ಯದ ಪ್ರಕಟಣೆಯಲ್ಲಿ ಇದನ್ನು ತಿಳಿಸಿತ್ತು.
ಸ್ವಯಂ ಘೋಷಿತ ‘ಉಸ್ತುವಾರಿ ಅಧ್ಯಕ್ಷ’
ಈ ಮಧ್ಯೆ, ಅಪಘಾನಿಸ್ತಾನದ ತಿರಸ್ಕರಿತ ಮಾಜಿ ಉಪಾಧ್ಯಕ್ಷ ಅಮ್‍ರುಲ್ಲಾ ಸಲೇಹ್, ಸ್ವಯಂ ಘೋಷಿತ ‘ಉಸ್ತುವಾರಿ ಅಧ್ಯಕ್ಷ’ರಾಗಿದ್ದು, ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದಲ್ಲದೆ, ತಾನು ಅವರಿಗೆ ಶರಣಾಗುವುದಿಲ್ಲ ಅಥವಾ ಪಲಾಯನ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ.
“ನನಗೆ ಓಗೊಟ್ಟಿದ್ದ ಲಕ್ಷಾಂತರ ಜನರನ್ನು ನಿರಾಶೆಗೊಳಿಸುವುದಿಲ್ಲ. ತಾಲಿಬಾನಿ ಜೊತೆ ಒಂದೇ ಸೂರಿನಡಿ ಯಾವತ್ತೂ ಇರಲಾರೆ. ಯಾವತ್ತೂ ಇಲ್ಲ” ಎಂದು ಭೂಗತರಾಗುವ ಮೊದಲು, ಟ್ವಿಟ್ಟರ್‌ನಲ್ಲಿ ಇಂಗ್ಲೀಷ್‍ನಲ್ಲಿ ಬರೆದುಕೊಂಡಿದ್ದಾರೆ.
ಒಂದು ದಿನದ ನಂತರ , ಪಂಜ್‍ಶೀರ್‌ನಲ್ಲಿ , ಮಾಜಿ ಉಪರಾಷ್ಟ್ರಪತಿ, ತಮ್ಮ ಮಾಜಿ ಗುರುವಿನ ಮಗ ಹಾಗೂ ತಾಲಿಬಾನ್ ವಿರೋಧಿ ಹೋರಾಟಗಾರ ಅಹಮದ್ ಶಾ ಮಸೂದ್ ಅವರೊಂದಿಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದ್ದವು.
ಪಂಜಶೀರ್‍ನಲ್ಲಿ ಹೋರಾಟಗಾರರು ಮರು ಸೇರುವ ಮೂಲಕ, ಸಲೇಹ್ ಹಾಗೂ ಸೇನಾ ಪಡೆ ನಾಯಕತ್ವ ಹೊಂದಿರುವ ಮಸೂದ್ ಪುತ್ರ ಜೊತೆಗೂಡಿ ತಾಲಿಬಾನ್ ಮೇಲೆ ವಿಜಯ ಪಡೆಯಲು ಗೊರಿಲ್ಲಾ ಚಳುವಳಿ ನಡೆಸುವುದರಲ್ಲಿದ್ದಾರೆ ಎಂಬಂತೆ ಕಂಡು ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ