ನೊಬೆಲ್ ಪ್ರಶಸ್ತಿ (Nobel Award) ವಿಜೇತೆ, ಭ್ರಷ್ಟಾಚಾರ ಪ್ರಕರಣದಲ್ಲಿ (Corruption Case) ಉಚ್ಚಾಟಿತಗೊಂಡಿರುವ ನಾಗರಿಕ ನಾಯಕಿ (Former Democratically Elected Leader) ಆಂಗ್ ಸಾನ್ ಸೂಕಿ (Aung San Suu Kyi ) ಅವರಿಗೆ ಮಯನ್ಮಾರ್ ಮಿಲಿಟರಿ ನ್ಯಾಯಾಲಯವು (Myanmar military court) ಇನ್ನೂ ಏಳು ವರ್ಷಗಳ ಜೈಲು (Jail) ಶಿಕ್ಷೆಯನ್ನು ವಿಧಿಸಿದ್ದು ಒಟ್ಟಾರೆ 33 ವರ್ಷಗಳ ಸೆರೆಮನೆ ವಾಸವನ್ನು ಆಂಗ್ ಸಾನ್ ಸೂಕಿಗೆ ವಿಧಿಸಲಾಗಿದೆ.
ಗೃಹಬಂಧನದಲ್ಲಿದ್ದ ಮಾಜಿ ನಾಯಕಿ
ಫೆಬ್ರವರಿ 2021 ರ ದಂಗೆಯಲ್ಲಿ ಸೇನೆಯು ಆಂಗ್ ಸಾನ್ ಸರ್ಕಾರವನ್ನು ಪದಚ್ಯುತುಗೊಳಿಸಿದ ನಂತರ ದೇಶದ ಮಾಜಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿದ್ದ ನಾಯಕಿ ಗೃಹಬಂಧನದಲ್ಲಿದ್ದರು.
ಅಂದಿನಿಂದ ಅಂಗ್ ಸಾನ್ 19 ಆರೋಪಗಳಿಗಾಗಿ 18 ವಿಚಾರಣೆಗಳನ್ನು ಎದುರಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕಳೆದ ವಾರ ಅವರ ಬಿಡುಗಡೆಗೆ ಕರೆ ನೀಡಿತ್ತು.
ಕೊನೆಯ ಐದು ಆರೋಪಗಳನ್ನು ಆಧರಿಸಿ ಶಿಕ್ಷೆ ವಿಧಿಸಲಾಗಿದೆ
ಶುಕ್ರವಾರ ಆಂಗ್ ಸಾನ್ ಅವರ ಕೊನೆಯ ಐದು ಆರೋಪಗಳನ್ನು ಆಧರಿಸಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ಸಚಿವರಿಗೆ ಹೆಲಿಕಾಪ್ಟರ್ ಬಾಡಿಗೆ ನೀಡುವ ಸಮಯದಲ್ಲಿ ಆಕೆ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯವು ಅವರನ್ನು ಭ್ರಷ್ಟಾಚಾರದ ತಪ್ಪಿತಸ್ಥೆ ಎಂದು ಘೋಷಿಸಿತು.
14 ವಿಭಿನ್ನ ಅಪರಾಧಗಳಿಗೆ ಶಿಕ್ಷೆ
ಕೋವಿಡ್ ಸಾರ್ವಜನಿಕ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವುದು, ವಾಕಿ-ಟಾಕಿಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘನೆ ಸೇರಿದಂತೆ 14 ವಿಭಿನ್ನ ಅಪರಾಧಗಳಿಗೆ ಆಂಗ್ ಸಾನ್ ಈಗಾಗಲೇ ಶಿಕ್ಷೆಗೊಳಗಾಗಿದ್ದಾರೆ.
ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಪ್ರವೇಶ ನಿಷೇಧ
ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಅವರನ್ನು ಸಂಧಿಸಲು ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಅವರ ವಕೀಲರು ಪತ್ರಕರ್ತರೊಂದಿಗೆ ಮಾತನಾಡುವುದನ್ನು ನಿಷೇಧಿಸಲಾಗಿದೆ.
ತಮ್ಮ ಮೇಲೆ ಹೊರಿಸಿರುವ ಆರೋಪಗಳನ್ನು ಆಂಗ್ ಸಾನ್ ನಿರಾಕರಿಸಿದ್ದಾರೆ. 77 ರ ಹರೆಯದ ಅಂಗ್ ಸಾನ್, ರಾಜಧಾನಿ ನೇ ಪೈ ತಾವ್ನಲ್ಲಿನ ಗೃಹ ಬಂಧನದಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ.
ಅಂಗ್ ಸಾನ್ ಪಕ್ಷದ ಕಾರ್ಯಕರ್ತರ ಬಂಧನ
ಆಂಗ್ ಸಾನ್ ಅಧಿಕಾರವನ್ನು ಮುಟ್ಟುಗೋಲು ಹಾಕಿದಾಗಿನಿಂದ ಆಕೆ ಹಾಗೂ ಆಕೆಯ ಪಕ್ಷದ 16,600 ಕ್ಕಿಂತ ಹೆಚ್ಚಿನ ಜನರನ್ನು ಜುಂಟಾದಿಂದ (ಬಲವಂತವಾಗಿ ಆಡಳಿತಾಧಿಕಾರವನ್ನು ಪಡೆದುಕೊಳ್ಳುವ ಸೈನ್ಯ ಅಥವಾ ರಾಜಕೀಯ ಗುಂಪನ್ನು ಜುಂಟಾ ಎನ್ನಲಾಗುತ್ತದೆ) ಬಂಧಿಸಲಾಗಿದ್ದು, 13,000 ಜನರು ಇನ್ನೂ ಜೈಲಿನಲ್ಲಿ ಉಳಿದಿದ್ದಾರೆ ಎಂದು ರಾಜಕೀಯ ಖೈದಿಗಳ ಸಹಾಯ ಸಂಘ ತಿಳಿಸಿದೆ.
ಕಳೆದ ವಾರ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಮಯನ್ಮಾರ್ನಲ್ಲಿ ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಕರೆ ನೀಡಿತು.
ಚೀನಾ ಮತ್ತು ರಷ್ಯಾ ಮತದಾನದಿಂದ ದೂರ ಉಳಿದವು ಮತ್ತು ನಿರ್ಣಯದ ಪದಗಳಿಗೆ ತಿದ್ದುಪಡಿಗಳನ್ನು ಅನುಸರಿಸಿ ತಮ್ಮ ನಿರಾಕರಣೆಯ ಅಧಿಕಾರವನ್ನು ಈ ದೇಶಗಳು ಬಳಸಲಿಲ್ಲ.
ರಾಜಕೀಯ ಪ್ರಕ್ಷುಬ್ಧತೆ
ನವೆಂಬರ್ 2020 ರ ಚುನಾವಣೆಯ ಸಮಯದಲ್ಲಿ ಹೆಚ್ಚಿನ ಮತದಾರರ ವಂಚನೆಯ ಆರೋಪವನ್ನು ಮಿಲಿಟರಿ ಆಕೆಯ ಮೇಲೆ ಹೊರಿಸಿದೆ, ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷವು ಚುನಾವಣೆಯಲ್ಲಿ ಗೆದ್ದಿದ್ದು, ಅಂತರರಾಷ್ಟ್ರೀಯ ವೀಕ್ಷಕರು ಸಮೀಕ್ಷೆಯು ಹೆಚ್ಚಾಗಿ ಮುಕ್ತ ಮತ್ತು ನ್ಯಾಯಯುತವಾಗಿದೆ ಎಂದು ತಿಳಿಸಿದ್ದಾರೆ.
ಇದಾದ ನಂತರ ಜುಂಟಾ ಫಲಿತಾಂಶವನ್ನು ಮಿಲಿಟರಿ ರದ್ದುಗೊಳಿಸಿದ್ದು 11 ದಶಲಕ್ಷಕ್ಕೂ ಹೆಚ್ಚು ಮತದಾರರ ವಂಚನೆಯ ನಿದರ್ಶನಗಳನ್ನು ಬಹಿರಂಗಪಡಿಸಿರುವುದಾಗಿ ತಿಳಿಸಿದೆ.
ಮಿಲಿಟರಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮಯನ್ಮಾರ್ ಅನ್ನು ಪ್ರಕ್ಷುಬ್ಧಗೊಳುವಂತೆ ಮಾಡಿತು, ಆಗ್ನೇಯ ಏಷ್ಯಾದ ಪ್ರಜಾಫ್ರಭುತ್ವವನ್ನು ಕೊನೆಗೊಳಿಸಿತು ಹಾಗೂ ಭಾರೀ ಪ್ರತಿಭಟನೆಗಳನ್ನು ಹುಟ್ಟುಹಾಕಿತು.
ಹಳ್ಳಿಗಳನ್ನು ಧ್ವಂಸಗೊಳಿಸುವುದು, ಸಾಮೂಹಿಕ ಕಾನೂನುಬಾಹಿರ ಹತ್ಯೆಗಳು ಮತ್ತು ನಾಗರಿಕರ ಮೇಲೆ ವಾಯುದಾಳಿಗಳು ಒಳಗೊಂಡಿವೆ ಎಂದು ನಾಗರಿಕ ಹಕ್ಕುಗಳ ಗುಂಪುಗಳು ತಿಳಿಸಿದೆ.
ಇದನ್ನೂ ಓದಿ: Aung San Suu Kyi: ಅಂಗ್ ಸಾನ್ ಸೂಕಿಗೆ 6 ವರ್ಷ ಜೈಲು; ಮಯನ್ಮಾರ್ನಲ್ಲಿ ಏನಾಗ್ತಿದೆ?
ಜುಂಟಾ, ಕಾನೂನು ಬಾಹಿರ ಹತ್ಯೆಗಳು ಮತ್ತು ಹಳ್ಳಿಗಳ ಮೇಲೆ ವಾಯುದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಇದುವರೆಗೆ ಭಿನ್ನಾಭಿಪ್ರಾಯದ ಹೆಸರಿನಲ್ಲಿ ಸೇನೆಯ ದಾಳಿಯಲ್ಲಿ 2,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿಯ ಪ್ರಕಾರ, ದಂಗೆಯ ನಂತರ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ