Assembly Election2021: ಚುನಾವಣೆಯಲ್ಲಿ ADMK ಧೂಳೀಪಟವಾಗಲಿದ್ದು, DMK 200ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ; ಸ್ಟಾಲಿನ್ ಭರವಸೆ

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನ ಇದರಿಂದ ಬೇಸತ್ತಿದ್ದಾರೆ. ಹೀಗಾಗಿ ದ್ರಾವಿಡ ನಾಡಿನಲ್ಲಿ ಮತ್ತೊಮ್ಮೆ ದೊಡ್ಡ ಅಲೆ ಉಂಟಾಗಲಿದ್ದು, ಈ ಅಲೆಗೆ ಎಐಎಡಿಎಂಕೆ ಕೊಚ್ಚಿ ಹೋಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಎಂ.ಕೆ. ಸ್ಟಾಲಿನ್.

ಎಂ.ಕೆ. ಸ್ಟಾಲಿನ್.

 • Share this:
  ಚೆನ್ನೈ (ಮಾರ್ಚ್​ 27); ಈ ಭಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಎಡಿಎಂಕೆ ಧೂಳೀಪಟವಾಗಲಿದ್ದು, ಡಿಎಂಕೆ ಪಕ್ಷ 200ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಗಳಿಸಿ ಅಧಿಕಾರದ ಗದ್ದುಗೆಗೆ ಏರಲಿದೆ. 10 ವರ್ಷಗಳ ನಂತರ ಮತ್ತೆ ಡಿಎಂಕೆ ಅಧಿಕಾರಕ್ಕೆ ಮರಳಲಿದೆ ಎಂದು ಡಿಎಂಕೆ ಪಕ್ಷದ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಎಂ.ಕೆ. ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ. ಸಿಎನ್‌ಎನ್-ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಕುರಿತು ಮಾತನಾಡಿರುವ ಸ್ಟಾಲಿನ್, "ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನ ಇದರಿಂದ ಬೇಸತ್ತಿದ್ದಾರೆ. ಹೀಗಾಗಿ ದ್ರಾವಿಡ ನಾಡಿನಲ್ಲಿ ಮತ್ತೊಮ್ಮೆ ದೊಡ್ಡ ಅಲೆ ಉಂಟಾಗಲಿದ್ದು, ಈ ಅಲೆಗೆ ಎಐಎಡಿಎಂಕೆ ಕೊಚ್ಚಿ ಹೋಗಲಿದೆ. ಡಿಎಂಕೆ ಕನಿಷ್ಟ 20ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ" ಎಂದು ಅವರು ತಿಳಿಸಿದ್ದಾರೆ.

  "ಕಲೈಜ್ಞರ್​ ಕರುಣಾನಿಧಿ ಮರಣ ಡಿಎಂಕೆ ಪಕ್ಷಕ್ಕೆ ಅತಿ ದೊಡ್ಡ ನಷ್ಟ. ಇದರಿಂದ ಉಂಟಾದ ನಿರ್ವಾತ ಸ್ಥಿತಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ಆದರೆ ನಾವು ಅವರು ಇಲ್ಲದೆ ಕಳೆದ ವರ್ಷದ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೇವೆ. ಉತ್ತಮ ಫಲಿತಾಂಶವನ್ನು ಪಡೆದಿದ್ದೇವೆ.

  ಇದನ್ನೂ ಓದಿ: Assembly Election2021: ಅಸ್ಸಾಂ-ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಆರಂಭ; ಜನ ತಮ್ಮ ಹಕ್ಕು ಚಲಾಯಿಸಲು ಮೋದಿ ಕರೆ

  ನನ್ನ ರಾಜಕೀಯ ಜೀವನದಲ್ಲಿ ಮೊದಲ ದಿನದಿಂದ ನಾನು ಕರುಣಾನಿಧಿ ತರಬೇತಿಯಲ್ಲೇ ನಡೆದಿದ್ದೇನೆ. ಆ ಮಾರ್ಗದರ್ಶನ ಇಂದು ನನಗೆ ಸಹಾಯ ಮಾಡುತ್ತಿದೆ. ಪ್ರಚಾರ ಮಾಡುವುದು ಹೇಗೆ? ಮಿತ್ರರಾಷ್ಟ್ರಗಳೊಂದಿಗೆ ಹೇಗೆ ಸಂಬಂಧವನ್ನು ಇಟ್ಟುಕೊಳ್ಳಬೇಕು? ಒಕ್ಕೂಟವನ್ನು ಹೇಗೆ ಒಟ್ಟಿಗೆ ಇಟ್ಟುಕೊಳ್ಳಬೇಕು? ಜನರೊಂದಿಗೆ ಹೇಗೆ ಮಾತನಾಡಬೇಕು? ಎಂದು ಅವರು ನನಗೆ ಕಲಿಸಿದರು. ಈ ಚುನಾವಣೆಗಳಲ್ಲಿ ಇದು ನನಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ. ದೊಡ್ಡ ಗೆಲುವಿನ ವಿಶ್ವಾಸವಿದೆ" ಎಂದು ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ.

  ತಮಿಳುನಾಡು ವಿಧಾನಸಭೆಯ 232 ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ ಈ ಬಾರಿ ತಮಿಳುನಾಡಿನಲ್ಲಿ ಖಾತೆ ತೆರೆಯುವ ಭರವಸೆಯೊಂದಿಗೆ ಆಢಳಿತರೂಢ ಎಡಿಎಂಕೆ ಪಕ್ಷದ ಜೊತೆಗೆ ಮೈತ್ರಿ ಸಾಧಿಸಿದೆ. ಆದರೆ, ಸಿ-ಓಟರ್​ ಸೇರಿದಂತೆ ಎಲ್ಲಾ ಸಮೀಕ್ಷೆಗಳು ಈಗಾಗಲೇ ಹೊರಬಿದ್ದಿದ್ದು, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸರ್ಕಾರ ರಚನೆ ಮಾಡುವುದು ನಿಶ್ಚಿತ ಎಂದು ನುಡಿದಿವೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಅಧಿನಾಯಕ ಎಂ.ಕೆ. ಸ್ಟಾಲಿನ್ ನಿರಾಳವಾಗಿದ್ದು, ಎಲ್ಲೆಡೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.
  Published by:MAshok Kumar
  First published: