ಮಹಾಮಾರಿ ಕೊರೋನಾಗೆ ವಿಶ್ವದಲ್ಲಿ ಬರೋಬ್ಬರಿ 1.71 ಲಕ್ಷ ಮಂದಿ ಬಲಿ; 25 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ

ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಕೊರೋನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಕೊರೋನಾ ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಏ.15): ಮಾಹಾಮಾರಿ ಕೊರೋನಾ ವೈರಸ್ ದಾಳಿಗೆ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಡೀ ವಿಶ್ವದಲ್ಲಿ 24.80 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 1.71 ಲಕ್ಷ ಮಂದಿ ಅಸುನೀಗಿದ್ದಾರೆ. ಈ ವೈರಸ್​ನಿಂದ ಗುಣಮುಖರಾದವರ ಸಂಖ್ಯೆ 6.46 ಲಕ್ಷ ಮಂದಿ.

  ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಕೊರೋನಾ ವೈರಸ್​ ಬೆಂಬಿಡದೆ ಕಾಡುತ್ತಿದೆ. ಈ ವೈರಸ್​ ಕಾಣಿಸಿಕೊಂಡಾಗ ನಿರ್ಲಕ್ಷ್ಯ ತೋರಿದ ಪರಿಣಾಮ ಅಮೆರಿಕದಲ್ಲಿ ಕೊರೋನಾ ಮಿತಿಮೀರಿ ಬೆಳೆಯುತ್ತಿದೆ. ಈಗಾಗಲೇ 42 ಸಾವಿರ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.  ಸೋಂಕಿತರ ಸಂಖ್ಯೆ 7.92 ಲಕ್ಷ ದಾಟಿದೆ. ಜನ ನಿಬಿಡ ನಗರಗಳಾದ ನ್ಯೂಯಾರ್ಕ್​ ಸೇರಿ ಹಲವು ಕಡೆಗಳಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಹೀಗಾಗಿ ಈ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ.

  ಇದನ್ನೂ ಓದಿ: ಪಾದರಾಯನಪುರ ಘಟನೆ ನಡುವೆ ಮೈಸೂರಿನಲ್ಲಿ ಮಾದರಿಯಾದ ಹಳ್ಳಿಗರು; ಕೊರೋನಾ ಟೆಸ್ಟ್‌ ಮಾಡಿಸಿಕೊಳ್ಳಲು ಊರಿಗೆ ಊರೇ ಮುಂದು

  ಸ್ಪೇನ್​ನಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ತಲುಪಿದೆ. 21 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 1.81 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 24 ಸಾವಿರದ ಗಡಿ ತಲುಪಿದೆ. ಈ ಮೊದಲ ವಾರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು.

  ಫ್ರಾನ್ಸ್​, ಜರ್ಮನಿ, ಇಂಗ್ಲೆಂಡ್​ನಲ್ಲೂ ಪರಿಸ್ಥಿತಿ ಕೈ ಮೀರಿದೆ. ಫ್ರಾನ್ಸ್​ನಲ್ಲಿ 1.5 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 24 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.47 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 4,862 ಜನರು ಮೃತಪಟ್ಟಿದ್ದಾರೆ.
  First published: