HOME » NEWS » National-international » CORONAVIRUS POSES A DIFFERENT PROBLEM FOR UTTAR PRADESH VILLAGE CALLED KORAUNA RH

ಕೊರೋನಾ ವೈರಸ್​ ಬಂದಾಗಿನಿಂದ ಕೊರೌನಾ ಗ್ರಾಮಸ್ಥರನ್ನು ತಪ್ಪಿತಸ್ಥರಂತೆ ನೋಡುತ್ತಿರುವ ಜನರು!

ಕೋವಿಡ್-19 ಪ್ರಪಂಚದಾದ್ಯಂತ ಹರಡಿ ಭಾರತವನ್ನು ತಲುಪಿದಾಗಿನಿಂದ ಉತ್ತರಪ್ರದೇಶದ ಕೊರೌನಾ ಗ್ರಾಮದ ಜನರು ಇತರರಿಂದ ಅನೇಕ ತೊಂದರೆ, ಮೂದಲಿಕೆ ಎದುರಿಸುತ್ತಿದ್ದಾರೆ.

news18-kannada
Updated:March 30, 2020, 2:57 PM IST
ಕೊರೋನಾ ವೈರಸ್​ ಬಂದಾಗಿನಿಂದ ಕೊರೌನಾ ಗ್ರಾಮಸ್ಥರನ್ನು ತಪ್ಪಿತಸ್ಥರಂತೆ ನೋಡುತ್ತಿರುವ ಜನರು!
ಕೊರೌನಾ ಗ್ರಾಮ.
  • Share this:
ಸೀತಾಪುರ, ಉತ್ತರ ಪ್ರದೇಶ: ಕೊರೋನಾ ವೈರಸ್​ಗೆ ಪ್ರಾಸವಾಗಿರುವ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಕೊರೌನಾ ಗ್ರಾಮಸ್ಥರು ಬಹಳ ತೊಂದರೆಗೀಡಾಗಿದ್ದಾರೆ. ಕೋವಿಡ್ -19 ಪ್ರಪಂಚದಾದ್ಯಂತ ಹರಡಿ ಭಾರತವನ್ನು ತಲುಪಿದಾಗಿನಿಂದ ಅವರು ಸಮಾಜದಲ್ಲಿ ತಾರತಮ್ಯ ಎದುರಿಸುತ್ತಿರುವುದಾಗಿ ಕೊರೌನಾ ಗ್ರಾಮದ ನಿವಾಸಿಗಳು ಹೇಳಿಕೊಂಡಿದ್ದಾರೆ.

ಮನೆಗಳಿಂದ ಹೊರಗೆ ಬರಲು ಯಾರೂ ತಯಾರಿಲ್ಲ. ನಮ್ಮ ಹಳ್ಳಿಯಲ್ಲಿ ಜನರು ಬಹಳ ಭಯಭೀತರಾಗಿದ್ದಾರೆ. ನಾವು ಕೊರೌನಾ ಎಂಬ ಗ್ರಾಮದವರು ಎಂದು ಜನರಿಗೆ ಹೇಳಿದಾಗ, ಅದು ಹಳ್ಳಿ ಎಂದು ಅವರಿಗೆ ಅರ್ಥ ಮಾಡಿಕೊಳ್ಳದೆ ನಮ್ಮನ್ನು ತಪ್ಪಿತಸ್ಥರಂತೆ ನೋಡುತ್ತಾರೆ. ಅಲ್ಲದೇ ನಮ್ಮ ಗ್ರಾಮದಲ್ಲಿ ಯಾರೊಬ್ಬರೂ ವೈರಸ್ ಸೋಂಕಿತರಿಲ್ಲ ಎಂದು ಗ್ರಾಮದ ನಿವಾಸಿ ರಾಜನ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

"ಇತರ ಊರಿನ ಜನರು ಸಹ ಜನರು ತುಂಬಾ ಭಯಭೀತರಾಗಿದ್ದಾರೆ, ಅವರು ನಾವು ದೂರವಾಣಿ ಕರೆ ಮಾಡಿದರೆ ಉತ್ತರಿಸುವುದಿಲ್ಲ" ಎಂದು ಅವರು ಹೇಳಿದರು.

ನಾವು ರಸ್ತೆಗಳಲ್ಲಿದ್ದರೆ ಮತ್ತು ನಾವು ಎಲ್ಲಿಗೆ ಹೋಗುತ್ತೇವೆ ಎಂದು ಪೊಲೀಸರು ಕೇಳುತ್ತಾರೆ, ನಮ್ಮ ಗ್ರಾಮದ ಹೆಸರನ್ನು ಹೇಳಿದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ, ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮ ಹಳ್ಳಿಗೆ ಅಂತಹ ಹೆಸರು ಇದ್ದರೆ ನಾವು ಏನು ಮಾಡಲು ಸಾಧ್ಯ? ಎಂದು ಮತ್ತೊಬ್ಬ ಸ್ಥಳೀಯ ಸುನೀಲ್ ಹೇಳುತ್ತಾರೆ.

"ನಾವು ಜನರಿಗೆ ಕರೆ ಮಾಡಿ, ನಾವು ಕೊರೌನಾ ಗ್ರಾಮದಿಂದ ಕರೆ ಮಾಡುತ್ತಿದ್ದೇವೆ ಎಂದು ಅವರಿಗೆ ಹೇಳಿದರೆ ಯಾರೋ ತಮ್ಮ ಜೊತೆ ತಮಾಷೆ ಮಾಡುತ್ತಿದ್ದಾರೆ ಭಾವಿಸಿ ಅವರು ತಕ್ಷಣ ನಮ್ಮ ಕರೆಯನ್ನು ಕಟ್ ಮಾಡುತ್ತಾರೆ " ಎಂದು ನಿವಾಸಿ ರಾಮ್ ಜಿ ದೀಕ್ಷಿತ್ ಹೇಳಿದ್ದಾರೆ.

ಇದನ್ನು ಓದಿ: Lockdown In India: ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಯಲಿದೆ ಅನ್ನೋದು ಸುಳ್ಳು; ಕೇಂದ್ರದ ಸ್ಪಷ್ಟನೆ

ಕೊರೋನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಮೂರು ವಾರಗಳ ಲಾಕ್ ಡೌನ್ ಘೋಷಿಸಲಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಭಾರತದಲ್ಲಿ 1,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಾಗಿದೆ.ವರದಿ: ಸಂಧ್ಯಾ ಎಂ
First published: March 30, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories