ಕೊರೋನಾ ಅಟ್ಟಹಾಸ: ಆರ್ಥಿಕ ಹೊಡೆತದಿಂದ ಕಂಗೆಟ್ಟ ಜರ್ಮನಿ; ಹಣಕಾಸು ಸಚಿವ ಆತ್ಮಹತ್ಯೆ

Coronavirus Latest News: ಹೆಸ್ಸಿ ರಾಜ್ಯದಲ್ಲಿ ಆರ್ಥಿಕ ಸಚಿವರಾಗಿದ್ದ 54 ವರ್ಷದ ಶೇಫರ್ ಕೊರೋನಾ ವೈರಸ್​ನಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟಿದ್ದರು.

Sushma Chakre | news18-kannada
Updated:March 30, 2020, 9:20 AM IST
ಕೊರೋನಾ ಅಟ್ಟಹಾಸ: ಆರ್ಥಿಕ ಹೊಡೆತದಿಂದ ಕಂಗೆಟ್ಟ ಜರ್ಮನಿ; ಹಣಕಾಸು ಸಚಿವ ಆತ್ಮಹತ್ಯೆ
ಜರ್ಮನಿಯ ಹಣಕಾಸು ಸಚಿವ ಶೇಫರ್
  • Share this:
ಚೀನಾದ ಬಳಿಕ ಇಟಲಿ, ಜರ್ಮನಿ, ಅಮೆರಿಕ, ಇರಾನ್​ನಲ್ಲಿ ಕೊರೋನಾ ವೈರಸ್​ ಅಬ್ಬರ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಸಾಯುವವರ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟ ಅಲ್ಲಿನ ಹಣಕಾಸು ಸಚಿವ ಥಾಮಸ್ ಶೇಫರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಸ್ಸಿಯನ್ನು ಜರ್ಮನಿಯ ಆರ್ಥಿಕ ರಾಜಧಾನಿ ಎಂದೇ ಕರೆಯಲಾಗುತ್ತದೆ. ಈ ಹೆಸ್ಸಿ ರಾಜ್ಯದಲ್ಲಿ ಆರ್ಥಿಕ ಸಚಿವರಾಗಿದ್ದ 54 ವರ್ಷದ ಶೇಫರ್ ಕೊರೋನಾ ವೈರಸ್​ನಿಂದ ಉಂಟಾಗಿರುವ ಆರ್ಥಿಕ ಹೊಡೆತದಿಂದ ಕಂಗೆಟ್ಟಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಅವರು ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತದೇಹ ಶನಿವಾರ ಪತ್ತೆಯಾಗಿದೆ ಎಂದು ವೈಸ್ ಬಾಡೆನ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಕೊರೋನಾಗೆ 1 ಬಲಿ, ಮದ್ಯ ಸಿಗದೆ 9 ಜನ ಆತ್ಮಹತ್ಯೆ!; ಇದು ದೇವರನಾಡು ಕೇರಳದ ದುರಂತ

10 ವರ್ಷದಿಂದ ಹೆಸ್ಸಿ ರಾಜ್ಯದಲ್ಲಿ ಹಣಕಾಸು ಸಚಿವರಾಗಿರುವ ಶೇಫರ್ ಸಾವಿಗೆ ಹೆಸ್ಸಿಯ ಸಿಎಂ ವಾಲ್ಟರ್ ಬಾಫಿಯರ್ ಸಂತಾಪ ಸೂಚಿಸಿದ್ದಾರೆ. ನಮಗೆ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ಅವರು ರಾಜ್ಯದ ಜನರ ಬಗ್ಗೆ ತೀವ್ರವಾಗಿ ಯೋಚಿಸುತ್ತಿದ್ದರು, ಕಾಳಜಿ ಹೊಂದಿದ್ದರು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಒಂದೇ ದಿನ 16 ಸಾವಿರ ಕೊರೋನಾ ಪ್ರಕರಣ; ವಿಶ್ವಾದ್ಯಂತ 33 ಸಾವಿರ ಸಾವು

 
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading