HOME » NEWS » National-international » CORONAVIRUS LIVE UPDATES INDIA CASES CROSS 26000 MARK DEATH TOLL RISES TO 824 RMD

Coronavirus in India: ಭಾರತದಲ್ಲಿ 26 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; 824 ಸಾವು

ಒಂದು ತಿಂಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿದ ಹೊರತಾಗಿಯೂ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

news18-kannada
Updated:April 26, 2020, 9:18 AM IST
Coronavirus in India: ಭಾರತದಲ್ಲಿ 26 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; 824 ಸಾವು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ.26): ಕಟ್ಟುನಿಟ್ಟಿನ ಲಾಕ್​ಡೌನ್​ ನಡುವೆಯೂ ಕೊರೋನಾ ವೈರಸ್​ ಕಾಡ್ಗಿಚ್ಚಿನಂತೆ ಹಬ್ಬುತ್ತಲೆ ಇದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 26 ಸಾವಿರಕ್ಕೆ ಎರಿಕೆ ಆಗಿದೆ.

ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದೇಶದಲ್ಲಿ 26 ಸಾವಿರ ಕೊರೋನಾ ವೈರಸ್​ ಪ್ರಕರಣಗಳಿ ದೃಢಪಟ್ಟಿವೆ. ಈ ಪೈಕಿ 19,868 ಆಕ್ಟಿವ್​ ಕೇಸ್​ಗಳಿವೆ. 824 ಜನರು ಮೃತಪಟ್ಟಿದ್ದಾರೆ. 5,803 ಜನರು ಕೊರೋನಾ ಮುಕ್ತರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಂದು ತಿಂಗಳ ಕಾಲ ದೇಶವನ್ನೇ ಲಾಕ್​ಡೌನ್​ ಮಾಡಿದ ಹೊರತಾಗಿಯೂ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ವಿಶ್ವದ 30 ಲಕ್ಷ ಕೊರೋನಾ ಸೋಂಕಿತರ ಪೈಕಿ ಅಮೆರಿಕದಲ್ಲೇ ಇದ್ದಾರೆ 10 ಲಕ್ಷ ಮಂದಿ; ಮಿತಿ ಮೀರುತ್ತಿದೆ ಸಾವಿನ ಸಂಖ್ಯೆ

ವಿಶ್ವದಲ್ಲೂ  ಕೊರೋನಾ ವೈರಸ್​  ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರವಾಗುತ್ತಿಲ್ಲ. ವಿಶ್ವದಲ್ಲಿ ಈ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ ಎರಡು ಲಕ್ಷ ದಾಟಿದರೆ, ಸೋಂಕಿತರ ಸಂಖ್ಯೆ 30 ಲಕ್ಷದ ಗಡಿ ಸಮೀಪಿಸಿದೆ.

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೋನಾ ಸೋಂಕು ಮಿತಿಮೀರಿ ಹಬ್ಬುತ್ತಿದೆ. ಪ್ರತಿನಿತ್ಯ ಅಮೆರಿಕದಲ್ಲಿ 1.5-2 ಸಾವಿರ ಮಂದಿ ಮೃತಪಡುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಸಾವಿನ ಸಂಖ್ಯೆ 54 ಸಾವಿರಕ್ಕೆ ಏರಿಕೆ ಆಗಿದೆ. 9.6 ಲಕ್ಷ ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.
First published: April 26, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories