10 ಸಾವಿಗೆ ಕಾರಣವಾಯ್ತು ದೆಹಲಿ ಧಾರ್ಮಿಕ ಸಭೆ; ಮತ್ತೆ 24 ಜನರಿಗೆ ಕೊರೋನಾ ಸೋಂಕು ದೃಢ, 850 ಜನ ಆಸ್ಪತ್ರೆಗೆ ಶಿಫ್ಟ್​

ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ 6 ಜನರು ಸೇರಿದಂತೆ ಒಟ್ಟು 10 ಸಾವನ್ನಪ್ಪಿದ್ದಾರೆ. 850ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾ ಭೀತಿಯಿಂದ ನಿಜಾಮುದ್ದೀನ್​ನಿಂದ 1,034 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

ನಿಜಾಮುದ್ದೀನ್​ನಿಂದ ಬೇರೆಡೆ ತೆರಳುತ್ತಿರುವ ಜನರು

ನಿಜಾಮುದ್ದೀನ್​ನಿಂದ ಬೇರೆಡೆ ತೆರಳುತ್ತಿರುವ ಜನರು

 • Share this:
  ನವದೆಹಲಿ (ಮಾ. 31): 15 ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಿದ್ದ 850ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಅವರಲ್ಲಿ 24 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಕೊರೋನಾ ಭೀತಿಯಿಂದ ನಿಜಾಮುದ್ದೀನ್​ನಿಂದ 1,034 ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.

  ಮಾ. 13ರಿಂದ 15ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ 10 ಜನ ಈಗಾಗಲೇ ಸಾವನ್ನಪ್ಪಿದ್ದಾರೆ.ಈ ಹಿನ್ನೆಲೆಯಲ್ಲಿ ಈ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ ಮೌಲಾನಾ ವಿರುದ್ಧ ದೆಹಲಿ ಸರ್ಕಾರ ಎಫ್​ಐಆರ್​ ದಾಖಲಿಸಿದೆ. ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ನಿಜಾಮುದ್ದೀನ್​ ಸಭೆಗೆ ಆಗಮಿಸಿದ್ದವರನ್ನು ಸೇರಿಸಿ, ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 1 ಆಸ್ಪತ್ರೆಯ 24 ಜನರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಇನ್ನೂ ಎರಡು ಆಸ್ಪತ್ರೆಗಳ ಇಂದಿನ ವರದಿ ಹೊರಬೀಳಬೇಕಾಗಿದೆ.

  ಇದನ್ನೂ ಓದಿ: ಸಾವಿನ ಭೀತಿ ಹೆಚ್ಚಿಸಿದ ದೆಹಲಿ ಧಾರ್ಮಿಕ ಸಭೆ; ಕಾರ್ಯಕ್ರಮದಲ್ಲಿದ್ದ 10 ಜನ ಕೊರೋನಾಗೆ ಬಲಿ, 300ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

  15 ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ನ ಮಸೀದಿಯಲ್ಲಿ ನಡೆದ ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಕೂಡ ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ 6 ಜನರು ಸೇರಿದಂತೆ ಒಟ್ಟು 10 ಸಾವನ್ನಪ್ಪಿದ್ದಾರೆ. 850ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 2,500ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರದಿಂದ 800ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ. ಸಭೆ ವೇಳೆ ಇದ್ದವರು, ಅವರ ಸಂಪರ್ಕದಲ್ಲಿದ್ದವರ ತಪಾಸಣೆ ನಡೆಸಲಾಗಿದೆ.

  ಈ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದವರಲ್ಲಿ 6 ಮಂದಿ ತೆಲಂಗಾಣದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಆರೋಗ್ಯಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಬೇಕೆಂದು ತೆಲಂಗಾಣ ಸರ್ಕಾರ ಮನವಿ ಮಾಡಿದೆ. ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಲಿದೆ.

  ಇದನ್ನೂ ಓದಿ: ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ಪತ್ತೆ; ಮೌಲಾನಾ ವಿರುದ್ಧ ಕೇಸ್ ದಾಖಲು
  First published: