ಜಗತ್ತಿನಾದ್ಯಂತ ಮುಂದುವರೆದ ಕೊರೋನಾ ಅಟ್ಟಹಾಸ; 24 ಸಾವಿರ ಬಲಿ, ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆ

ಈ ಮಧ್ಯೆಯೇ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಕೊಳ್ಳಲಾಗಿದೆ.

news18-kannada
Updated:March 27, 2020, 8:00 AM IST
ಜಗತ್ತಿನಾದ್ಯಂತ ಮುಂದುವರೆದ ಕೊರೋನಾ ಅಟ್ಟಹಾಸ; 24 ಸಾವಿರ ಬಲಿ, ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.27): ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸಕ್ಕೆ ಇಲ್ಲಿಯವರೆಗೂ 23 ಸಾವಿರ ಮಂದಿ ಬಲಿಯಾಗಿದ್ದಾರೆ. ಜತ್ತಿನ ಒಟ್ಟು 182 ದೇಶಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದಂತೆಯೇ ಇಡೀ ವಿಶ್ವದ ಬಹುತೇಕ ದೇಶಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ ಸುಮಾರು 260 ಕೋಟಿ ಜನ ಈಗ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ 42 ದೇಶಗಳು ಲಾಕ್​​ಡೌನ್ ಮಾಡಲಾಗಿದೆ. ಇದೀಗ ಈ ಸಾಲಿಗೆ ಭಾರತ ಮತ್ತು ನ್ಯೂಜಿಲೆಡ್ ಸೇರ್ಪಡೆಯಾಗಿವೆ. ಎಲ್ಲೆಡೆಯೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಕೋವಿಡ್-19: ದೇಶದಲ್ಲಿ ಸೋಂಕಿತರ ಸಂಖ್ಯೆ 694, 16 ಮಂದಿ ಸಾವು

ಇನ್ನು, ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​​ ಸೋಂಕು ಪ್ರಕರಣಗಳ ಸಂಖ್ಯೆ ಏರಿಯಾಗುತ್ತಲೇ ಇದೆ. ಇಲ್ಲಿಯವರೆಗೆ ಇಡೀ ದೇಶದಲ್ಲೇ ಒಟ್ಟು 694 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ 13ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕಳೆದ ಕೇವಲ 24 ಗಂಟೆಯಲ್ಲಿ 43 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ಹರಿಯಾಣದಲ್ಲಿ- 18, ಫರೀದಾಬಾದ್‌ನಲ್ಲಿ -2, ಗುರುಗ್ರಾಮ -10 , ಪಲ್ವಾಲ್-1, ಪಾಣಿಪತ್-3, ಪಂಚಕುಲಾ-1 , ಸೋನೆಪಥ್- 1, ತೆಲಂಗಾಣ ಮೂರು ಹೀಗೆ ವಿವಿಧ ರಾಜ್ಯಗಳಲ್ಲಿ ಮತ್ತಲವು ಪ್ರಕರಣಗಳು ವರದಿಯಾಗಿದೆ.

ಈ ಮಧ್ಯೆಯೇ ಜಗತ್ತಿನಾದ್ಯಂತ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಕೊಳ್ಳಲಾಗಿದೆ.

ಇನ್ನು, ರಾಜ್ಯದಲ್ಲಿ ಇಲ್ಲಿವರೆಗೂ 55 ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ಮಾತ್ರ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾದರ ಬಗ್ಗೆ ವರದಿಯಾಗಿವೆ. ಜತೆಗೆ ಈವರೆಗೂ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ