• Home
  • »
  • News
  • »
  • national-international
  • »
  • Coronavirus: ಕೊರೋನಾ ವೈರಸ್ ನಮ್ಮ ಮೆದುಳು ಸೇರಿಕೊಂಡ್ರೆ 8 ತಿಂಗಳು ಬದುಕುತ್ತೆ: ಶಾಕಿಂಗ್ ವರದಿ

Coronavirus: ಕೊರೋನಾ ವೈರಸ್ ನಮ್ಮ ಮೆದುಳು ಸೇರಿಕೊಂಡ್ರೆ 8 ತಿಂಗಳು ಬದುಕುತ್ತೆ: ಶಾಕಿಂಗ್ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಸ್ಕ್, ಸಾಮಾಜಿಕ ಅಂತರ ಹಾಗೂ ವ್ಯಾಕ್ಸಿನ್‌ಗಳೆಂಬ ಮೂರು ಮಂತ್ರದಿಂದಲೇ ಕೋವಿಡ್ ಅನ್ನು ಮಟ್ಟಹಾಕಬಹುದೆಂಬುದು ಭಾರತದ ಅಭಿಪ್ರಾಯವಾಗಿದೆ.

  • Trending Desk
  • Last Updated :
  • New Delhi, India
  • Share this:

ಸಾಂಕ್ರಾಮಿಕ ರೋಗ ಕೋವಿಡ್(COVID) ಅಂತ್ಯಗೊಂಡಿತು ಎಂದು ಭಾವಿಸಿದವರಿಗೆಲ್ಲಾ ಇದೀಗ ಕೋವಿಡ್ ಒಮಿಕ್ರಾನ್(Omicron) ರೂಪಾಂತರದೊಂದಿಗೆ ಪುನರ್ ಆಗಮಿಸಿದೆ. ಚೀನಾ(China), ಅಮೆರಿಕಾ(America) ಮೊದಲಾದ ದೇಶಗಳಲ್ಲಿ ಇದೇ ರೂಪಾಂತರಿ ಅನೇಕ ಸಾವು ನೋವುಗಳಿಗೆ ಕಾರಣವಾಗಿದೆ ಹಾಗೂ ಭಾರತ(India) ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆಯಾಗಿದೆ ಎಂಬ ಆಘಾತಕಾರಿ(Shocking) ಮಾಹಿತಿ ಕೂಡ ದೊರಕಿದೆ.


ಮಾಸ್ಕ್, ಸಾಮಾಜಿಕ ಅಂತರ ಹಾಗೂ ವ್ಯಾಕ್ಸಿನ್‌ಗಳೆಂಬ ಮೂರು ಮಂತ್ರದಿಂದಲೇ ಕೋವಿಡ್ ಅನ್ನು ಮಟ್ಟಹಾಕಬಹುದೆಂಬುದು ಭಾರತದ ಅಭಿಪ್ರಾಯವಾಗಿದೆ. ಹಾಗಾಗಿ ದೇಶದ ಜನತೆಗೆ ಮುನ್ನೆಚ್ಚರಿಕೆಗಳಿಂದ ಇರುವುದಕ್ಕೆ ತಜ್ಞರು ಆದೇಶ ನೀಡಿದ್ದಾರೆ.


ಎಂಟು ತಿಂಗಳ ಕಾಲ ವಾಸವಿರುವ ಕೋವಿಡ್-19


ಇದರ ಬೆನ್ನಲ್ಲೇ ಇದೀಗ ಮಹತ್ವದ ಸುದ್ದಿಯೊಂದು ಹೊರಬಂದಿದ್ದು SAR-CoV-2 ಮೆದುಳಿಗೆ ಪ್ರವೇಶಿಸಿ ದೇಹದಾದ್ಯಂತ ಎಂಟು ತಿಂಗಳ ಕಾಲ ವಾಸವಿರುತ್ತದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಕೋವಿಡ್ – 19 ನಿಂದ ಮೃತಗೊಂಡ 44 ರೋಗಿಗಳ ಅಂಗಾಂಶ ಮಾದರಿಗಳು ಸೇರಿದಂತೆ ಮರಣೋತ್ತರ ಪರೀಕ್ಷೆಯಿಂದ ಈ ಮಾಹಿತಿ ತಿಳಿದುಬಂದಿದ್ದು ಮೃತಗೊಂಡ ರೋಗಿಗಳಿಗೆ ರೋಗನಿರೋಧಕಗಳನ್ನು ನೀಡಿರಲಿಲ್ಲ ಹಾಗೂ ಇವೆರೆಲ್ಲರೂ ಕೋವಿಡ್‌ನಿಂದ ಬಾಧಿತಗೊಂಡು ನಿಧನರಾದರು ಎಂಬ ಅಂಶ ವರದಿಯಾಗಿದೆ.


ಇದನ್ನೂ ಓದಿ: Rahul Gandhi: ರಷ್ಯಾದಂತೆ ಚೀನಾ ಭಾರತದ ಮೇಲೆ ದಾಳಿ ಮಾಡಬಹುದು! ಕಮಲ್ ಹಾಸನ್​ ಇಂಟರ್​ ವ್ಯೂನಲ್ಲಿ ರಾಹುಲ್ ಗಾಂಧಿ ಆತಂಕದ ಮಾತು


38 ರೋಗಿಗಳ ರಕ್ತದ ಪ್ಲಾಸ್ಮಾವು ಕೋವಿಡ್-2 ಪಾಸಿಟಿವ್ ಎಂದು ತಿಳಿದುಬಂದಿದ್ದು, ಮೂರು ರೋಗಿಗಳ ರಕ್ತಪರೀಕ್ಷೆಯು ಋಣಾತ್ಮಕ ಫಲಿತಾಂಶವನ್ನು ನೀಡಿದೆ ಹಾಗೂ ಮೂವರು ರೋಗಿಗಳ ರಕ್ತಪರೀಕ್ಷೆಯು ಲಭ್ಯವಿಲ್ಲ ಎಂಬ ಮಾಹಿತಿ ದೊರಕಿದೆ.


ಮೃತ ಕೋವಿಡ್ ರೋಗಿಗಳಲ್ಲಿ ಜೀವಂತ ವೈರಸ್ ಪತ್ತೆ


ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ನಡೆಸಿದ ಶವಪರೀಕ್ಷೆಗಳ ಮಾದರಿಗಳನ್ನು ಯುಎಸ್‌ನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಮೌಲ್ಯಮಾಪನ ನಡೆಸಿದ್ದು, 11 ರೋಗಿಗಳಲ್ಲಿ ಮೆದುಳು ಒಳಗೊಂಡಂತೆ ನರವೈಜ್ಞಾನಿಕ ವ್ಯವಸ್ಥೆಯ ಸಂಪೂರ್ಣ ನಮೂದನ್ನು ಪರಿಶೀಲನೆಗೊಳಪಡಿಸಿದ್ದಾರೆ ಹಾಗೂ ಈ ಅಧ್ಯಯನ ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಕೋವಿಡ್ ವೈರಸ್ ಹಿರಿಯ ನಾಗರಿಕರಲ್ಲಿ ಪತ್ತೆ


ಈ ಅಧ್ಯಯನದಲ್ಲಿ ಕಂಡುಬಂದ ಮಾಹಿತಿಯ ಪ್ರಕಾರ ಇವರೆಲ್ಲರೂ 62.5 ವರ್ಷ ವಯಸ್ಸಿನವರಾಗಿದ್ದು 30% ದಷ್ಟು ಹೆಚ್ಚಿನವರು ಮಹಿಳೆಯರು ಎಂಬುದು ಬಹಿರಂಗಗೊಂಡಿದೆ. 27 ವ್ಯಕ್ತಿಗಳಲ್ಲಿ ಮೂರು ಅಥವಾ ಹೆಚ್ಚಿನ ಕಾಯಿಲೆಗಳು ಕಂಡುಬರುತ್ತವೆ ಎಂಬುದು ದಾಖಲಾಗಿದ್ದು, ರೋಗಲಕ್ಷಣಗಳ ಅಸ್ತಿತ್ವ ಹಾಗೂ ಮರಣದ ನಡುವಿನ ಸರಾಸರಿ ದಿನಗಳು 18.5 ಎಂಬುದಾಗಿ ಸಂಶೋಧಕರು ಲೆಕ್ಕಹಾಕಿದ್ದಾರೆ.


ದೇಹದ ಬೇರೆ ಬೇರೆ ಅಂಗಗಳಲ್ಲಿ ವೈರಸ್ ವಾಸ


ಈ ಅಧ್ಯಯನ ಮಾತ್ರವಲ್ಲದೆ ಮೃತ ಕೋವಿಡ್ ರೋಗಿಗಳ ಮೂತ್ರಜನಕಾಂಗದ ಗ್ರಂಥಿ, ಕಣ್ಣು, ಮೆದುಳು, ಹೃದಯ, ದುಗ್ಧರಸ ಗ್ರಂಥಿಗಳು ಮತ್ತು ಜೀರ್ಣಾಂಗಗಳಂತಹ ಉಸಿರಾಟದ ವ್ಯವಸ್ಥೆಯ ಒಳಗೆ ಮತ್ತು ಹೊರಗೆ ವಿವಿಧ ಅಂಗಗಳಿಂದ ಜೀವಂತ SARS-CoV-2 ವೈರಸ್ ಅನ್ನು ಪ್ರತ್ಯೇಕಿಸಲು ಸಂಶೋಧಕರು ಸಮರ್ಥರಾಗಿದ್ದಾರೆ. ಪರೀಕ್ಷಿಸಿದ 55 ಮಾದರಿಗಳಲ್ಲಿ 25 (45%) ವೈರಸ್ ಅನ್ನು ಪ್ರತ್ಯೇಕಿಸಲಾಗಿದೆ.


ಇದನ್ನೂ ಓದಿ: Crime News: ಪ್ರೀತಿಗೆ ಒಪ್ಪದ ಅಮ್ಮನಿಗೆ ಮುಹೂರ್ತವಿಟ್ಟ ಮಗಳು, ಪ್ರಿಯಕರನ ಜೊತೆ ಸೇರಿ ತಾಯಿಯನ್ನೇ ಕೊಂದಳು!


ಮೆದುಳಿನ ಅಂಗಾಂಶಗಳಿಗೆ ಕನಿಷ್ಟ ಹಾನಿ


ಅಧ್ಯಯನಗಳ ಪ್ರಕಾರ SARS-CoV-2 ಸೋಂಕಿಗೆ ಕಾರಣವಾಗಿದ್ದು, ಶ್ವಾಸಕೋಶ ಹಾಗೂ ಶ್ವಾಸನಾಳದ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡಿದೆ ಎಂಬುದು ತಿಳಿದುಬಂದಿದೆ. ಒಬ್ಬ ರೋಗಿಯ ಹೈಪೋಥಾಲಮಸ್ ಮತ್ತು ಸೆರೆಬೆಲ್ಲಮ್, ಬೆನ್ನುಹುರಿ ಮತ್ತು ಇನ್ನೂ ಇಬ್ಬರು ರೋಗಿಗಳ ನರಗ್ರಂಥಿಗಳಲ್ಲಿ ಸಂಶೋಧಕರು SARS-CoV-2 RNA ಮತ್ತು ಪ್ರೋಟೀನ್ ಅನ್ನು ಕಂಡುಕೊಂಡಿದ್ದಾರೆ ಆದರೆ ಇವುಗಳು ಮೆದುಳಿನ ಅಂಗಾಂಶಗಳಿಗೆ ಕನಿಷ್ಟ ಹಾನಿಯನ್ನುಂಟು ಮಾಡಿವೆ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ.


ಜನವರಿ 1 ರಿಂದ ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್‌ನ ಎಲ್ಲಾ ಸಂದರ್ಶಕರು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಭಾರತ ಈ ಹಿಂದೆ ಘೋಷಿಸಿದೆ. ಅಮೆರಿಕಾದಲ್ಲಿ 40.5% ದಷ್ಟು ಹೊಸ ಸೋಂಕುಗಳು ಒಮಿಕ್ರಾನ್ ಉಪರೂಪಾಂತರ XBB.1.5 ನಿಂದ ಉಂಟಾಗಿದೆ ಎಂಬುದು ತಿಳಿದುಬಂದಿದೆ.

Published by:Latha CG
First published: