ನವದೆಹಲಿ(ಅ.04): ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದ್ದು ದೇಶದಲ್ಲಿದ ಕೊರೊನಾ ಸೋಂಕಿತರ ಸಂಖ್ಯೆ 65 ಲಕ್ಷ ದಾಟಿದೆ. ಇದಲ್ಲದೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಈಗ ಲಕ್ಷದ ಗಡಿಯನ್ನೂ ದಾಟಿದೆ. ದೇಶದಲ್ಲಿ ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಸೆಪ್ಟೆಂಬರ್ 17ರಿಂದ 95ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇದಾದ ಬಳಿಕ ಸೆಪ್ಟೆಂಬರ್ 20ರಿಂದ ಇಳಿಕೆಯಾಗಿದೆ. ಸೆಪ್ಟೆಂಬರ್ 20ರಂದು 86,961 ಪ್ರಕರಣಗಳು, ಸೆಪ್ಟೆಂಬರ್ 21ರಂದು 75,083 ಪ್ರಕರಣಗಳು, ಸೆಪ್ಟೆಂಬರ್ 22ರಂದು 83,347 ಪ್ರಕರಣಗಳು, ಸೆಪ್ಟೆಂಬರ್ 23ರಂದು 86,508 ಪ್ರಕರಣಗಳು ಕಂಡು ಬಂದಿದ್ದವು.
ಸೆಪ್ಟೆಂಬರ್ 24ರಂದು 86,052, ಸೆಪ್ಟೆಂಬರ್ 25ರಂದು 85,362 ಪ್ರಕರಣಗಳು, ಸೆಪ್ಟೆಂಬರ್ 26ರಂದು 88,600 ಪ್ರಕರಣಗಳು, ಸೆಪ್ಟೆಂಬರ್ 27ರಂದು 82,170 ಪ್ರಕರಣಗಳು, ಸೆಪ್ಟೆಂಬರ್ 28ರಂದು 70,589 ಪ್ರಕರಣಗಳು, ಸೆಪ್ಟೆಂಬರ್ 29ರಂದು 80,472 ಪ್ರಕರಣಗಳು, ಸೆಪ್ಟೆಂಬರ್ 30ರಂದು 86,821 ಪ್ರಕರಣಗಳು, ಅಕ್ಟೋಬರ್ 1ರಂದು 81,484 ಪ್ರಕರಣಗಳು ಹಾಗೂ ಅಕ್ಟೋಬರ್ 2ರಂದು 79,476 ಪ್ರಕರಣಗಳು ಪತ್ತೆಯಾಗಿದ್ದವು. ಅಕ್ಟೋಬರ್ 3ರಂದು 75,829 ಪ್ರಕರಣಗಳು ಕಂಡುಬಂದಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 65,49,374ಕ್ಕೆ ಏರಿಕೆಯಾಗಿದೆ.
ಇದಲ್ಲದೆ ಶನಿವಾರ 940 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,01,782ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 55,09,967 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,37,625 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.
CT Ravi Resignation: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ.ಟಿ.ರವಿ
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071, ಸೆಪ್ಟೆಂಬರ್ 14ರಂದು 83,809, ಸೆಪ್ಟೆಂಬರ್ 15ರಂದು 90,123, ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು 86,961 ಪ್ರಕರಣಗಳು ಪತ್ತೆಯಾಗಿದ್ದವು.
ಸೆಪ್ಟೆಂಬರ್ 21ರಂದು 75,083 ಸೆಪ್ಟೆಂಬರ್ 22ರಂದು 83,347, ಸೆಪ್ಟೆಂಬರ್ 23ರಂದು 86,508, ಸೆಪ್ಟೆಂಬರ್ 24ರಂದು 86,052, ಸೆಪ್ಟಂಬರ್ 25ರಂದು 85,362, ಸೆಪ್ಟೆಂಬರ್ 26ರಂದು 88,600, ಸೆಪ್ಟೆಂಬರ್ 27ರಂದು 82,170, ಸೆಪ್ಟೆಂಬರ್ 28ರಂದು 70,589, ಸೆಪ್ಟೆಂಬರ್ 29ರಂದು, ಸೆಪ್ಟೆಂಬರ್ 30ರಂದು 86,821, ಅಕ್ಟೋಬರ್ 1ರಂದು 81,484, ಅಕ್ಟೋಬರ್ 2ರಂದು 79,476 ಹಾಗೂ ಅಕ್ಟೋಬರ್ 3ರಂದು 75,829 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ