Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ; ಸೋಮವಾರ 14,933 ಹೊಸ ಕೇಸುಗಳು ಪತ್ತೆ

ಈಗ ಪ್ರತಿದಿನ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲು ಆರಂಭಿಸಿವೆ. ಸೋಮವಾರ 14,933 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 4,40,215ಕ್ಕೆ ಏರಿಕೆಯಾಗಿದೆ.

news18-kannada
Updated:June 23, 2020, 11:10 AM IST
Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ; ಸೋಮವಾರ 14,933 ಹೊಸ ಕೇಸುಗಳು ಪತ್ತೆ
Coronavirus
  • Share this:
ನವದೆಹಲಿ(ಜೂ.23): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್​ಡೌನ್​ ಜಾರಿ ಮಾಡಿ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ತೆಗೆ ಮಾತ್ರ ಲಾಕ್​ಡೌನ್​ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಕೊರೋನಾ ಪೀಡಿತರ ಸಂಖ್ಯೆ ನಾಲ್ಕು ‌ಲಕ್ಷದ ಗಡಿ ದಾಟಿದ್ದ ಮೂರೇ ದಿನದಲ್ಲಿ ನಾಲ್ಕೂವರೆ ಲಕ್ಷದ ಗಡಿ ಬಳಿ ಬಂದು ನಿಂತಿದೆ.

ಭಾರತದಲ್ಲಿ ಮೇ 30ರಿಂದ ಪ್ರತಿನಿತ್ಯ 8 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು, ಜೂನ್‌ 3ರಿಂದ ದಿನವೊಂದರಲ್ಲಿ 9 ಸಾವಿರಕ್ಕೂ ಅಧಿಕ ಪ್ರಕರಣಗಳು, ಜೂನ್ 11ರಿಂದ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 12ತಾರೀಖಿನಿಂದ 11 ಸಾವಿರಕ್ಕೂ ಹೆಚ್ಚು‌ ಪ್ರಕರಣಗಳು, ಜೂನ್ 17ರಿಂದ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 18ರಿಂದ 13 ಸಾವಿರಕ್ಕೂ‌ ಹೆಚ್ಚು‌ ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಪ್ರತಿದಿನ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲು ಆರಂಭಿಸಿವೆ. ಸೋಮವಾರ 14,933 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 4,40,215ಕ್ಕೆ ಏರಿಕೆಯಾಗಿದೆ.

Gold Price: ನಿರಂತರವಾಗಿ ಏರಿಕೆಯಾಗುತ್ತಲೇ ಇದೆ ಚಿನ್ನ-ಬೆಳ್ಳಿ ದರ; ಇಂದಿನ ಬೆಲೆಯೆಷ್ಟು?

ಇದಲ್ಲದೆ ಸೋಮವಾರ 312 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 14 ಸಾವಿರ ದಾಟಿದೆ. ಸದ್ಯ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 14,011ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 2,48,190 ಜನ ಮಾತ್ರ. ದೇಶದಲ್ಲಿ ಇನ್ನೂ 4,40,215 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970, ಮೇ 19ರಂದು 5,611, ಮೇ 20ರಂದು 5,609, ಮೇ 21ರಂದು 6,088, ಮೇ 22ರಂದು 6,654, ಮೇ 23ರಂದು 6,767, ಮೇ 24ರಂದು 6,977, ಮೇ 25ರಂದು 6,535, ಮೇ 26ರಂದು 6,387, ಮೇ 27ರಂದು 6,566, ಮೇ 28ರಂದು 7,466, ಮೇ 29ರಂದು 7,964, ಮೇ 30ರಂದು 8,380, ಮೇ 31ರಂದು 8,392 ಜನರಿಗೆ ಕೊರೋನಾ ಸೋಂಕು ಹರಡಿದೆ.

ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983, ಜೂನ್ 8ರಂದು 9987, ಜೂನ್‌ 9ರಂದು 9,985, ಜೂನ್ 10ರಂದು 9,996, ಜೂನ್ 11ರಂದು 10,956, ಜೂನ್ 12ರಂದು‌ 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್‌ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821 ಹಾಗೂ ಜೂನ್ 22ರಂದು 14,933 ಹೊಸ ಪ್ರಕರಣಗಳು ಕಂಡುಬಂದಿವೆ.
First published: June 23, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading