Coronavirus India Updates: ದೇಶದಲ್ಲಿ ನಿಲ್ಲದ ಕೊರೋನಾ ಉಪಟಳ; ನಿನ್ನೆ ದೇಶದಲ್ಲಿ 55,342 ಕೇಸ್ ಪತ್ತೆ

ಈವರೆಗೆ ಕೊರೊನಾದಿಂದ ಗುಣ ಆದವರು 62,27,296 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 8,38,729 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಅ.13): ದೇಶದಲ್ಲಿ ಸುನಾಮಿ ಸ್ವರೂಪ ಪಡೆದುಕೊಂಡಿದ್ದ ಕೊರೋನಾ ಸೋಂಕು ಹರಡುವಿಕೆಯ ತೀವ್ರತೆಯಲ್ಲಿ ಈಗ ತುಸು ತಗ್ಗಿದೆ.‌‌ ದೇಶದಲ್ಲಿನ ಕೊರೋನಾ ಸೋಂಕಿತರ ಸಂಖ್ಯೆ 71 ಲಕ್ಷವನ್ನೂ ದಾಟಿದ್ದರೂ ಪ್ರತಿದಿನ ಈಗ 6 ಸಾವಿರಕ್ಕೂ ಕಡಿಮೆ ಪ್ರಕರಣಗಳು ಗೋಚರಿಸುತ್ತಿವೆ. ಅಕ್ಟೋಬರ್ 8ರಂದು 70,496 ಪ್ರಕರಣಗಳು, ಅಕ್ಟೋಬರ್ 9ರಂದು 73,272 ಪ್ರಕರಣಗಳು, ಅಕ್ಟೋಬರ್ 10ರಂದು 74,383 ಪ್ರಕರಣಗಳು ಹಾಗೂ ಅಕ್ಟೋಬರ್ 11ರಂದು 66,732 ಕಂಡುಬಂದಿದ್ದವು‌. ಅಕ್ಟೋಬರ್ 12ರಂದು 55,342 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 71,75,881ಕ್ಕೆ ಏರಿಕೆಯಾಗಿದೆ. ಇದಲ್ಲದೆ ಸೋಮವಾರ 706 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,09,856ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 62,27,296 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 8,38,729 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ, ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071, ಸೆಪ್ಟೆಂಬರ್ 14ರಂದು 83,809, ಸೆಪ್ಟೆಂಬರ್ 15ರಂದು 90,123 ಪ್ರಕರಣಗಳು ಕಂಡು ಬಂದಿದ್ದವು.

ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ ಪ್ರಕರಣ; ತಿಂಗಳ ಬಳಿಕ ಬಾಗಿಲು ತೆರೆದ ಅರ್ಕೇಶ್ವರ ದೇವಾಲಯ

ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು‌ 86,961, ಸೆಪ್ಟೆಂಬರ್ 21ರಂದು 75,083 ಸೆಪ್ಟೆಂಬರ್ 22ರಂದು 83,347, ಸೆಪ್ಟೆಂಬರ್ 23ರಂದು 86,508, ಸೆಪ್ಟೆಂಬರ್ 24ರಂದು 86,052, ಸೆಪ್ಟಂಬರ್ 25ರಂದು 85,362, ಸೆಪ್ಟೆಂಬರ್ 26ರಂದು 88,600, ಸೆಪ್ಟೆಂಬರ್ 27ರಂದು 82,170, ಸೆಪ್ಟೆಂಬರ್ 28ರಂದು‌ 70,589, ಸೆಪ್ಟೆಂಬರ್ 29ರಂದು, ಸೆಪ್ಟೆಂಬರ್ 30ರಂದು 86,821 ಪ್ರಕರಣಗಳು ಪತ್ತೆಯಾಗಿದ್ದವು.

ಅಕ್ಟೋಬರ್ 1ರಂದು 81,484, ಅಕ್ಟೋಬರ್ 2ರಂದು 79,476, ಅಕ್ಟೋಬರ್ 3ರಂದು 75,829, ಅಕ್ಟೋಬರ್ 4ರಂದು 74,442, ಅಕ್ಟೋಬರ್ 5ರಂದು 61,267, ಅಕ್ಟೋಬರ್ 6ರಂದು 72,049 ಹಾಗೂ ಅಕ್ಟೋಬರ್ 7ರಂದು 78,524, ಅಕ್ಟೋಬರ್ 8ರಂದು 70,496, ಅಕ್ಟೋಬರ್ 9ರಂದು 73,272, ಅಕ್ಟೋಬರ್ 10ರಂದು 74,383, ಅಕ್ಟೋಬರ್ 11ರಂದು 66,732 ಹಾಗೂ ಅಕ್ಟೋಬರ್ 12ರಂದು 55,342 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by:Latha CG
First published: