Coronavirus India Updates: ಅರ್ಧ ಕೋಟಿಯತ್ತ ಧಾವಿಸಿದ ಭಾರತದ ಕೊರೋನಾ ಸೋಂಕಿತರ ಸಂಖ್ಯೆ

Coronavirus India Updates: ಸೆಪ್ಟೆಂಬರ್ 14ರಂದು 83,809 ಪ್ರಕರಣಗಳು ವರದಿಯಾಗಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 49,30,237ಕ್ಕೆ ಏರಿಕೆಯಾಗಿದೆ.

news18-kannada
Updated:September 15, 2020, 10:16 AM IST
Coronavirus India Updates: ಅರ್ಧ ಕೋಟಿಯತ್ತ ಧಾವಿಸಿದ ಭಾರತದ ಕೊರೋನಾ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಸೆ. 15): ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೋನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದೆ. ಈಗಾಗಲೇ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಅರ್ಧ ಕೋಟಿಯ ಸಮೀಪ ಧಾವಿಸಿದೆ. ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು 70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು. ಸೆಪ್ಟೆಂಬರ್ 9ರಿಂದ 95 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲಾರಂಭಿಸಿದ್ದವು. ಸೆಪ್ಟೆಂಬರ್ 12ರಿಂದ ಮತ್ತೆ ತುಸು ಕಡಿಮೆ ಆಗಿದೆ. ಸೆಪ್ಟೆಂಬರ್ 12ರಂದು 94,372 ಪ್ರಕರಣಗಳು ಹಾಗೂ ಸೆಪ್ಟೆಂಬರ್ 13ರಂದು 92,071 ಪ್ರಕರಣಗಳು ಪತ್ತೆಯಾಗಿದ್ದವು.‌ ಸೆಪ್ಟೆಂಬರ್ 14ರಂದು 83,809 ಪ್ರಕರಣಗಳು ವರದಿಯಾಗಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 49,30,237ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಸೋಮವಾರ 1, 054ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 80 ಸಾವಿರದ ಗಡಿ‌ ದಾಟಿದ್ದು 80,776ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 38,59,400 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,90,061 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

Tik Tok: ಟಿಕ್ ಟಾಕ್ ಮಾದರಿಯಲ್ಲಿ ಮತ್ತೊಂದು ಆ್ಯಪ್: ಯೂಟ್ಯೂಬ್​ನಿಂದ ಭಾರತದಲ್ಲಿ ಟೆಸ್ಟಿಂಗ್

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಆಗಸ್ಟ್ 1ರಂದು 54,736, ಆಗಸ್ಟ್ 2ರಂದು 52,972, ಆಗಸ್ಟ್ 3ರಂದು 52,050, ಆಗಸ್ಟ್ 4ರಂದು 52,509, ಆಗಸ್ಟ್ 5ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537, ಆಗಸ್ಟ್ 8ರಂದು 64,399, ಆಗಸ್ಟ್ 9ರಂದು 62,064, ಆಗಸ್ಟ್ 10ರಂದು  53,601, ಆಗಸ್ಟ್ 11ರಂದು 60,963, ಆಗಸ್ಟ್ 12ರಂದು 66,999, ಆಗಸ್ಟ್ 13ರಂದು 64,553, ಆಗಸ್ಟ್ 14ರಂದು 65,002, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531, ಆಗಸ್ಟ್ 19ರಂದು 69,652, ಆಗಸ್ಟ್ 20ರಂದು 68,898, ಆಗಸ್ಟ್ 21ರಂದು 69,878, ಆಗಸ್ಟ್ 22ರಂದು 69,239, ಆಗಸ್ಟ್ 23ರಂದು 61,408, ಆಗಸ್ಟ್‌ 24ರಂದು 60,975, ಆಗಸ್ಟ್ 25ರಂದು 67,151, ಆಗಸ್ಟ್ 26ರಂದು 75,760, ಆಗಸ್ಟ್ 27ರಂದು 77,266, ಆಗಸ್ಟ್ 28ರಂದು 76,472, ಆಗಸ್ಟ್ 29ರಂದು 78,761, ಆಗಸ್ಟ್ 30ರಂದು 78,512, ಆಗಸ್ಟ್ 31ರಂದು 69,921 ಪ್ರಕರಣಗಳು ಪತ್ತೆಯಾಗಿವೆ.

ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071 ಹಾಗೂ ಸೆಪ್ಟೆಂಬರ್ 14ರಂದು 83,809 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: September 15, 2020, 10:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading