HOME » NEWS » National-international » CORONAVIRUS INDIA UPDATES CORONA POSITIVE CASES CROSSED 68 LAKH IN INDIA LG

Coronavirus India Updates: ಭಾರತದಲ್ಲಿ 68 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬುಧವಾರ 971 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,05,526ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 58,27,705 ಜನ ಮಾತ್ರ.

news18-kannada
Updated:October 8, 2020, 10:19 AM IST
Coronavirus India Updates: ಭಾರತದಲ್ಲಿ 68 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಅ.08): ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಮೊದಲನೆ ಸ್ಥಾನದತ್ತ ವೇಗವಾಗಿ ಸಾಗುತ್ತಿದೆ.‌ ದೇಶದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ 68 ಲಕ್ಷವನ್ನೂ ದಾಟಿದೆ. ಇದಲ್ಲದೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಈಗ ಲಕ್ಷದ ಗಡಿಯನ್ನೂ ದಾಟಿದೆ. ಅಕ್ಟೋಬರ್ 6ರಂದು 72,049 ಪ್ರಕರಣಗಳು ಪತ್ತೆಯಾಗಿದ್ದವು. ಅಕ್ಟೋಬರ್ 7ರಂದು 72,049 ಪ್ರಕರಣಗಳು 78,524 ಕಂಡುಬಂದಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 68,35,656ಕ್ಕೆ ಏರಿಕೆಯಾಗಿದೆ. ಇದಲ್ಲದೆ ಬುಧವಾರ 971 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,05,526ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 58,27,705 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,02,425 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಶಿರಾ ಉಪ ಚುನಾವಣೆ ರಣಕಣಕ್ಕೆ ಎಂಟ್ರಿ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372, ಸೆಪ್ಟೆಂಬರ್ 13ರಂದು 92,071, ಸೆಪ್ಟೆಂಬರ್ 14ರಂದು 83,809, ಸೆಪ್ಟೆಂಬರ್ 15ರಂದು 90,123, ಸೆಪ್ಟೆಂಬರ್ 16ರಂದು 97,894, ಸೆಪ್ಟೆಂಬರ್ 17ರಂದು 96,424, ಸೆಪ್ಟೆಂಬರ್ 18ರಂದು 93,337, ಸೆಪ್ಟೆಂಬರ್ 19ರಂದು 92,605 ಸೆಪ್ಟೆಂಬರ್ 20ರಂದು‌ 86,961 ಪ್ರಕರಣಗಳು ಕಂಡು ಬಂದಿವೆ.

ಸೆಪ್ಟೆಂಬರ್ 21ರಂದು 75,083 ಸೆಪ್ಟೆಂಬರ್ 22ರಂದು 83,347, ಸೆಪ್ಟೆಂಬರ್ 23ರಂದು 86,508, ಸೆಪ್ಟೆಂಬರ್ 24ರಂದು 86,052, ಸೆಪ್ಟಂಬರ್ 25ರಂದು 85,362, ಸೆಪ್ಟೆಂಬರ್ 26ರಂದು 88,600, ಸೆಪ್ಟೆಂಬರ್ 27ರಂದು 82,170, ಸೆಪ್ಟೆಂಬರ್ 28ರಂದು‌ 70,589, ಸೆಪ್ಟೆಂಬರ್ 29ರಂದು, ಸೆಪ್ಟೆಂಬರ್ 30ರಂದು 86,821, ಅಕ್ಟೋಬರ್ 1ರಂದು 81,484, ಅಕ್ಟೋಬರ್ 2ರಂದು 79,476, ಅಕ್ಟೋಬರ್ 3ರಂದು 75,829, ಅಕ್ಟೋಬರ್ 4ರಂದು 74,442, ಅಕ್ಟೋಬರ್ 5ರಂದು 61,267, ಅಕ್ಟೋಬರ್ 6ರಂದು 72,049 ಹಾಗೂ ಅಕ್ಟೋಬರ್ 7ರಂದು 78,524 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: October 8, 2020, 10:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories