Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ; ನಿನ್ನೆ ಒಂದೇ ದಿನ 28,637 ಹೊಸ ಪ್ರಕರಣಗಳು ಪತ್ತೆ

ಶನಿವಾರ 551 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 22,674ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 5,34,620 ಜನ ಮಾತ್ರ. ದೇಶದಲ್ಲಿ ಇನ್ನೂ 2,92,258 ಜನರಲ್ಲಿ ಕೊರೊನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

news18-kannada
Updated:July 12, 2020, 11:05 AM IST
Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ; ನಿನ್ನೆ ಒಂದೇ ದಿನ 28,637 ಹೊಸ ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ(ಜು.12): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​ಡೌನ್​ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಶುಕ್ರವಾರ ಸೋಂಕಿತರ 8 ಲಕ್ಷ ದಾಟಿತ್ತು. ನಾಲ್ಕು ದಿನಗಳಲ್ಲಿ 1 ಲಕ್ಷಕ್ಕೂ ‌ಹೆಚ್ಚು ಜನರು‌ ಸೋಂಕು ಪೀಡಿತರಾಗಿದ್ದಾರೆ. ಶನಿವಾರ ಒಂದೇ ದಿನ 28,637 ಪ್ರಕರಣಗಳು ಪತ್ತೆಯಾಗಿವೆ. 

ಭಾರತದಲ್ಲಿ ಜುಲೈ 1ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3ರಿಂದ 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9ರಿಂದ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದೀಗ ಜುಲೈ 11ರಂದು 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶನಿವಾರ 28,637 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 8,49,553ಕ್ಕೆ ಏರಿಕೆಯಾಗಿದೆ.

ಕೊರೋನಾ ಸಂಕಷ್ಟದಲ್ಲಿಯೂ ರಾಜ್ಯದಲ್ಲಿ ಕ್ಷೀರಕ್ರಾಂತಿ; ಹೆಚ್ಚುವರಿ ಹಾಲು ಮಾರಾಟದ್ದೇ ಕೆಎಂಎಫ್​ಗೆ ಚಿಂತೆ

ಇದಲ್ಲದೆ ಶನಿವಾರ 551 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 22,674ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 5,34,620 ಜನ ಮಾತ್ರ. ದೇಶದಲ್ಲಿ ಇನ್ನೂ 2,92,258 ಜನರಲ್ಲಿ ಕೊರೊನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11ರಂದು 10,956, ಜೂನ್ 12ರಂದು 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22ರಂದು 14,933, ಜೂನ್ 23ರಂದು 15,968, ಜೂನ್ 24ರಂದು 16,922, ಜೂನ್ 25ರಂದು 17,296, ಜೂನ್ 26ರಂದು 18,552, ಜೂನ್ 27ರಂದು 19,906, ಜೂನ್ 28ರಂದು 19,459, ಜೂನ್ 29ರಂದು 18,522, ಜೂನ್ 30ರಂದು 18,653 ಪ್ರಕರಣಗಳು ಪತ್ತೆಯಾಗಿವೆ.

ಜುಲೈ 1ರಂದು 19,148, ಜುಲೈ 2ರಂದು 20,903, ಜುಲೈ 3 ರಂದು 22,771, ಜುಲೈ 4ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7ರಂದು 22,752, ಜುಲೈ 8ರಂದು 24,879, ಜುಲೈ 9ರಂದು 26,506 ಹಾಗೂ ಜುಲೈ 10ರಂದು 27,114 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: July 12, 2020, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading