COVID-19: ಈಗಿನ ಕೋವಿಡ್ ಸಮಯದಲ್ಲಿ ನೀವು ಬಸ್ ಏರುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ

ಈ ಕೋವಿಡ್ ಸಮಯದಲ್ಲಿ ಬಸ್​ನಲ್ಲಿ ಸಂಚರಿಸುವಾಗ ಸಾರ್ವಜನಿಕರು ಸಾಕಷ್ಟು ಎಚ್ಚರಿಕಯಿಂದ ಇರಬೇಕು. ನೀವು ಬಸ್​ನಲ್ಲಿ ಹೋಗುವಾಗ ಪಾಲಿಸಬೇಕಾದ ಕೆಲ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

Bus

Bus

  • Share this:
    ಇಡೀ ದೇಶವನ್ನೇ ತನ್ನ ವಶಕ್ಕೆ ತೆಗೆದುಕೊಂಡ ಮಾರಕ ಕೊರೋನಾ ವೈರಸ್ ಹುಟ್ಟು ಪಡೆದು ಒಂದು ವರ್ಷ ಕಳೆದರೂ ಇನ್ನೂ ಇದರ ಪರಿಣಾಮ ಕಡಿಮೆಯಾಗಿಲ್ಲ. ಆದರೆ, ದೇಶದಲ್ಲಿ ಲಾಕ್​ಡೌನ್ ತೆರವಾಗಿದ್ದು ಕಾರ್ಯಚಟುವಟಿಕೆಗಳು ಒಂದೊಂದಾಗಿ ಶುರುವಾಗಿದೆ. ಲಾಕ್​ಡೌನ್​ನಿಂದ ಒಂದೇ ಕಡೆಯಲ್ಲಿ ಬಂದಿಯಾಗಿದ್ದ ಲಕ್ಷಾಂತರ ಜನರು ತಮ್ಮ ಗೂಡು ಸೇರಿಕೊಂಡಿದ್ದಾರೆ. ಈಗಲೂ ಸರ್ಕಾರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂಬ ಸೂಚನೆ ರವಾನಿಸಿದೆ.

    ಅದರಲ್ಲೂ ಈ ಕೋವಿಡ್ ಸಮಯದಲ್ಲಿ ಬಸ್​ನಲ್ಲಿ ಸಂಚರಿಸುವಾಗ ಸಾರ್ವಜನಿಕರು ಸಾಕಷ್ಟು ಎಚ್ಚರಿಕಯಿಂದ ಇರಬೇಕು. ನೀವು ಬಸ್​ನಲ್ಲಿ ಹೋಗುವಾಗ ಪಾಲಿಸಬೇಕಾದ ಕೆಲ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆ; ಡಿ.22 ಮತ್ತು 27ಕ್ಕೆ ಮತದಾನ

    ನೀವು ದೂರದ ಊರಿಗೆ ಬಸ್​ನಲ್ಲಿ ಸಂಚರಿಸಲಿದ್ದೀರಿ ಎಂದರೆ ಆದಷ್ಟು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಿ.

    ನಿಮ್ಮದೆ ಆದ ಫೇಸ್​ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಸಿಕೊಳ್ಳಿ.

    ಪ್ರಯಾಣ ಬೆಳೆಸುವ ಮುನ್ನ ನಿಮ್ಮ ಟೆಂಪರೇಚರ್ ಅನ್ನು ಒಮ್ಮೆ ಪರೀಕ್ಷಿಸಿದರೆ ಉತ್ತಮ.

    ಬಸ್ ಹತ್ತಿ ಸೀಟ್​ನಲ್ಲಿ ಕುಳಿತ ಬಳಿಕ ಯಾವುದೇ ಕಾರಣಕ್ಕೂ ಮಾಸ್ಕ್​ ತೆಗೆಯಬೇಡಿ, ಜೊತೆಗೆ ಮೂಗು ಸಂಪೂರ್ಣ ಕವರ್ ಆಗುವಂತೆ ಮಾಸ್ಕ್ ಇರಲಿ.

    ಬಸ್ ಏರುವ ಮುನ್ನ ಹಾಗೂ ಬಸ್​ನಿಂದ ಇಳಿದ ತಕ್ಷಣ ಸ್ಯಾನಿಟೈಜರ್ ಉಪಯೋಗುಸುವುದನ್ನು ಮರೆಯದಿರಿ.

    ಸೀನುವಾಗ ಮತ್ತು ಕೆಮ್ಮುವಾಗ ಕರವಸ್ತ್ರವನ್ನು ತಪ್ಪದೆ ಬಳಸಿ.

    ಹೊರಡುವ ಮುನ್ನ ಮನೆಯಲ್ಲಿ ಬಿಸಿ ಮಾಡಿದ ನೀರನ್ನು ಬಾಟಲ್​ನಲ್ಲಿ ತೆಗೆದುಕೊಳ್ಳಿ.

    Gold Rate: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೀಗಿದೆ!

    ನೀವು ಯಾವ ಊರಿಗೆ ಪ್ರಯಾಣಿಸುತ್ತಿದ್ದಿರೋ ಆ ಊರಿನ ಕೋವಿಡ್ ಮಾರ್ಗಸೂಚಿ ಬಗ್ಗೆ ತಿಳಿದುಕೊಳ್ಳಿ.

    ಇನ್ನೂ ಕೊರೋನಾ ವೈರಸ್ ಲಕ್ಷಣಗಳಲ್ಲಿ ನಿಮ್ಮಲ್ಲಿದ್ದರೆ ಪ್ರಯಾಣ ಬೆಳೆಸಲೇಬೇಡಿ.

    ಜೊತೆಗೆ ಮುಖ, ಮೂಗು ಹಾಗೂ ಬಾಯಿಯನ್ನು ಮುಟ್ಟಬೇಡಿ.

    ಅನಗತ್ಯವಾಗಿ ಮಾಸ್ಕ್ ಅನ್ನು ಬಸ್​ನಲ್ಲಿ ಪ್ರಯಾಣ ಮಾಡುವಾಗ ತೆಗೆಯಬೇಡಿ.
    Published by:Vinay Bhat
    First published: