ದೇಶದ ಕೊರೋನಾ ವೈರಸ್ ಪ್ರಕರಣಗಳ ಅಸಲಿಯತ್ತು ಬಯಲು ಮಾಡಿದ ಪತ್ರಕರ್ತೆಯನ್ನು ಬಂಧಿಸಿದ ಚೀನಾ
ಈ ರೀತಿ ದೇಶದ ಆಂತರಿಕ ಮಾಹಿತಿ ಬಗ್ಗೆ ವರದಿ ಮಾಡಿದ ಸಾಕಷ್ಟು ಜನರನ್ನು ಈಗಾಗಲೇ ಚೀನಾ ಸರ್ಕಾರ ಬಂಧಿಸಿದೆ. ಕೆಲವರನ್ನು ಬಿಡುಗಡೆ ಮಾಡಿದರೆ, ಇನ್ನೂ ಕೆಲವರನ್ನು ಹಾಗೆಯೇ ಜೈಲಿನಲ್ಲಿ ಇಡಲಾಗಿದೆ.
ಬೀಜಿಂಗ್ (ನವೆಂಬರ್ 17): ಕೊರೋನಾ ವೈರಸ್ ಉಗಮಸ್ಥಾನ ಚೀನಾ. ವುಹಾನ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವೈರಸ್ ನಂತರ ಅಲ್ಲಿ ಏಕಾಏಕಿ ನಿಯಂತ್ರಣಕ್ಕೆ ಬಂದಿತ್ತು. ಈ ವಿಚಾರ ಸಾಕಷ್ಟು ಅನುಮಾನಗಳಿಗೂ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ವರದಿ ಮಾಡಿದ ನಾಗರಿಕ ಪತ್ರಕರ್ತೆಯನ್ನು ಚೀನಾ ಸರ್ಕಾರ ಬಂಧಿಸಿ, ಜೈಲಿನಲ್ಲಿಟ್ಟಿದೆ.
ಚೀನಾದಲ್ಲಿ ವರದಿ ಆಗುತ್ತಿರುವ ಕೊರೋನಾ ಪ್ರಕರಣಗಳ ಬಗ್ಗೆ ಅಲ್ಲಿನ ಸರ್ಕಾರ ಅಂಕಿ ಅಂಶಗಳನ್ನು ನೀಡುತ್ತಿದೆ. ಆದರೆ, ಇದು ಸರಿಯಿಲ್ಲ. ಚೀನಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಜಾಂಗ್ ಜಾನ್ ಹೆಸರಿನ ಪತ್ರಕರ್ತೆ ವರದಿ ಮಾಡಿದ್ದರು. ಅಲ್ಲದೆ, ಚೀನಾದ ಅನೇಕ ಕಡೆಗಳಲ್ಲಿ ಸಣ್ಣ ಉದ್ಯಮಗಳು ನೆಲ ಕಚ್ಚುತ್ತಿವೆ. ನಿರುದ್ಯೋಗ ಪ್ರಕರಣಗಳು ಕೂಡ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದರು.
ಜಾಂಗ್ ಅವರ ಈ ವರದಿ ಬೆನ್ನಲ್ಲೇ ಚೀನಾ ಸರ್ಕಾರ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದೆ. ಸುಳ್ಳು ಮಾಹಿತಿ ಹಂಚಿಕೊಂಡ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಬರಹಗಳ ಮೂಲಕ, ವಿಡಿಯೋ ಹಾಗೂ ವಿ ಚ್ಯಾಟ್ ಸೇರಿ ಇತರ ಇಂಟರ್ನೆಟ್ ಮಾಧ್ಯಮಗಳು ಬಳಕೆ ಮಾಡಿಕೊಂಡು ಅವರು ಸುಳ್ಳು ಮಾಹಿತಿಯನ್ನು ಹಂಚಿದ್ದಾರೆ ಎನ್ನುವ ಆರೋಪ ಜಾಂಗ್ ಮೇಲಿದೆ.
ಈ ರೀತಿ ದೇಶದ ಆಂತರಿಕ ಮಾಹಿತಿ ಬಗ್ಗೆ ವರದಿ ಮಾಡಿದ ಸಾಕಷ್ಟು ಜನರನ್ನು ಈಗಾಗಲೇ ಚೀನಾ ಸರ್ಕಾರ ಬಂಧಿಸಿದೆ. ಕೆಲವರನ್ನು ಬಿಡುಗಡೆ ಮಾಡಿದರೆ, ಇನ್ನೂ ಕೆಲವರನ್ನು ಹಾಗೆಯೇ ಜೈಲಿನಲ್ಲಿ ಇಡಲಾಗಿದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ