• Home
 • »
 • News
 • »
 • national-international
 • »
 • Corona Variant: 91 ದೇಶಗಳಲ್ಲಿ ಕೊರೊನಾ ರೂಪಾಂತರ; ವರದಿ ಬಹಿರಂಗ

Corona Variant: 91 ದೇಶಗಳಲ್ಲಿ ಕೊರೊನಾ ರೂಪಾಂತರ; ವರದಿ ಬಹಿರಂಗ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಒಮಿಕ್ರಾನ್‌ನ XBB ಉಪ-ರೂಪಾಂತರವು ಭಾರತದಲ್ಲಿ ಪ್ರಬಲವಾಗಿದೆ. 73% ದಷ್ಟು ಮಾದರಿಗಳಲ್ಲಿ ಕಂಡುಬರುತ್ತದೆ.

 • News18 Kannada
 • 2-MIN READ
 • Last Updated :
 • New Delhi, India
 • Share this:

ಪ್ರಸ್ತುತ ಚೀನಾ (China) ಹಾಗೂ ವಿಶ್ವದ ಇತರೆಡೆಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ (Covid-19 Cases)  ಕಂಡುಬಂದಿರುವ ಹಠಾತ್ ಹೆಚ್ಚಳವು ಕಳವಳಕಾರಿಯಾಗಿದ್ದರೂ ಒಮಿಕ್ರಾನ್ ಉಪ ರೂಪಾಂತರ BF.7 ಸುಮಾರು ಎರಡು ವರ್ಷಗಳಿಂದ 91 ದೇಶಗಳಲ್ಲಿ ಪರಿಚಲನೆಯಲ್ಲಿದೆ ಹಾಗೂ ಯಾವುದೇ ಹೆಚ್ಚಿನ ವಿನಾಶಕ್ಕೆ ಕಾರಣವಾಗಿಲ್ಲ ಎಂಬ ಮಾಹಿತಿ ದೊರಕಿದೆ. ಸ್ಕ್ರಿಪ್ಸ್ ರೀಸರ್ಚ್ ವಿಶ್ವವಿದ್ಯಾಲಯದ ಅಂಕಿಅಂಶಗಳ (Corona Cases) ವರದಿಯು ಫೆಬ್ರವರಿ 2021 ರಿಂದ BF.7 ಅನುವಂಶಿಕತೆಯನ್ನು ಹೋಲುವ ರೂಪಾಂತರವನ್ನು 91 ದೇಶಗಳು ಹೊಂದಿದೆ ಎಂದು ತಿಳಿಸಿದೆ.


ಇದನ್ನು ಅಂತಿಮವಾಗಿ BF.7 (BA.5.2.1.7) ಎಂದು ಹೆಸರಿಸಲಾಯಿತು ಹಾಗೂ BA.5 ಒಮಿಕ್ರಾನ್ ವಂಶಾವಳಿಗೆ ಮೇ 2022 ರಲ್ಲಿ ಸೇರಿಸಲಾಯಿತು ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.


ವೈರಸ್‌ಗಳಲ್ಲಿ ಹೊಸದಾಗಿರುವ ಸೂಚನೆಗಳು
ಅನುಕ್ರಮ ಮಾದರಿಗಳಲ್ಲಿ BF.7 ನ ಹರಡುವಿಕೆಯು ಪ್ರಪಂಚದಾದ್ಯಂತ 0.5% ದಷ್ಟು ಉಳಿದಿರುವುದರಿಂದ ಉಪ-ರೂಪಾಂತರದಲ್ಲಿ ಹೊಸದಾಗಿರುವ ಸೂಚನೆಯು ವೈರಾಲಜಿಸ್ಟ್‌ಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸಾಂಕ್ರಾಮಿಕ ರೋಗ ತಜ್ಞರನ್ನು ದಿಗ್ಭ್ರಮೆಗೊಳಿಸಿದೆ.


ಸೀಮಿತ ಬೆಳವಣಿಗೆಯ ಸಾಮರ್ಥ್ಯ
ಕಳೆದ 22 ತಿಂಗಳುಗಳಲ್ಲಿ ಹಲವಾರು ದೇಶಗಳಲ್ಲಿ BF.7 ತನ್ನ ಉಪಸ್ಥಿತಿಯನ್ನುಂಟು ಮಾಡಿದ್ದರೂ XBB ಮತ್ತು BQ.1.1 ನಂತಹ ಏಕಕಾಲದಲ್ಲಿ ಚಲಾವಣೆಯಲ್ಲಿರುವ ಒಮಿಕ್ರಾನ್ ಉಪ-ವಂಶಗಳಿಗೆ ಹೋಲಿಸಿದಾಗ ಕೋವಿಡ್-19 ಪ್ರಕರಣಗಳಿಗೆ ಗಮನಾರ್ಹ ಕೊಡುಗೆ ನೀಡಿಲ್ಲ.


ವಿಶ್ವಾದ್ಯಂತ BF.7 ರ ಸಂಚಿತ ಹರಡುವಿಕೆಯ ಪ್ರಮಾಣವು 0.5 ಪ್ರತಿಶತದಷ್ಟಿದೆ, ಇದು ಸೀಮಿತ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ ಎಂದು ತೋರಿಸುತ್ತದೆ. ಹಾಗಾಗಿ ಹುಸಿ ಬೆದರಿಕೆಯನ್ನುಂಟು ಮಾಡುವುದು ಸರಿಯಲ್ಲ ಎಂದು ಇನ್ಸಾಕಾಗ್‌ನ ಜೀನೋಮ್ ಸೀಕ್ವೆನ್ಸಿಂಗ್ ಪ್ರೋಗ್ರಾಂನಲ್ಲಿ ತೊಡಗಿಸಿಕೊಂಡಿರುವ ವೈರಾಲಜಿಸ್ಟ್ ತಿಳಿಸಿದ್ದಾರೆ.


ಭಾರತದಲ್ಲಿ BA.5 ನ ಕಡಿಮೆ ಹರಡುವಿಕೆ
ಒಮಿಕ್ರಾನ್‌ನ XBB ಉಪ-ರೂಪಾಂತರವು ಭಾರತದಲ್ಲಿ ಪ್ರಬಲವಾಗಿದೆ. 73% ದಷ್ಟು ಮಾದರಿಗಳಲ್ಲಿ ಕಂಡುಬರುತ್ತದೆ. BA.5 ಸ್ವತಃ ಭಾರತದಲ್ಲಿ ಕಡಿಮೆ ಹರಡುವಿಕೆಯನ್ನು ಹೊಂದಿದೆ. ಇದು 5% ಕ್ಕಿಂತ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.


ಕೋವಿಡ್ ಚೀನಾದಲ್ಲಿ ಉಲ್ಬಣಗೊಂಡಿರುವುದಕ್ಕೆ ಕಾರಣಗಳೇನು?
ಚೀನಾದಲ್ಲಿ ಇತ್ತೀಚಿನ ಕೋವಿಡ್-19 ಉಲ್ಬಣಗೊಂಡಿರುವುದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ ಎಂಬುದು ಸಂಶೋಧಕರ ಮಾತಾಗಿದೆ. ಇದೀಗ ಚೀನಾದಲ್ಲಿ ಸತತವಾಗಿ ಹರಡುತ್ತಿರುವ ಹಾಗೂ ಅಪಾರ ಸಾವು ನೋವುಗಳಿಗೆ ಕಾರಣವಾಗಿರುವ ಉಲ್ಬಣವನ್ನು BF.7 ಎಂದು ವಿವರಿಸಬಹುದಾಗಿದೆ. ಇದು ಕಡಿಮೆ ಕೋವಿಡ್ ಸೋಂಕಿನ ಪ್ರಮಾಣವನ್ನು ಹೊಂದಿರುವ, ಹೆಚ್ಚಾಗಿ ಸೋಂಕಿಗೆ ಒಳಗಾಗುವ ಜನಸಂಖ್ಯೆಯಲ್ಲಿ ಹರಡುತ್ತದೆ.


ಇದನ್ನೂ ಓದಿ: Charles Shobharaj: 'ಬಿಕಿನಿ ಕಿಲ್ಲರ್' ಚಾರ್ಲ್ಸ್ ಶೋಭರಾಜ್ ಯಾರು ಗೊತ್ತಾ? ಸರಣಿ ಹಂತಕನ ಬಗ್ಗೆ ಬೆಚ್ಚಿಬೀಳೋ ಸಂಗತಿ ಇಲ್ಲಿವೆ


ಚೀನಾದಲ್ಲಿ ಬಳಸಲಾಗುತ್ತಿರುವ ಲಸಿಕೆಗಳ ಸೀಮಿತ ಪರಿಣಾಮವೂ ಸೋಂಕು ತೀವ್ರವಾಗಿ ಹರಡಲು ಕಾರಣವಾಗಿದೆ ಎಂಬುದನ್ನು ಇಲ್ಲಿ ಪರಿಗಣಿಸಬೇಕಾಗಿದೆ.


ಈ ಲಸಿಕೆಗಳು ಕಡಿಮೆ ವ್ಯಾಪ್ತಿ ಯನ್ನು ಹೊಂದಿದ್ದು ಶೂನ್ಯ ಕೋವಿಡ್ ನೀತಿಗೆ ಒಮ್ಮೆಲೆ ತೆರೆದುಕೊಳ್ಳುವಷ್ಟು ಕಡಿಮೆ ಸಾಮರ್ಥ್ಯವನ್ನು ಹೊಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.


SARS-CoV-2 ಹೆಚ್ಚು ವಿಕಸನಗೊಳ್ಳುವ ಸಾಮರ್ಥ್ಯ
ವರದಿಯ ಪ್ರಕಾರ ವೈರಸ್ ಮತ್ತಷ್ಟು ರೂಪಾಂತರಗೊಳ್ಳುವ ಮತ್ತು ವಿಕಸನಗೊಳ್ಳುವ ಸಾಮರ್ಥ್ಯವು ಕಳವಳಕಾರಿ ವಿಷಯವಾಗಿದೆ. ದೊಡ್ಡ ಕಾಳಜಿಯೆಂದರೆ SARS-CoV-2 ಮತ್ತಷ್ಟು ವಿಕಸನಗೊಳ್ಳುವ ಸಾಮರ್ಥ್ಯ, ದುರ್ಬಲರಲ್ಲಿ ತೀವ್ರ ಅನಾರೋಗ್ಯವನ್ನು ಉಂಟುಮಾಡುವ ಸಾಮರ್ಥ್ಯದೊಂದಿಗೆ ರೋಗನಿರೋಧಕ ವ್ಯವಸ್ಥೆಯಿಂದ ಹೆಚ್ಚು ತಪ್ಪಿಸಿಕೊಳ್ಳುವ ವೈರಸ್ ಆಗಿದೆ.


ವೈರಸ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ.  ಮುಂಜಾಗ್ರತೆಯ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


BF.7 ರೂಪಾಂತರದ ಒಂದೆರಡು ಪ್ರಕರಣಗಳು ಭಾರತದಲ್ಲಿ ಪತ್ತೆ
ಈಗಾಗಲೇ ಭಾರತದಲ್ಲಿ BF.7 ಸ್ಟ್ರೈನ್‌ನ ಕೆಲವು ಪ್ರಕರಣಗಳು ಕಂಡುಬಂದಿದ್ದು ಮತ್ತು ಇದು ಸೋಂಕುಗಳ ಉಲ್ಬಣಕ್ಕೆ ಅಥವಾ ರೋಗದ ತೀವ್ರತೆಯ ಹೆಚ್ಚಳಕ್ಕೆ ಕಾರಣವಾಗಲಿಲ್ಲ ಎಂದು INSACOG ನ ಸಲಹಾ ಮಂಡಳಿಯ ಸಹ-ಅಧ್ಯಕ್ಷ ಡಾ ಸೌಮಿತ್ರ ದಾಸ್ ತಿಳಿಸಿದ್ದಾರೆ.


ಇದನ್ನೂ ಓದಿ: Children's Health: ಪೋಷಕರೇ ಮಕ್ಕಳಿಗೆ ಶೀತ, ಕೆಮ್ಮು ಔಷಧಿ ನೀಡುವ ಮುನ್ನ ಇರಲಿ ಎಚ್ಚರ!


ಭಾರತದಲ್ಲಿ BF.7 ನ ಕನಿಷ್ಠ ಒಂದೆರಡು ಪ್ರಕರಣಗಳನ್ನು ಮಾತ್ರ ನೋಡಿದ್ದು ಕಳವಳಕಾರಿಯಾಗಿರುವ ಯಾವುದೇ ಅಂಶಗಳು ವರದಿಯಾಗಿಲ್ಲ ಹಾಗೂ ಕಳೆದ ಮೂರು ತಿಂಗಳಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗಿಲ್ಲ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು