CoronaVirus: ಕೊರೋನಾ ಯುದ್ಧ ಭಾರತ-ಪಾಕ್ ಯುದ್ಧದಂತೆ ಅಲ್ಲ; ಬಿಜೆಪಿಗೆ ಕುಟುಕಿದ ಶಿವಸೇನೆ..!

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಬೇಡ. ಇದರಿಂದ ಆರ್ಥಿಕತೆಗೆ ತೀವ್ರ ಪೆಟ್ಟು ಬೀಳಲಿದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಮುಖಂಡ ಪ್ರಕಾಶ್ ಜಾವ್ಡೇಕರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್.

ಶಿವಸೇನೆ ನಾಯಕ ಸಂಜಯ್ ರಾವತ್.

 • Share this:
  ಮುಂಬೈ: ದೇಶದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿವೆ. ದಿನೇ ದಿನೇ ಕೊರೋನಾ 2ನೇ ಅಲೆ ಮಹಾರಾಷ್ಟ್ರವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸೋಂಕಿನ ಅಬ್ಬರಕ್ಕೆ ಕಡಿವಾಣ ಹಾಕಲು ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಹೇರಲು ಒಲವು ತೋರಿದ್ದಾರೆ. ಆದ್ರೆ ಪತಿಪಕ್ಷವಾದ ಬಿಜೆಪಿ ಲಾಕ್ಡೌನ್ ಬೇಡವೆಂದು ಒತ್ತಡವೇರುತ್ತಿದೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಕೊರೋನಾ ಯುದ್ಧ ಭಾರತ-ಪಾಕ್ ಯುದ್ಧದಂತೆ ಅಲ್ಲ. ಕೊರೋನಾ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ತಿರುಗೇಟು ಕೊಟ್ಟಿದ್ದಾರೆ.

  ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಬೇಡ. ಇದರಿಂದ ಆರ್ಥಿಕತೆಗೆ ತೀವ್ರ ಪೆಟ್ಟು ಬೀಳಲಿದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಮುಖಂಡ ಪ್ರಕಾಶ್ ಜಾವ್ಡೇಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾರೂಢ ಶಿವಸೇನೆಯ ಸಂಜಯ್ ರಾವತ್, ಬಿಜೆಪಿಯರು ಕೊರೋನಾ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸೋಂಕಿನ ವಿರುದ್ಧದ ಯುದ್ಧ ಭಾರತ-ಪಾಕ್ ನಡುವಿನ ಯುದ್ಧದಂತೆ ಅಲ್ಲ ರಾಜಕೀಯ ಲಾಭ ಪಡೆಯಲು ಎಂದು ಟಾಂಗ್ ಕೊಟ್ಟಿದ್ದಾರೆ.

  ಮಹಾರಾಷ್ಟ್ರದ ಜನತೆ ಮತ್ತೆ ಲಾಕ್ಡೌನ್ ಬೇಡ ಎನ್ನುತ್ತಿದ್ದಾರೆ ಎಂದು ಫಡ್ನವೀಸ್ ವಾದಿಸುತ್ತಿದ್ದಾರೆ. ಹೌದು ನಮಗೂ ಗೊತ್ತಿದೆ ಜನರಿಗೆ ಮತ್ತೆ ಲಾಕ್ಡೌನ್ ಬೇಡವೆಂದು, ಆದರೆ ಜನರ ಜೀವ ಉಳಿಸಲು ಬೇರೆ ಯಾವ ಮಾರ್ಗವಿದೆ ಎಂದು ರಾವತ್ ಮರುಪ್ರಶ್ನಿಸಿದ್ದಾರೆ. ಪ್ರಕಾಶ್ ಜಾವ್ಡೇಕರ್ ದೆಹಲಿಯಲ್ಲಿ ಕುಳಿತು ಇಲ್ಲಿ ನಾವು ಏನು ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಬಂದು ಪರಿಸ್ಥಿತಿಯನ್ನು ನೋಡಬೇಕು ಎಂದು ಕುಟುಕಿದರು.

  ಇದನ್ನೂ ಓದಿ: HD Kumaraswamy: ಬಿಜೆಪಿ ಸರ್ಕಾರ ರೈತರ ಬಗ್ಗೆ ಮೃದು ಮಾತಾಡುತ್ತಲೇ ರೈತರ ಬೆನ್ನಿಗೆ ಚೂರಿ ಹಾಕುತ್ತಿದೆ; ಕುಮಾರಸ್ವಾಮಿ ಆರೋಪ

  ಕೇಂದ್ರ ಸರ್ಕಾರದ ವಿರುದ್ಧವೂ ರಾವತ್ ಹರಿಹಾಯ್ದಿದ್ದಾರೆ. ದೇಶದಲ್ಲಿ ಮತ್ತೆ ಲಾಕ್ಡೌನ್ ಬೇಕೋ? ಬೇಡವೋ? ಎಂದು ಪ್ರಧಾನಿ ಮೋದಿ ನಿರ್ಧರಿಸುತ್ತಾರೆ. ಆದರೆ ಅವರು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣಾ ಕೆಲಸ ಮುಗಿದ ಬಳಿಕ ದೇಶದ ಬಗ್ಗೆ ಯೋಚಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

  ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿತ್ಯ ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಸಿಎಂ ಠಾಕ್ರೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಲಾಕ್ಡೌನ್ ಬಗ್ಗೆ ನಿರ್ಧರಿಸುತ್ತಾರೆ. ಕೊರೋನಾ ಸಂಕಷ್ಟದಿಂದ ಪಾರಾಗಲು ಲಾಕ್ಡೌನ್ ಅಗತ್ಯವಿದ್ದರೆ ಆ ಬಗ್ಗೆ ಖಂಡಿತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಲೇ ಮಹಾರಾಷ್ಟ್ರದಲ್ಲಿ ಕರೋನಾ ಕರ್ಫ್ಯೂ (ನೈಟ್ಕರ್ಫ್ಯೂ), ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಶನಿವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲೂ ಲಾಕ್ಡೌನ್ ಬಗ್ಗೆ ಚರ್ಚಿಸಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದರು.
  Published by:MAshok Kumar
  First published: