HOME » NEWS » National-international » CORONA VIRUS DEATH TOLL RISES TO 131 IN CHINA MAK

ಕರೋನಾ ವೈರಸ್​; ಚೀನಾದಲ್ಲಿ131ಕ್ಕೆ ಏರಿದ ಸಾವಿನ ಸಂಖ್ಯೆ, ಭಾರತದಲ್ಲೂ ಕಟ್ಟೆಚ್ಚರ!

ಕರೋನಾ ವೈರಸ್​ಗೆ ತುತ್ತಾಗುತ್ತಿರುವವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

MAshok Kumar | news18-kannada
Updated:January 29, 2020, 8:28 AM IST
ಕರೋನಾ ವೈರಸ್​; ಚೀನಾದಲ್ಲಿ131ಕ್ಕೆ ಏರಿದ ಸಾವಿನ ಸಂಖ್ಯೆ, ಭಾರತದಲ್ಲೂ ಕಟ್ಟೆಚ್ಚರ!
ಸಾಂದರ್ಭಿಕ ಚಿತ್ರ
  • Share this:
ಚೀನಾ (ಜನವರಿ 29); ಮಾರಣಾಂತಿಕ ಕರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ ಚೀನಾದಲ್ಲಿ ಏಕಾಏಕಿ 131ಕ್ಕೆ ಏರಿಕೆಯಾಗಿದೆ. ಮಂಗಳವಾರ ಒಂದೇ ದಿನಕ್ಕೆ ಸುಮಾರು 25 ಜನ ಸಾವನ್ನಪ್ಪಿದ್ದಾರೆ ಅಲ್ಲದೆ, 840 ಜನರಲ್ಲಿ ಹೊಸದಾಗಿ ಈ ವೈರಸ್ ಕಂಡು ಬಂದಿದೆ ಎಂದು ಹುಬೈ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ ಇದೀಗ ಚೀನಾದಲ್ಲಿ ಕರೋನಾ ವೈರಸ್ ಸೋಂಕಿಗೆ ಒಳಗಾದರ ಸಂಖ್ಯೆ 5,300ಕ್ಕೆ ಏರಿಕೆಯಾಗಿದಂತಾಗಿದೆ.

ಕರೋನಾ ವೈರಸ್​ಗೆ ತುತ್ತಾಗುತ್ತಿರುವವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚೀನಾದಲ್ಲಿ ವ್ಯಾಪಿಸಿದ್ದ ಈ ಕರೋನಾ ವೈರಸ್ ಭಾರತದ ಮುಂಬೈ, ಮೊಹಾಲಿ, ಉಜ್ಜಯಿನಿ ಹಾಗೂ ದೆಹಲಿಯಲ್ಲಿ ಕೆಲವು ಶಂಕಿತ ಪ್ರಕರಣಗಳು ವರದಿಯಾಗಿವೆ. ಆದರೆ, ಈ ಪೈಕಿ ಯಾವುದೂ ಇನ್ನೂ ದೃಢಪಟ್ಟಿಲ್ಲ. ಈ ವೈರಸ್ ದೇಶದಲ್ಲಿ ಹರಡುವುದನ್ನು ಪತ್ತೆಹಚ್ಚಿ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಅಕಸ್ಮಾತ್ ಈ ಮಾರಣಾಂತಿಕ ವೈರಸ್ ಭಾರತದಲ್ಲಿ ಹರಡಿದರೂ ಸಹ ಅದನ್ನು ತಡೆಗಟ್ಟಲು ದೇಶದ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಈ ಸಿದ್ಧತೆಗಳನ್ನು ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮಂಗಳವಾರ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಚೀನಾದ ವುಹಾನ್ ನಗರದಲ್ಲಿ ನೆಲೆಸಿರುವ ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಚೀನಾದ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದೆ. ಹೀಗಾಗಿ ಚೀನಾ ಅಧಿಕಾರಿಗಳ ಅನುಮೋದನೆ ದೊರೆಯುತ್ತಿದ್ದಂತೆ ಅಲ್ಲಿನ ಭಾರತೀಯರನ್ನು ದೇಶಕ್ಕೆ ಸ್ಥಳಾಂತರಿಸಲು ನಾಗರೀಕ ವಿಮಾನಯಾನ ಸಚಿವಾಲಯ ಅಗತ್ಯ ವ್ಯವಸ್ಥೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಇದನ್ನೂ ಓದಿ : ಕರೋನಾ ಪ್ರಹಾರ; ಅತಿಹೆಚ್ಚು ಬಲಿಪಡೆದಿರುವ ಜಗತ್ತಿನ ಮಾರಕ ವೈರಸ್​ಗಳ ಟಾಪ್​5 ಪಟ್ಟಿ!
Youtube Video
First published: January 29, 2020, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories