• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಹೊಸ ವರ್ಷಕ್ಕೆ ಅಲ್ಲ, ಹಳೆ ವರ್ಷ ಮುಗಿಯುತ್ತಿರುವುದಕ್ಕೆ ಸಂಭ್ರಮ; 2020 ಒಳ್ಳೆ ವರ್ಷ ಅಲ್ಲವೇ ಅಲ್ಲ...

ಹೊಸ ವರ್ಷಕ್ಕೆ ಅಲ್ಲ, ಹಳೆ ವರ್ಷ ಮುಗಿಯುತ್ತಿರುವುದಕ್ಕೆ ಸಂಭ್ರಮ; 2020 ಒಳ್ಳೆ ವರ್ಷ ಅಲ್ಲವೇ ಅಲ್ಲ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಾರಿ ಹೊಸ ವರ್ಷ ಆಗಮಿಸುವ ಸಂಭ್ರಮಕ್ಕಿಂತ ಹಳೆ ವರ್ಷ ಮುಗಿಯಿತಲ್ಲ ಎಂಬ ಸಂಭ್ರಮ ಬಹುತೇಕರಲ್ಲಿ

  • Share this:

ಇನ್ನೇನು ಹೊಸ ವರ್ಷಕ್ಕೆ ದಿನಗಣಗೆ ಶುರುವಾಗಿದ್ದು, ಎಲ್ಲರಲ್ಲಿಯೂ ಹರ್ಷ ಮೂಡುತ್ತಿದೆ. ಹೊಸ ವರ್ಷ ಆಗಮಿಸಲು ಈಗಾಗಲೇ ಅನೇಕರು ಸಜ್ಜಾಗಿದ್ದಾರೆ. ವಿಶೇಷ ಎಂದರೆ, ಈ ಬಾರಿ ಹೊಸ ವರ್ಷ ಆಗಮಿಸುವ ಸಂಭ್ರಮಕ್ಕಿಂತ ಹಳೆ ವರ್ಷ ಮುಗಿಯಿತಲ್ಲ ಎಂಬ ಸಂಭ್ರಮ ಬಹುತೇಕರಲ್ಲಿ. 2020 ವರ್ಷಕ್ಕೆ ಕಾಲಿಟ್ಟಾಗ ಬಹುತೇಕರಲ್ಲಿ ಹರ್ಷ ಮೂಡಿತು. ಈ ಮೂಲಕ ಮತ್ತೊಂದು ದಶಕಕ್ಕೆ ಕಾಲಿಡುತ್ತಿರುವುದಕ್ಕೆ ಸಂಭ್ರಮಿಸಲಾಗಿತ್ತು. ಆದರೆ, ಈ ಸಂಭ್ರಮ ಕೆಲವೇ ತಿಂಗಳಲ್ಲಿ ಮಾಯಾವಾಗಿ ಈ ವರ್ಷ ಮುಗಿದರೆ ಸಾಕು ಎಂಬ ಉದ್ಘಾರ ಬಂದಿತ್ತು. ಇದಕ್ಕೆ ಕಾರಣ ಹಲವು. ಅದರಲ್ಲಿ ಮುಖ್ಯವಾದದ್ದು ಜಗತ್ತನ್ನೇ ಕಾಡಿದ ಕೊರೋನಾ ವೈರಸ್​ ಸೋಂಕು. ಕಾಡ್ಗಿಚ್ಚು, ಜಾಗತಿಕ ಸೋಂಕು, ಭೂ ಕಂಪ, ಚಂಡಮಾರುತ, ನಿಗೂಢವಾಗಿ ಕಣ್ಮರೆಯಾಗುತ್ತಿದ್ದ ಏಕಶಿಲೆಗಳು, ಎಲಿಯನ್ಸ್​ಗಳ ಸಂಕೇತಗಳು ಸೇರಿದಂತೆ ಹಲವು ಸಮಸ್ಯೆಗಳು ಪ್ರತಿಯೊಬ್ಬರನ್ನು ಕಾಡಿದ್ದು ಸುಳ್ಳಲ್ಲ.


ಇತಿಹಾಸದ ಅತ್ಯಂತ ವಿನಾಶಕಾರಿ ಅರಣ್ಯ ಬೆಂಕಿಗಳಲ್ಲಿ ಆಸ್ಟ್ರೇಲಿಯಾ ಕಾಡ್ಗಿಚ್ಚು ಪ್ರಮುಖವಾದದ್ದು. ಆಸ್ಟ್ರೇಲಿಯದ ದಕ್ಷಿಣ ಭಾಗದಲ್ಲಿ ಭೀಕರ ಕಾಡ್ಗಿಚ್ಚಿಗೆ ಅನೇಕ ಜೀವ ಸಂಕುಲ ಮೃತ ಮಟ್ಟವು. ಅಷ್ಟೇ ಅಲ್ಲದೇ ಅನೇಕ ಸಸ್ಯ ಸಂಪತ್ತುಗಳು ನಾಶವಾಗಿ, ಆರು ದಶಲಕ್ಷ ಹೆಕ್ಟೇರ್​ ಅರಣ್ಯ ನಾಶವಾಯಿತು.


ಹೊಸ ವರ್ಷದ ಸಂಭ್ರಮದಲ್ಲಿದ್ದ ಇಂಡೋನೇಷ್ಯಾದ ಜರ್ಕಾತ್​ನಲ್ಲಿ ಸುರಿದ ಭಾರೀ ಮಳೆಗೆ ನದಿಗಳು ಉಕ್ಕಿ ಹರಿದು ಪ್ರವಾಹ ನಿರ್ಮಾಣವಾಯಿತು. ಈ ಪ್ರವಾಹದಲ್ಲಿ ಅನೇಕ ಸಾವು ನೋವು ಜೊತೆ ಅಪಾರ ಆಸ್ತಿ ಕೂಡ ನಷ್ಟವಾಯಿತು.


ಅದರಲ್ಲಿಯೂ ಜಾಗತಿಕ ಸೋಂಕು ಪ್ರಪಂಚವನ್ನು ಕಾಡಿದ್ದು ಅಷ್ಟಿಷ್ಟಲ್ಲ. ಇಡೀ ದೇಶವೇ ಲಾಕ್​ಡೌನ್​ ಆಗುವ ಮೂಲಕ ಜನರು ಮನೆಯಲ್ಲಿಯೇ ಬಂದಿಯಾಗಿರಬೇಕಾಯಿತು. ಈ ವೇಳೆ ಅನೇಕರು ಈ ವರ್ಷ ಅದೆಷ್ಟು ಬೇಗ ಮುಗಿಯುತ್ತದೆ ಎಂಬ ಉದ್ಘಾರ ತೆಗೆದಿದ್ದು ಸುಳ್ಳಲ್ಲ. ಕಳೆದ ವರ್ಷದ ಅಂತ್ಯದಲ್ಲಿ ಚೀನಾದಲ್ಲಿ ಆರಂಭವಾದ ಈ ಸೋಂಕು ಈ ವರ್ಷ ಭಾರತ, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಕಾಡಿತು. ಇದಕ್ಕೆ ಇನ್ನು ಕೂಡ ಲಸಿಕೆ ಸಿಗದೇ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.


ಇದನ್ನು ಓದಿ: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ


ಇದಾದ ಬಳಿಕ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್​ನಲ್ಲಿ ಸುರಿದ ಭಾರೀ ಮಳೆಗೆ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋಯಿತು. ಪಶ್ಚಿಮ ಗೋದಾವರಿ ಜಿಲ್ಲೆಯ 55 ಗ್ರಾಮಗಳು ಪೂರ್ವ ಗೋದಾವರಿ 100 ಗ್ರಾಮಗಳು, ಕರ್ನಾಟಕದ 10 ಜಿಲ್ಲೆಗಳು ಮಹಾರಾಷ್ಟ್ರದ ದಕ್ಷಿಣ ಭಾಗದ ಜನರು ಪ್ರವಾಹಕ್ಕೆ ನಲುಗಿದರು.


ಇದಾದ ಬಳಿಕ ಅಪ್ಪಳಿಸಿದ ನಿವಾರ್​ ಚಂಡಮಾರುತ ಮತ್ತೆ ಆಂಧ್ರಪ್ರದೇಶ, ತಮಿಳುನಾಡನ್ನು ಕಾಡಿತು.

Published by:Seema R
First published: