ನಿಯಮಗಳ ಉಲ್ಲಂಘನೆಯಿಂದ ದೆಹಲಿಯಲ್ಲಿ ಕೊರೋನಾ ಉಲ್ಬಣ: ಸಮೀಕ್ಷೆಯಲ್ಲಿ ಬಹಿರಂಗ

ದೇಶದೆಲ್ಲೆಡೆ ನಿಯಂತ್ರಣಕ್ಕೆ ಬರುತ್ತಿರುವ ಕೊರೋನಾ ದೆಹಲಿಯಲ್ಲಿ ಮಾತ್ರ ಮೂರನೇ ಅಲೆಯಲ್ಲಿ ಬಂದಿದ್ದಕೆ ಎಂದು ಕಾರಣ ಹುಡುಕಲು ಕೇಜ್ರಿವಾಲ್​ ಸರ್ಕಾರದ ನೇತೃತ್ವದಲ್ಲಿ  ಸಮೀಕ್ಷೆ ನಡೆಸಲಾಗಿದೆ.

news18-kannada
Updated:November 21, 2020, 7:22 PM IST
ನಿಯಮಗಳ ಉಲ್ಲಂಘನೆಯಿಂದ ದೆಹಲಿಯಲ್ಲಿ ಕೊರೋನಾ ಉಲ್ಬಣ: ಸಮೀಕ್ಷೆಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ನ.‌ 21):  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾಮಾರಿ ಕೊರೋನಾ ಶರವೇಗದಲ್ಲಿ ಹರಡಲು ಜನರ ನಿರ್ಲಕ್ಷ್ಯವೇ ಕಾರಣ ಎಂದು ಆಮ್​ಆದ್ಮಿ ಸರ್ಕಾರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ದೇಶದೆಲ್ಲೆಡೆ ನಿಯಂತ್ರಣಕ್ಕೆ ಬರುತ್ತಿರುವ ಕೊರೋನಾ ದೆಹಲಿಯಲ್ಲಿ ಮಾತ್ರ ಮೂರನೇ ಅಲೆಯಲ್ಲಿ ಬಂದಿದ್ದಕೆ ಎಂದು ಕಾರಣ ಹುಡುಕಲು ಕೇಜ್ರಿವಾಲ್​ ಸರ್ಕಾರದ ನೇತೃತ್ವದಲ್ಲಿ  ಸಮೀಕ್ಷೆ ನಡೆಸಲಾಗಿದೆ. ಆ ಸಮೀಕ್ಷೆ ಪ್ರಕಾರ ಕೊರೋನಾ ಸೋಂಕು ಹರಡಲು  ಜನರು‌ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದೇ ಕಾರಣ ಎಂಬುದು ಬಹಿರಂಗವಾಗಿದೆ. ಈ ಕುರಿತು  ಪಶ್ಚಿಮ ದೆಹಲಿಯಲ್ಲಿ ಮನೆ ಮನೆಗೆ ತೆರಳಿ ಒಟ್ಟು 58 ಲಕ್ಷ ಜನರನ್ನು ಸಮೀಕ್ಷೆ ನಡೆಸಲಾಗಿದೆ.‌ ಸರ್ಕಾರ‌ ಸ್ವಯಂ ಸೇವಕರ ಮೂಲಕ ಈ ಸಮೀಕ್ಷೆ ಕಾರ್ಯ ನಡೆಸಲಾಗಿದ್ದು, ಜನರು ಕೋವಿಡ್​ಗೆ ಯಾವುದೇ ರೀತಿ ಹೆದರದೇ ಕೊರೋನಾ ನಿಯಮಾವಳಿಗಳನ್ನು ಉಲ್ಲಂಘನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ವಿಶೇಷ ಎಂದರ ಕೊರೊನಾ ಸೋಂಕಿತರಿಂದಲೇ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ತಿಳಿದುಬಂದಿದೆ. ‌ಸಮೀಕ್ಷೆ ವೇಳೆ ಹೊಂ ಐಸೂಲೇಷನ್ ನಲ್ಲಿದ್ದ ಹಲವು ಸೋಂಕಿತರು ಮನೆಯಲ್ಲಿ ಇರಲಿಲ್ಲ. ಇನ್ನು ಕೆಲವರು 17 ದಿನದ ಬದಲಿಗೆ 10 ದಿನ ಮಾತ್ರ ಕ್ವಾರಂಟೈನ್ ಆಗಿದ್ದರು. ಹಲವು ಮಂದಿ ಪಾರ್ಕ್‌ಗೆ ವ್ಯಾಯಾಮ ಮಾಡಲು, ಹಾಲು, ತರಕಾರಿ ಖರೀದಿ ಮಾಡಲು ಮಾರುಕಟ್ಟೆಗೆ ಹೋಗಿದ್ದರು, ಮತ್ತಷ್ಟು ಸೋಂಕಿತರು ಕಚೇರಿಗಳಿಗೆ ತೆರಳಿರುವ ಮಾಹಿತಿಗಳು ಕೂಡ ಲಭಿಸಿವೆ.

ಇದು ದೆಹಲಿ ಸರ್ಕಾರದ ಸಮೀಕ್ಷೆಯಾದರೂ ಇಡೀ ದೇಶಕ್ಕೆ ಮಾದರಿಯಾಗಿದೆ.  ಜನ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡದಿದ್ದರೆ ಈಗ ನಿಯಂತ್ರಣಕ್ಕೆ ಬಂದಿರುವ ಕೊರೊನಾ ಸೋಂಕು ಹರಡುವಿಕೆ ಮತ್ತೊಮ್ಮೆ ತೀವ್ರಗೊಳ್ಳುವ ಸಾಧ್ಯತೆ ಇದೆ‌.

ಇದನ್ನು ಓದಿ: 2021ರ ಚುನಾವಣೆಗೂ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ; ಪನ್ನೀರ್​ಸೆಲ್ವಂ

ದೆಹಲಿಯಲ್ಲಿ ಸೋಂಕು ತಡೆಯಲು ಮುಂದಾಗಿರುವ ಕೇಜ್ರಿವಾಲ್​ ಮಾಸ್ಕ್​ ಕಡ್ಡಾಯಕ್ಕೆ ಸೂಚಿಸಿದ್ದು, ಮಾಸ್ಕ್​ ಧರಿಸದವರಿಂದ ಭಾರೀ ದಂಡ ಪಡೆಯಲು ಮುಂದಾಗಿದೆ. ಈ ಹಿಂದೆ ಮಾಸ್ಕ್​ ಧರಿಸದವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿತ್ತು. ಆದರೆ, ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಆದೇಶ ಹೊರಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಸ್ಕ್​ ಧರಿಸದವರ ದಂಡದ ಪ್ರಮಾಣವನ್ನು 500 ರೂಪಾಯಿಯಿಂದ 2,000 ಕ್ಕೆ ಏರಿಕೆ ಮಾಡಿದ್ದಾರೆ.

ಕೊರೋನಾ ರೋಗಿಗಳಿಗೆ ಆದಷ್ಟು ಗರಿಷ್ಠ ಆರೈಕೆ ನೀಡಲು ಸರ್ಕಾರವು ತುರ್ತು ಪರಿಸ್ಥಿತಿಯ ಶಸ್ತ್ರಚಿಕಿತ್ಸೆ ಬಿಟ್ಟು ಬೇರೆ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತಗೊಳಿಸುವಂತೆ ಆಸ್ಪತ್ರೆಗಳನ್ನು ಒತ್ತಾಯಿಸಿದೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಐಸಿಯು ಹಾಸಿಗೆಗಳಲ್ಲಿ ಶೇ.80 ಮತ್ತು ಐಸಿಯು ಅಲ್ಲದ ಹಾಸಿಗೆಗಳಲ್ಲಿ ಶೇ.60 ಹಾಸಿಗೆಗಳನ್ನು ಕೊರೋನಾ ಸೋಂಕಿತ ರೋಗಿಗಳಿಗೆ ಕಾಯ್ದಿರಿಸಲು ತಿಳಿಸಲಾಗಿದೆ.
Published by: Seema R
First published: November 21, 2020, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading