HOME » NEWS » National-international » CORONA MATA TEMPLE BUILT IN UTTARAPRADESH PRAYAGRAJ SESR

ಭಯಕ್ಕಲ್ಲ; ಜಮೀನಿನ ಆಸೆಗೆ ರಾತ್ರೋ ರಾತ್ರಿ ಕೊರೋನಾ ಮಾತೆ ದೇವಸ್ಥಾನ ಕಟ್ಟಿಸಿದ ಗ್ರಾಮಸ್ಥರು

ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ

news18-kannada
Updated:June 12, 2021, 9:50 PM IST
ಭಯಕ್ಕಲ್ಲ; ಜಮೀನಿನ ಆಸೆಗೆ ರಾತ್ರೋ ರಾತ್ರಿ ಕೊರೋನಾ ಮಾತೆ ದೇವಸ್ಥಾನ ಕಟ್ಟಿಸಿದ ಗ್ರಾಮಸ್ಥರು
ಕೊರೋನಾ ಮಾತೆ ದೇವಸ್ಥಾನ
  • Share this:
ಕೋವಿಡ್​ ಸಾಂಕ್ರಾಮಿಕ ಸೋಂಕಿನಿಂದ ಕಂಗೆಟ್ಟಿರುವ ಜನರು ಮೂಢನಂಬಿಕೆಯತ್ತ ಮೊರೆ ಹೋಗುತ್ತಿರುವ ಘಟನೆಗಳು ನಡೆಯುತ್ತಲೇ ಇದೆ. ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕಣ್ಣಿಗೆ ಕಾಣದ ವೈರಸ್​ ಕೊರೋನಾಗೆ ಇಡೀ ಮನುಷ್ಯ ಸಂಕುಲ ಬೆಚ್ಚಿದೆ. ಈ ವೈರಸ್​ ಹರಡದಂತೆ ಜನರ ರಕ್ಷಣೆಗೆ ಸರ್ಕಾರ ಲಾಕ್​ಡೌನ್​ ನಂತಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಸೋಂಕಿನಿಂದ ಕಾಪಾಡುವಂತೆ ಜನರು ಮೊರೆ ಹೋಗುತ್ತಿರುವ ನಡುವೆಯೇ ಉತ್ತರ ಪ್ರದೇಶದ ಜನರು ಸೋಂಕಿಗೆ ದೇವರ ಸ್ಥಾನ ನೀಡಿರುವ ಅಪರೂಪದ ಘಟನೆ ನಡೆದಿದೆ.   ಪ್ರಯಾಗ್​ ರಾಜ್​ನ ಶುಕ್ಲುಪುರ್​​ ಗ್ರಾಮದಲ್ಲಿ ಕೊರೋನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೋನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಮಂದಿ ಕೊರೋನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ.

ಕೊರೋನಾ ಭಯದಿಂದಾಗಿ ಜನರು ಮೂಢನಂಬಿಕೆಗೆ ಒಳಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು. ಇದರ ಹಿಂದೆ ವ್ಯಕ್ತಿಯೊಬ್ಬನ ಸ್ವ ಹಿತಾಸಕ್ತಿ ಕೂಡ ಇದೆ. ಗ್ರಾಮದ ಜನರಿಗೆ ಕೊರೋನಾ ಭಯ ಮೂಡಿಸಿ. ತನ್ನ ವಿರೋಧಿಯ ಭೂಮಿ ಒತ್ತುವರಿ ನಡೆಸಿದ್ದಾರೆ. ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು   ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿನ ದೇವಾಲಯವನ್ನು ಕೆಡವಿದೆ.

ಗ್ರಾಮದಲ್ಲಿನ ಸೋಂಕು ನಿವಾರಣೆಯಾಗುವಂತೆ ರಾತ್ರೋ ರಾತ್ರಿ ಇಲ್ಲಿನ ಗ್ರಾಮಸ್ಥರು ದೇವರ ಗುಡಿ ಕಟ್ಟಿದ್ದರು. ಈ ದೇವಾಲಯವನ್ನು ಬೆಳಗಾಗುವುದರೊಳಗೆ ಧ್ವಂಸ ಮಾಡಲಾಗಿದೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಭೂಮಿ ವಿವಾದಕ್ಕೆ ಕೊರೋನಾ ದೇವಿ ದೇವಾಲಯ
ಪೊಲೀಸರು ಹೇಳುವ ಪ್ರಕಾ ಎರಡು ಕುಟುಂಬದ ನಡುವೆ ಭೂಮಿ ವಿವಾದವಿದ್ದು, ಇದೇ ಕಾರಣಕ್ಕೆ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಈ ಬಗ್ಗೆ ಮತ್ತೊಂದು ಗುಂಪು ದೂರು ಕೂಡ ನೀಡಿದೆ ಎಂದಿದ್ದಾರೆ. ಕಳೆದ ಐದು ದಿನಗಳ ಹಿಂದೆ ಸ್ಥಳೀಯರ ಸಹಾಯದಿಂದ ಲೊಕೇಶ್​ ಕುಮಾರ್ ಶ್ರೀವಾತ್ಸವ ಇಲ್ಲಿ ಮಂದಿರ ಕಟ್ಟಿಸಿದ್ದರು. ಕೊರೋನಾ ಮಾತೆಯ ಮೂರ್ತಿಯನ್ನು ಕೂರಿಸಿ , ರಾಧೆ ಶ್ಯಾಮ್​ ವರ್ಮ್​ ಎಂಬ ಪುರೋಹಿತನನ್ನು ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜನರು ದೇವರ ಆರಾಧನೆಗೆ ಮುಂದಾದರು.

ಇದನ್ನು ಓದಿ: ಮಂಡ್ಯ ಬಳಿಕ ತಮಿಳುನಾಡಿನಲ್ಲಿ ಕೊರೋನಾ ದೇವಿಗೆ ವಿಶೇಷ ಪೂಜೆ; ಕೊಯಿಮತ್ತೂರಿನಲ್ಲಿ ದೇವಾಲಯ ನಿರ್ಮಾಣ

ನೋಯ್ಡ ಮೂಲಕ ನಾಗೇಶ್​ ಕುಮಾರ್​ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್​ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್​ ಪೊಲೀಸರಿಗೆ ದೂರು ನೀಡಿದ್ದರು.ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Seema R
First published: June 12, 2021, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories