45 ದಿನ ಕೋಮಾದಲ್ಲಿದ್ದ Corona ಸೋಂಕಿತೆಗೆ ಸಂಜೀವಿನಿಯಾದ Viagra

ಕೊರೊನಾ ಸೋಂಕು ತಗುಲಿ ಕಳೆದ 45 ದಿನಗಳಿಂದ ಕೋಮಾ ಸೇರಿದ್ದ ನರ್ಸ್ ಒಬ್ಬರನ್ನು ವೈದ್ಯರು ವಯಾಗ್ರ (Viagra) ಔಷಧಿ ನೀಡಿದ್ದಾರೆ. ಔಷಧಿ ನೀಡಿದ ಪರಿಣಾಮ ನರ್ಸ್ (Nurse) ಕೋಮಾದಿಂದ ಹೊರ ಬಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರೋಗಿಯ ಜೀವ (Patient Life) ಉಳಿಸಲು ವೈದ್ಯರು (Doctors) ಕೊನೆ ಕ್ಷಣದವರೆಗೂ ಹೋರಾಡುತ್ತಾರೆ. ರೋಗಿಯ ಆರೋಗ್ಯ (Health) ಚೇತರಿಕೆಗಾಗಿ ವೈದ್ಯರು ಕೆಲವೊಮ್ಮೆ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗುತ್ತಾರೆ. ಕಳೆದ ಎರಡು ವರ್ಷಗಳಿಂದ ಎಷ್ಟೋ ಜನ ಕೊರೊನಾದಿಂದ (Corona Virus) ಸಾವನ್ನಪ್ಪಿದ್ದಾರೆ. ಗುಣಮುಖರಾದವರು ಮಹಾಮಾರಿಯ ಸೈಡ್ ಎಫೆಕ್ಟ್ ನಿಂದ (COVID Side Effects) ನರಳುತ್ತಿದ್ದಾರೆ. ಕೊರೊನಾ ಸೋಂಕು ತಗುಲಿ ಕಳೆದ 45 ದಿನಗಳಿಂದ ಕೋಮಾ ಸೇರಿದ್ದ ನರ್ಸ್ ಒಬ್ಬರನ್ನು ವೈದ್ಯರು ವಯಾಗ್ರ (Viagra) ಔಷಧಿ ನೀಡಿದ್ದಾರೆ. ಔಷಧಿ ನೀಡಿದ ಪರಿಣಾಮ ನರ್ಸ್ (Nurse) ಕೋಮಾದಿಂದ ಹೊರ ಬಂದಿದ್ದಾರೆ.

ಕೊರೊನಾದಿಂದ ಕೋಮಾಕ್ಕೆ ಹೋಗಿದ್ದ ಮಹಿಳಾ ನರ್ಸ್ ವಯಾಗ್ರ ಬಳಸದಂತೆ ರಕ್ಷಿಸಲಾಗಿದೆ. ವೃತ್ತಿಯಲ್ಲಿ ನರ್ಸ್ ಆಗಿದ್ದ 37 ವರ್ಷದ ಮೋನಿಕಾ ಅಲ್ಮೇಡಾ 45 ದಿನಗಳ ಕಾಲ ಕೋಮಾದಲ್ಲಿದ್ದರು. ವಯಾಗ್ರ ಸಹಾಯದಿಂದ ವೈದ್ಯರು ಅವರನ್ನು ಕೋಮಾದಿಂದ ಹೊರತೆಗೆದರು. ಮೋನಿಕಾ ಅವರ ಸಹೋದ್ಯೋಗಿಗಳ ಈ ಪ್ರಯೋಗಕ್ಕೆ ಮೆಚ್ಚಗೆ ವ್ಯಕ್ತವಾಗಿದೆ.

ಇದನ್ನೂ ಓದಿ:  Lottery: ಶುಭಾಶಯ ಕೋರಿ ಒಂದು ಲಾಟರಿ ಟಿಕೆಟ್ ಕಳ್ಸಿದ್ರು, 7 ಕೋಟಿ ರೂ ಗೆದ್ದೇಬಿಟ್ಟ Lucky Fellow!

ಆಮ್ಲಜನಕ ಮಟ್ಟ ಅರ್ಧಕ್ಕಿಂತ ಕಡಿಮೆಯಾಗಿತ್ತು

'ದಿ ಸನ್' ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ತಮಗೆ ಪ್ರಜ್ಞೆ ಬಂದ ನಂತರ ಮೋನಿಕಾ ಅವರು ವೈದ್ಯರು ಮತ್ತು ಅವರ ಸಹೋದ್ಯೋಗಿಗಳಿಗೆ ಧನ್ಯವಾದ ಹೇಳಿದ್ದಾರೆ. ಮೋನಿಕಾ ಅವರ ಆಮ್ಲಜನಕದ ಮಟ್ಟವು ಅರ್ಧಕ್ಕಿಂತ ಕಡಿಮೆಯಾಗಿತ್ತು. ಅದು ಹಂತ ಹಂತವಾಗಿ ಕಡಿಮೆಯಾಗುತ್ತಿತ್ತು.

ಅಪಾರ ಪ್ರಮಾಣದ ವಯಾಗ್ರ ನೀಡಿದ ವೈದ್ಯರು

ಇಂಗ್ಲೆಂಡಿನ ಗೇನ್ಸ್‌ಬರೋ ಲಿಂಕನ್‌ಶೈರ್‌ನ ನಿವಾಸಿ ನರ್ಸ್ ಮೋನಿಕಾ ಮಾತನಾಡಿ, ನನಗೆ ಪ್ರಜ್ಞೆ ಬಂದಾಗ ವೈದ್ಯರು ವಯಾಗ್ರದ ಸಹಾಯದಿಂದ ನಾನು ಕೋಮಾದಿಂದ ಹೊರ ಬಂದಿರುವ ವಿಷಯ ತಿಳಿಸಿದರು. ಮೊದಲಿಗೆ ನನಗೆ ಇದೆಲ್ಲ ತಮಾಷೆಯಾಗಿ ಕಂಡಿತು. ನಂತರ ವೈದ್ಯರು ಮತ್ತು ನನ್ನ ಸಹದ್ಯೋಗಿಗಳು ಅಪಾರ ಪ್ರಮಾಣದಲ್ಲಿ ವಯಾಗ್ರ ನೀಡಿರುವ ವಿಷಯ ತಿಳಿಸಿದರು ಎಂದು ಮೋನಿಕಾ ಹೇಳುತ್ತಾರೆ.

ರಕ್ತದ ವಾಂತಿ

ಮೋನಿಕಾ NHS ಲಿಂಕನ್‌ಶೈರ್‌ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅಕ್ಟೋಬರ್‌ನಲ್ಲಿ ಮೋನಿಕಾ ಅವರಿಗೆ ಕೊರೊನಾ ಸೋಂಕು ತಗುಲಿತು. ನಂತರ ಕ್ರಮೇಣ ಮೋನಿಕಾ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣವಾಗತೊಡಗಿತು. ಇದಾದ ಬಳಿಕ ಮೋನಿಕಾ ಅವರಿಗೆ ರಕ್ತದ ವಾಂತಿ ಸಹ ಆಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Babysitters: ತನ್ನನ್ನು ಮಗು ಥರಾ ನೋಡ್ಕೊಂಡು, ಡೈಪರ್​ ಬದಲಿಸೋಕೆ ಅಂತಲೇ ಜನರನ್ನು ನೇಮಿಸಿಕೊಂಡ 31 ವರ್ಷದ ವ್ಯಕ್ತಿ, ಈಗ ಜೈಲಿಗೆ!

ರಕ್ತದ ವಾಂತಿ ಬಳಿಕ ಮೋನಿಕಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ . ಅದರ ನಂತರ ಅವರನ್ನು ನೇರವಾಗಿ ಲಿಂಕನ್ ಕೌಂಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಚಿಕಿತ್ಸೆ ಆರಂಭಿಸಲಾಯಿತು ಆಮ್ಲಜನಕದ ಮಟ್ಟವು ನಿರಂತರವಾಗಿ ಕುಸಿಯಲಾರಂಭಿಸಿದರಿಂದ ಮೋನಿಕಾ ಅವರನ್ನು ICU ಗೆ ಸೇರಿಸಬೇಕಾಯಿತು.

ವಯಾಗ್ರ ಬಳಕೆಯು ರಕ್ತ ಪರಿಚಲನೆ ಸುಧಾರಣೆ

ನವೆಂಬರ್ 16 ರಂದು ಮೋನಿಕಾ ಕೋಮಾಕ್ಕೆ ಹೋಗಿದ್ದರು. ಮೋನಿಕಾ ಚಿಕಿತ್ಸೆಗಾಗಿ ವೈದ್ಯರು ವಿಭಿನ್ನ ಉಪಾಯವನ್ನು ಕಂಡುಕೊಂಡರು. ಮತ್ತು ವಯಾಗ್ರ ಔಷಧದಿಂದ ಚಿಕಿತ್ಸೆ ನೀಡಿದರು. ವಾಸ್ತವವಾಗಿ ವಯಾಗ್ರ ಬಳಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ವಯಾಗ್ರ ಶ್ವಾಸಕೋಶದಲ್ಲಿ ಫಾಸ್ಫೋಡಿಸ್ಟರೇಸ್ ಕಿಣ್ವಗಳನ್ನು ಉತ್ಪಾದಿಸುತ್ತದೆ ಮತ್ತು ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ಶ್ವಾಸಕೋಶವನ್ನು ವಿಶ್ರಾಂತಿ ಮಾಡಲು ಕೆಲಸ ಮಾಡುತ್ತದೆ.

ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೋನಿಕಾ

ವಯಾಗ್ರ ಔಷಧಿಯೇ ನನ್ನ ಜೀವ ಉಳಿಸಿದೆ. 48 ಗಂಟೆಗಳಲ್ಲಿ ನನ್ನ ಶ್ವಾಸಕೋಶಗಳು ಕೆಲಸ ಮಾಡಲು ಪ್ರಾರಂಭಿಸಿದವು. ನನಗೂ ಅಸ್ತಮಾ ಇದೆ, ಇದರಿಂದಾಗಿ ನನ್ನ ಆಮ್ಲಜನಕದ ಮಟ್ಟ ಕಡಿಮೆಯಾಗುತ್ತಿದೆ. ಈಗ ಮೋನಿಕಾ ಮೊದಲಿಗಿಂತ ಉತ್ತಮವಾಗಿದ್ದಾರೆ. ಸದ್ಯ ಮನೆಗೆ ಹಿಂದಿರುಗಿರುವ ಮೋನಿಯಾ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
Published by:Mahmadrafik K
First published: